ಮುಂಬೈ: ಬಾಲಿವುಡ್ ನಟಿ, ಮಾಜಿ ಬ್ಲೂಫಿಲಂ ತಾರೆ ಸನ್ನಿ ಲಿಯೋನ್ಗೆ ಈಗ ಕರೊನಾ ಕೊರಗು ಕಾಡಿದೆ. ಕರೊನಾ ವೈರಸ್ Covid19 ಸೋಂಕು ಎಲ್ಲೆಡೆ ವ್ಯಾಪಿಸಿದ್ದು, ಮುಂಜಾಗ್ರತಾ ಕ್ರಮವನ್ನು ಕಟ್ಟುನಿಟ್ಟಾಗಿ ತೆಗೆದುಕೊಳ್ಳಬೇಕೆಂಬುದು ವೇದ್ಯ ವಿಚಾರ. ಸರ್ಕಾರದ ಆದೇಶವೂ ಇರುವ ಕಾರಣ ಇದು ಅನಿವಾರ್ಯ. ಹೀಗಾಗಿ ತಮ್ಮ ಸಂಕಟ, ಅಳಲನ್ನು ಇನ್ಸ್ಟಾಗ್ರಾಂನಲ್ಲಿ ತೋಡಿಕೊಂಡಿದ್ದಾರೆ ಸನ್ನಿ ಲಿಯೋನ್ !
ಇನ್ಸ್ಟಾಗ್ರಾಮ್ನಲ್ಲಿ ಕುಟುಂಬದ ಸದಸ್ಯರೊಂದಿಗಿರು ಫೋಟೊ ಅಪ್ಲೋಡ್ ಮಾಡಿರುವ ಸನ್ನಿ ಲಿಯೋನ್, ಈ ರೀತಿ ಬದುಕಬೇಕಾದ ಸ್ಥಿತಿ ಬಂತಲ್ಲ ನನ್ನ ಮಕ್ಕಳಿಗೆ ಎಂದು ಕೊರಗಿದ್ದಾರೆ. ಫೋಟೊದಲ್ಲಿ ಪತಿ ಡೇನಿಯಲ್ ವೆಬರ್, ಮೂವರು ಮಕ್ಕಳಾದ ನಿಶಾ, ನೌಹ್, ಆಶರ್ ಇದ್ದಾರೆ. ಕರೊನಾ ವೈರಸ್ ಸೋಂಕು ವಿಪರೀತವಾಗಿರುವ ಕಾರಣ ಅವರೆಲ್ಲರೂ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಹೊರಗೆ ನಿಂತಿರುವ ದೃಶ್ಯವಿರುವ ಫೋಟೊ ಅದಾಗಿದೆ.
ಈ ದಂಪತಿ ನಿಶಾಳನ್ನು ಮಹಾರಾಷ್ಟ್ರದ ಲಾತೂರ್ನಿಂದ ದತ್ತುಪಡೆದರೆ, ನೌಹಾ ಮತ್ತು ಆಶರ್ ಎಂಬ ಅವಳಿ ಮಕ್ಕಳನ್ನು ಬಾಡಿಗೆ ತಾಯ್ತನದ ಮೂಲಕ ಪಡೆದಿದ್ದಾರೆ. ಸನ್ನಿ ಲಿಯೋನ್ ತಮ್ಮ ಬದುಕಿನ ಬಗ್ಗೆ ಜೀವನ ಶೈಲಿಯ ಬಗ್ಗೆ ನಿಯತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಡೇಟ್ ಮಾಡುತ್ತಿರುತ್ತಾರೆ. (ಏಜೆನ್ಸೀಸ್)