ಸಿನಿವಾಣಿ

ಸೋನು ಟೀಚರ್ ಕ್ಲಾಸ್ ಶುರು: ಮಂಗಳಾ ಮೇಡಂ ಹೋದರು, ನಿವೇದಿತಾ ಮೇಡಂ ಬಂದರು

ಶಿವಮಲ್ಲಯ್ಯ ಸ್ಥಾವರಮಠ

ಬೆಂಗಳೂರು: ‘‘ಸಿದ್ಲಿಂಗು-2’ ಚಿತ್ರದ ನಾಯಕಿ ಪಾತ್ರ ತುಂಬಾ ಗಟ್ಟಿಯಾಗಿದೆ. ಅವಳ ದುಃಖ, ಸಂತೋಷ, ಗಾಂಭೀರ್ಯ ಪ್ರತಿಯೊಂದನ್ನು ದೃಶ್ಯದ ಮೂಲಕ ತೋರಿಸುವಾಗ ಈ ಪಾತ್ರ ಎದ್ದು ಕಾಣುತ್ತದೆ. ಎಲ್ಲಿಯೂ ನಾನು ಕಾಣುವುದಿಲ್ಲ, ಬದಲಾಗಿ ನನ್ನ ಪಾತ್ರ ಕಾಣುತ್ತದೆ. ಇದು ವಿಜಯಪ್ರಸಾದ್ ಅವರ ಬರವಣಿಗೆಯ ಶಕ್ತಿ’... ಹೀಗೆ ಹೇಳುವ ಮೂಲಕ ತಮ್ಮ ಪಾತ್ರ ಪರಿಚಯಿಸಿಕೊಳ್ಳುತ್ತಾರೆ ನಟಿ ಸೋನು ಗೌಡ.

ಕನ್ನಡದ ‘ಕಿರಗೂರಿನ ಗಯ್ಯಳಿಗಳು’, ‘ಚಂಬಲ್’ ಸೇರಿ ತಮಿಳು, ಮಲಯಾಳಂನ 25ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಸೋನು ಗೌಡ ಸದ್ಯ, ವಿಜಯ್‌ಪ್ರಸಾದ್ ನಿರ್ದೇಶನದ ‘ಸಿದ್ಲಿಂಗು-2’ ಚಿತ್ರದಲ್ಲಿ ಲೂಸ್ ಮಾದ ಯೋಗೀಶ್‌ಗೆ ಜೋಡಿಯಾಗಿದ್ದಾರೆ. 2012ರಲ್ಲಿ ತೆರಕಂಡಿದ್ದ ‘ಸಿದ್ಲಿಂಗು’ ಚಿತ್ರದ ಸೀಕ್ವೆಲ್ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ -ಪ್ರೋಡಕ್ಷನ್ ಕಾರ್ಯಗಳು ನಡೆಯುತ್ತಿವೆ. ಇದೇ ೆ. 14ರಂದು ಸಿನಿಮಾ ಬಿಡುಗಡೆಯಾಗಲಿದೆ. ಇದೀಗ ಚಿತ್ರತಂಡ ನಟಿ ಸೋನು ಗೌಡರ ಸ್ಟ್-ಲುಕ್ ರಿಲೀಸ್ ಮಾಡಿದೆ. ಈ ಹಿನ್ನೆಲೆಯಲ್ಲಿ ಅವರು ‘ವಿಜಯವಾಣಿ’ ಜತೆ ಚಿತ್ರ ಮತ್ತು ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ‘ವಿಜಯ್ ಸರ್ ಮೊದಲಿಗೆ ‘ಕಿರಗೂರಿನ ಗಯ್ಯಳಿಗಳು’ ನೋಡಿ ನನ್ನ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಾಗೆಯೇ ಮುಂದಿನ ದಿನಗಳಲ್ಲಿ ನಮ್ಮ ತಂಡದ ಜತೆ ಕೆಲಸ ಮಾಡಬೇಕು ಎಂದಿದ್ದರು. ಯಾವಾಗ ಕರೆಯುತ್ತಾರೋ ಎಂದುಕೊಂಡಿದ್ದೆ. ಬಹು ವರ್ಷಗಳ ಬಳಿಕ ಈ ಚಿತ್ರಕ್ಕೆ ಕರೆದು ಅವಕಾಶ ನೀಡಿದರು’ ಎನ್ನುತ್ತಾರೆ ಸೋನು.

ವಿಭಿನ್ನ, ಡಿ-ಗ್ಲಾಮರ್ ರೋಲ್: ‘ಸಿದ್ಲಿಂಗು’ ಚಿತ್ರದಲ್ಲಿ ರಮ್ಯಾ ಮಂಗಳಾ ಟೀಚರ್ ಪಾತ್ರದಲ್ಲಿ ನಟಿಸಿದ್ದರು. ಇದೀಗ ಈ ಸೀಕ್ವೆಲ್‌ನಲ್ಲಿ ಸೋನು ನಿವೇದಿತಾ ಮಿಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ, ‘ಮೈಸೂರು ಮೂಲದ ಹುಡುಗಿ. ‘ಪ್ರೆಸೆನ್ಸ್ ಆ್ ಮೈಂಡ್’ ಪಾತ್ರದಲ್ಲಿ ಎದ್ದು ಕಾಣುತ್ತದೆ. ಡಿ-ಗ್ಲಾಮರ್ ರೋಲ್‌ನಲ್ಲಿ ಈ ಹಿಂದೆಯೂ ಕಾಣಿಸಿಕೊಂಡಿದ್ದೇನೆ. ಆದರೆ, ಇದು ವಿಭಿನ್ನ. ಎರಡು ಬಾರಿ ಲುಕ್ ಟೆಸ್ಟ್ ನೀಡಿದೆ. ಆಗ ಪಾತ್ರಕ್ಕೆ ಇನ್ನೂ ಏನೋ ಬೇಕು ಅಂತನಿಸಿತು. ಬಳಿಕ ಕನ್ನಡಕ ಹಾಕಿದಾಗ ಪಾತ್ರಕ್ಕೆ ಒಂದು ಕಳೆ ಬಂತು. ವಿಜಯ ಸರ್ ಹಾಗೂ ಯೋಗೀಶ್ ಜತೆ ಮೊದಲ ಬಾರಿ ಕೆಲಸ ಮಾಡಿದ್ದು ಖುಷಿ ನೀಡಿದೆ’ ಎಂದು ಮಾಹಿತಿ ನೀಡುತ್ತಾರೆ.

ಕನ್ನಡಕದ ಸ್ವಾರಸ್ಯ ಕಥೆ: ವಿಜಯ ಪ್ರಸಾದ್ ಅವರ ಹಿಂದಿನ ‘ಸಿದ್ಲಿಂಗು’ ಹಾಗೂ ‘ತೋತಾಪುರಿ’ ಸರಣಿ ಚಿತ್ರದಲ್ಲಿ ನಾಯಕಿಯರು ಕನ್ನಡಕ ಧರಿಸಿದ್ದರು. ಅಂತೆಯೇ ಇದೀಗ ‘ಸಿದ್ಲಿಂಗು-2’ ಚಿತ್ರದಲ್ಲೂ ನಾಯಕಿ ಸೋನು ಕನ್ನಡಕ ಧರಿಸಿದ್ದಾರೆ. ಇದರ ಹಿಂದಿನ ಸ್ವಾರಸ್ಯದ ಬಗ್ಗೆ, ‘ವಿಜಯ್ ಸರ್ ಹಿಂದಿನ ಬಹುತೇಕ ಸಿನಿಮಾಗಳಲ್ಲಿ ಹಿರೋಯಿನ್‌ಗಳು ಕನ್ನಡಕ ಧರಿಸಿದ್ದಾರೆ. ಅವರ ಹೆಂಡತಿ ಕೂಡ ಕನ್ನಡಕ ಹಾಕುವುದೇ ಅದಕ್ಕೆ ಕಾರಣ. ಸಿನಿಮಾದಲ್ಲಿ ಮನೆಯ ವಾತಾವರಣ ನಿರ್ಮಿಸುವ ಉದ್ದೇಶದಿಂದ ಈ ಪ್ರಯತ್ನ ಅಷ್ಟೇ’ ಎಂದು ಮಾಹಿತಿ ನೀಡುತ್ತಾರೆ. ‘ಸಿದ್ಲಿಂಗು 2’ ಜತೆ ಸೋನು ‘ಮಾರ್ನಮಿ’ ಎಂಬ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ.