‘ರಾಬರ್ಟ್’ ಸಿನಿಮಾ ತೆಲುಗು ಅವತರಣಿಕೆಯ ‘ಕಣ್ಣೇ ಅದಿರಿಂದಿ..’ ಹಾಡಿನ ಮೂಲಕ ತೆಲುಗಿನಲ್ಲಷ್ಟೇ ಅಲ್ಲದೆ ಕನ್ನಡದಲ್ಲಿಯೂ ಮನೆಮಾತಾದವರು ಗಾಯಕಿ ಮಂಗ್ಲಿ. ಇತ್ತೀಚೆಗಷ್ಟೇ ‘ಕರಿಯಾ ಐ ಲವ್ ಯೂ’ ಅನ್ನೋ ಚಿತ್ರದಲ್ಲಿ ಹಾಡೊಂದಕ್ಕೆ ಮಂಗ್ಲಿ ಧ್ವನಿಯಾಗಿದ್ದರು.
ಇದೀಗ ‘ಗೋಲ್ಡನ್ ಸ್ಟಾರ್’ ಗಣೇಶ್ ಅವರ ‘ತ್ರಿಬಲ್ ರೈಡಿಂಗ್’ ಚಿತ್ರಕ್ಕೂ ಅವರ ಆಗಮನವಾಗಿದೆ.
ಚಿತ್ರದ ಟೈಟಲ್ ಟ್ರಾ್ಯಕ್ಗೆ ಚಂದನ್ ಶೆಟ್ಟಿ ಸಾಹಿತ್ಯ ಬರೆದು ಧ್ವನಿ ನೀಡಿದ್ದು, ಅವರೊಂದಿಗೆ ಮಂಗ್ಲಿ ಸಹ ಕಂಠದಾನ ಮಾಡಲಿದ್ದಾರೆ.
*****************