ಮುಂಬೈ: 2018 ರಲ್ಲಿ ಉದ್ಯಮಿ ಆನಂದ್ ಅಹೂಜಾ ಅವರನ್ನು ಮದುವೆಯಾದ ನಟಿ ಸೋನಮ್ ಕಪೂರ್ ಅವರು ಮಾರ್ಚ್ 21 ರಂದು ತಾವು ಪ್ರೆಗ್ನೆಂಟ್ ಆಗಿರುವ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದರು. ಆಗ, ಅನೇಕ ಬಾಲಿವುಡ್ ಮಂದಿ ನಟಿ ಸೋನಮ್ ಕಪೂರ್ಗೆ ಶುಭಾಶಯ ಕೋರಿದ್ದರು. ಇನ್ನು, ಪ್ರೆಗ್ನೆಂಟ್ ಆದ ನಟಿಮಣಿಯರು ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸುವುದು ಸಹಜ. ಹಾಗೆ, ನಟಿ ಸೋನಮ್ ಕಪೂರ್ ಅವರು ಸಹ ಫೋಟೋಶೂಟ್ ಮಾಡಿಸಿದ್ದಾರೆ.
ಆದರೆ, ಸೋನಮ್ ಅವರ ಪ್ರೆಗ್ನೆನ್ಸಿ ಫೋಟೋಶೂಟ್ ವಿಭಿನ್ನವಾಗಿದೆ. ಬಿಳಿ ಬಣ್ಣದ ಸೀರೆಯನ್ನು ರಾಜರ ಕಾಲದಲ್ಲಿ ಹೆಂಗಸರು ಸೀರೆ ಉಡುವ ರೀತಿಯಲ್ಲಿ ನಟಿ ಸೋನಮ್ ಅವರು ಸಹ ರಾಯಲ್ ಸೀರೆಯನ್ನು ಉಟ್ಟು ಫೋಟೋಶೂಟ್ ಮಾಡಿಸಿದ್ದಾರೆ. ತಮ್ಮ ಫೋಟೋಶೂಟ್ನ ಫೋಟೋಗಳನ್ನು ಅವರ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ನಟಿಯ ಅಭಿಮಾನಿ ವಲಯದಲ್ಲಿ ಅವು ಸಖತ್ ವೈರಲ್ ಆಗುತ್ತಿವೆ. ಸೋನಮ್ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಂಡ ಕೆಲ ಗಂಟೆಗಳಿಗೆ ಬರೋಬ್ಬರಿ ನಾಲ್ಕು ಲಕ್ಷಕ್ಕೂ ಹೆಚ್ಚು ಲೈಕ್ಸ್ ಹರಿಬಂದಿವೆ.