Kajal Aggarwal Talks On Bikini Scenes
- ಮಗ ನನ್ನ ಸಿನಿಮಾ ನೋಡಿದಾಗ ಆತನಿಗೆ ಯಾವುದೇ ಮುಜುಗರ ಉಂಟಾಗದಂತಹ ಸಿನಿಮಾಗಳನ್ನು ಮಾಡುತ್ತೇನೆ
- ಮಗನಿಗೆ ಈಗಾಗಲೇ ರಾಮಾಯಣದ ಕತೆಗಳು ಹಾಗೂ ಹನುಮಾನ್ ಚಾಲೀಸಾ ಪಠಿಸುತ್ತಾನೆ ಎಂದ ಕಾಜಲ್
- ದೊಡ್ಡ ಸಿನಿಮಾಗಳು ಕೈತಪ್ಪಿದರೂ ಬಿಕಿನಿ ಮತ್ತು ಅತಿಯಾದ ಆಪ್ತ ದೃಶ್ಯಗಳಿಂದ ದೂರ ಉಳಿದ ಕಾಜಲ್.
Kajal Aggarwal Talks On Bikini Scenes: ಸಿನಿಮಾದಲ್ಲಿ ಬಿಕಿನಿ ತೊಟ್ಟು ನಟಿಸುವ ಹಾಗೂ ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಜೊತೆಗೆ ತಾಯಿಯಾದ ನಂತರ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಸೌತ್ ಇಂಡಿಯಾದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಮಾತನಾಡಿದ್ದಾರೆ.
ಸಿನಿಮಾ ರಂಗದಲ್ಲಿ ಈಗೀಗ ಮಹಿಳೆಯರ ಪಾತ್ರಗಳ ಬಗ್ಗೆ ಭಾರಿ ಚರ್ಚೆಯುಂಟಾಗುತ್ತಿದೆ. ಕೆಡಿ ಸಿನಿಮಾದ ಹಾಡಿನ ವಿವಾದ ಹಾಗೂ ಪೆದ್ದಿ ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರನ್ನು ತೋರ್ಪಡಿಸಿದ ರೀತಿ ಬಗ್ಗೆ ಭಾರಿ ಟೀಕೆಗಳು ಕೇಳಿ ಬಂದಿದ್ದವು ಸದ್ಯ ಈ ಮಧ್ಯೆ ಕಾಜಲ್ ಅವರು ಸಿನಿಮಾ ಆಯ್ಕೆ ಹಾಗೂ ಬಟ್ಟೆ ತೊಡುವ ಬಗ್ಗೆ ಪತ್ರಕರ್ತ ಶುಭಂಕರ್ ಮಿಶ್ರಾ ಅವರ ಪಾಡ್ಕಾಸ್ಟ್ನಲ್ಲಿ ಮಾತನಾಡಿರುವ ಕೆಲವು ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಿನಿಮಾ ಆಯ್ಕೆ ಮಾಡುವ ವಿಚಾರದಲ್ಲಿ ನನ್ನದೇ ಆದ ವೈಯಕ್ತಿಕ ಗಡಿಗಳಿವೆ. ನಾನು ಯಾವುದೇ ಸಿನಿಮಾದಲ್ಲಿ ಬಿಕಿನಿ ದೃಶ್ಯಗಳನ್ನು ಮಾಡಿಲ್ಲ. ಕೆಲವು ಅನಗತ್ಯ ದೃಶ್ಯಗಳಿದ್ದ ಸಿನಿಮಾವನ್ನು ನಾನು ರಿಜೆಕ್ಟ್ ಮಾಡಿದ್ದೇನೆ. ವೃತ್ತಿಜೀವನದಲ್ಲಿ ನನಗೇ ಆದ ಕೆಲವು ವೈಯಕ್ತಿಕ ಗಡಿಗಳು ಇವೆ ಎಂದು ಮಾತನಾಡಿದ್ದಾರೆ.
ನನ್ನ ಸಿನಿಮಾ ಮಗನಿಗೆ ಮುಜುಗರವಾಗದಂತೆ ನೋಡಿಕೊಳ್ಳುವೆ
ನಾನೀಗ ಒಬ್ಬ ಮಗನ ತಾಯಿ. ಭವಿಷ್ಯದಲ್ಲಿ ನನ್ನ ಮಗ ನನ್ನ ಸಿನಿಮಾ ನೋಡುವಾಗ ಆತನಿಗ್ಯಾವುದೇ ಮುಜುಗರವಾಗ ಕೂಡದು. ಅರಾಮವಾಗಿ ಸಿನಿಮಾ ನೋಡಬೇಕು. ನನ್ನ ಮಗ ನನ್ನ ಸಿನಿಮಾಗಳನ್ನು ಅತ್ಯಂತ ಹೆಮ್ಮೆಯಿಂದ ನೋಡಬೇಕು ಅಷ್ಟೇ ನನ್ನ ಆಸೆ ಎಂದು ಅವರು ಹೇಳಿದ್ದಾರೆ.
ಹನುಮಾನ್ ಚಾಲೀಸಾ ಪಠಿಸುತ್ತಾನೆ
ಅಷ್ಟೇ ಅಲ್ಲದೇ ಕಾಜಲ್ ಅಗರ್ವಾಲ್ ಅವರು ತಮ್ಮ 4 ವರ್ಷದ ಮಗ ನೀಲ್ಗೆ ಈಗಾಗಲೇ ರಾಮಾಯಣ ಹಾಗೂ ಮಹಾಭಾರತದ ಕತೆಗಳನ್ನು ಹೇಳಿದ್ದಾರಂತೆ ಅಲ್ಲದೆ, ಆತ ಹನುಮಾನ್ ಚಾಲೀಸಾವನ್ನು ಕೂಡ ನಿರರ್ಗಳವಾಗಿ ಪಠಿಸುತ್ತಾನೆ ಎಂದು ಹೇಳಿಕೊಂಡಿದ್ದಾರೆ. ಸೌತ್ ಇಂಡಿಯಾದ ಬೇಡಿಕೆಯ ನಟಿಯಾಗಿದ್ದರೂ ಸಹ ಅವರು ತಮ್ಮ ಮಗನಿಗೆ ಉತ್ತಮ ಸಂಸ್ಕಾರ ನೀಡುತ್ತಿರುವುದು ಅಭಿಮಾನಿಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಕಾಜಲ್ ಸಿನಿ ಪಯಣ
ಕಾಜಲ್ ಅಗರ್ವಾಲ್ ತೆಲುಗು, ತಮಿಳು ಮತ್ತು ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ದಕ್ಷಿಣ ಭಾರತೀಯ ಚಿತ್ರರಂಗದ ಅತಿ ಹೆಚ್ಚು ಸಂಭಾವನೆ ಪಡೆಯುವ ಜನಪ್ರಿಯ ನಟಿಯರಲ್ಲಿ ಒಬ್ಬರು. 2004ರಲ್ಲಿ ಬಾಲಿವುಡ್‌ನ ‘ಕ್ಯೂನ್! ಹೋ ಗಯಾ ನಾ...’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದ ಕಾಜಲ್, ‘ಮಗಧೀರ’ (2009) ಚಿತ್ರದ ಯಶಸ್ಸಿನ ಮೂಲಕ ದಕ್ಷಿಣ ಭಾರತದಲ್ಲಿ ಸ್ಟಾರ್ ನಟಿಯಾಗಿ ಹೊರಹೊಮ್ಮಿದರು. 2020 ರಲ್ಲಿ ಕಾಜಲ್ ಅಗರ್ವಾಲ್ ಅವರು ಉದ್ಯಮಿ ಗೌತಮ್ ಕಿಚ್ಲು ಅವರನ್ನು ವಿವಾಹವಾದರು. ಈ ದಂಪತಿಗೆ 2022 ರಲ್ಲಿ ನೀಲ್ ಎಂಬ ಮಗ ಇದ್ದಾನೆ, (ಏಜೆನ್ಸೀಸ್).