ಸಿನಿವಾಣಿ

ಹಾಟ್​ ಫೋಟೋ-ವಿಡಿಯೋಗಳನ್ನು ಮಾರಾಟಕ್ಕಿಟ್ಟ ಖ್ಯಾತ ನಟಿ: ಜಾಲತಾಣದಲ್ಲಿ ಈಕೆಯದ್ದೇ ಸದ್ದು! South Actress

South Actress : ಕ್ಷಣ ಕ್ಷಣ, ಗನ್​ ಮತ್ತು ಮಾಣಿಕ್ಯ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ಕಿರಣ್​ ರಾಥೋಡ್ ಅವರು ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಆದರೆ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದು, ಅಲ್ಲಿನ ಮಂದಿಗೆ ಹೆಚ್ಚು ಹತ್ತಿರವಾಗಿದ್ದಾರೆ. ತಮ್ಮ ಬೋಲ್ಡ್​ ಪಾತ್ರಗಳಿಂದಲೂ ಕಿರಣ್​ ಖ್ಯಾತಿ ಪಡೆದಿದ್ದರು. ಅವಕಾಶಗಳಿಲ್ಲದೇ ಸಿನಿ ಲೋಕದಿಂದ ದೂರವಿರುವ ಕಿರಣ್​, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ಇದೀಗ ಸಿನಿಮಾಗಳತ್ತ ಮತ್ತೆ ಮುಖ ಮಾಡಿದ್ದಾರೆ.

2016 ರಿಂದ ಕಿರಣ್ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಈ ಸಮಯದಲ್ಲಿ ಕಿರಣ್ ರಾಥೋಡ್ ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಹಾಟ್ ಚಿತ್ರಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಹಾಟ್​​ಲುಕ್ ನಲ್ಲಿರುವ ನಟಿಯ ಚಿತ್ರಗಳು ಬಿಸಿ ಕೇಕ್​ನಂತೆ ಮಾರಾಟವಾಗುತ್ತಿವೆ.

2022ರಲ್ಲಿ, ಕಿರಣ್ ರಾಥೋಡ್​ ಅವರು ಚಂದಾದಾರಿಕೆ ಅಪ್ಲಿಕೇಶನ್ ಒಂದನ್ನು ಪ್ರಾರಂಭಿಸಿದರು. ಈ ಆ್ಯಪ್​ನಲ್ಲಿ ಕಿರಣ್​ ತಮ್ಮ ಹಾಟ್ ಚಿತ್ರಗಳು ಮತ್ತು ವಿಡಿಯೋಗಳನ್ನು ಅಪ್​ಲೋಡ್​ ಮಾಡುತ್ತಿದ್ದಾರೆ. ಅಂದಹಾಗೆ, ಕಿರಣ್​ ತಮ್ಮ ಅಭಿಮಾನಿಗಳಿಗಾಗಿ kiran.celebgaze.in ಎಂಬ ಆ್ಯಪ್​ ಮತ್ತು ವೆಬ್​ಸೈಟ್​ ತೆರೆದಿದ್ದಾರೆ. ಮೊಬೈಲ್​ನಲ್ಲಿ ಈ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕಾದರೆ 49 ರೂ. ಪಾವತಿಸಬೇಕು. ಆ್ಯಪ್​ ಮೂಲಕ ನೀವು ಸಾವಿರಾರು ರೂಪಾಯಿ ಪಾವತಿಸಿದರೆ ಕಿರಣ್​ ಅವರು ಗ್ಲಾಮರಸ್​ ಫೋಟೋಗಳನ್ನು ಕಳುಹಿಸಲಿದ್ದಾರಂತೆ. ಈಗಾಗಲೇ ಹಣ ಪಡೆಯುವ ಮೂಲಕ ಅಭಿಮಾನಿಗಳಿಗೆ ತಮ್ಮ ಗ್ಲಾಮರಸ್​ ಅವತಾರವನ್ನು ಕಿರಣ್​ ರಾಥೋಡ್​ ಅನಾವರಣಗೊಳಿಸಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಗ್ಲಾಮರಸ್​ ಫೋಟೋಗಳು ಸಣ್ಣ ಝಲಕ್​ ಅನ್ನು ಕಿರಣ್​ ಹರಿಬಿಡುತ್ತಿರುತ್ತಾರೆ. ಮತ್ತಷ್ಟು ಹಾಟ್​ ಅವತಾರಕ್ಕಾಗಿ ಆ್ಯಪ್​ ಮೊರೆ ಹೋಗಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಸದ್ಯ ಈ ಅಪ್ಲಿಕೇಶನ್​ಗೆ ಅನೇಕ ಫಾಲೋವರ್ಸ್​ ಕೂಡ ಇದಾರೆ.

ಇದೇ ಸಂದರ್ಭದಲ್ಲಿ ಕಿರಣ್, ಹಲವು ವರ್ಷಗಳ ನಂತರ ನಟಿ ವನಿತಾ ವಿಜಯಕುಮಾರ್ ನಟಿಸಿದ ಮಿಸ್ಟರ್ ಅಂಡ್ ಮಿಸೆಸ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಈ ಚಿತ್ರ ಜುಲೈ 4 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಹೀಗಾಗಿ, ಕಿರಣ್ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದ್ದಾರೆ. ಅವರು ಸಿನಿಮಾಗಳಲ್ಲಿ ಮುಂದುವರಿಯುತ್ತಾರೋ ಅಥವಾ ಅಪ್ಲಿಕೇಶನ್‌ನೊಂದಿಗೆ ಮುಂದುವರಿಯುತ್ತಾರೋ ಎಂಬುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಬಯಸಿದ್ದಾರೆ. (ಏಜೆನ್ಸೀಸ್​)