ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಸ್ಟಾರ್, ನಟ ರಾಮ್ ಪೋತಿನೇನಿ ಮತ್ತು 'ಕಿಸ್' ಬೆಡಗಿ, ನಟಿ ಶ್ರೀಲೀಲಾ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ 'ಸ್ಕಂದ' ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗಿದ್ದು, 'ಸಲಾರ್' ಚಿತ್ರತಂಡ ಘೋಷಿಸಿದ್ದ ರಿಲೀಸ್ ದಿನಾಂಕದಂದೇ ಬಿಡುಗಡೆಯಾಗಲಿದೆ ಎಂದು ಇತ್ತೀಚಿನ ವರದಿ ತಿಳಿಸಿದೆ.
ಇದನ್ನೂ ಓದಿ: Sharanabasappa Darshanapur Reacts On India-Bharat Row: ಹೆಸರು ಬದಲಾವಣೆಯಿಂದ ಮನಸ್ಥಿತಿ ಬದಲಾಗುತ್ತಾ?
ಮಾಸ್ ಚಿತ್ರಗಳಿಗೆ ಹೆಚ್ಚು ಹೆಸರಾದ ನಿರ್ದೇಶಕ ಬೋಯಪತಿ ಶ್ರೀನು ನಿರ್ದೇಶನದಲ್ಲಿ ಮೂಡಿಬಂದಿರುವ 'ಸ್ಕಂದ' ಚಿತ್ರದ ರಿಲೀಸ್ ದಿನಾಂಕ ಇದೀಗ ಅಧಿಕೃತವಾಗಿದೆ. ಈ ಹಿಂದೆ ಸೆಪ್ಟಂಬರ್ 28 ರಂದು 'ಸಲಾರ್' ಚಿತ್ರ ಬಿಡುಗಡೆಗೊಳಿಸುತ್ತೇವೆ ಎಂದು ಚಿತ್ರ ತಯಾರಕರು ತಿಳಿಸಿದ್ದರು, ಆದ್ರೆ, ಕೆಲ ತಾಂತ್ರಿಕ ಕೆಲಸಗಳಿಂದ ಇದೀಗ ರಿಲೀಸ್ ದಿನಾಂಕವನ್ನು ಮುಂದೂಡಿದ್ದಾರೆ.
ಇದನ್ನೂ ಓದಿ: ಇಂಡಿಯಾ-ಭಾರತ, ಸನಾತನ ಬಗ್ಗೆ ಸಿಟಿ ರವಿ ಸುದ್ದಿಗೋಷ್ಠಿ
ಸದ್ಯ ಈ ಸಂಗತಿಯನ್ನು ಅರಿತ ಸ್ಕಂದ ಚಿತ್ರತಂಡ, ಇದೇ ದಿನಾಂಕದಂದು ತಮ್ಮ ಚಿತ್ರವನ್ನು ರಿಲೀಸ್ ಮಾಡಲು ಮುಂದಾಗಿದೆ. ಈಗಾಗಲೇ ಸೆಪ್ಟಂಬರ್ 28 ರಂದು ಬಿಡುಗಡೆ ಎಂಬ ಪೋಸ್ಟರ್ ಕೂಡ ಅಧಿಕೃತವಾಗಿ ಪ್ರಕಟವಾಗಿದೆ,(ಏಜೆನ್ಸೀಸ್).