ಚೆನೈ: ಜನವರಿ 28 ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿರುವ ಟಾಲಿವುಡ್, ಕಾಲಿವುಡ್, ಬಾಲಿವುಡ್ ನಟಿ ಮತ್ತು ಗಾಯಕಿ ಶ್ರುತಿ ಹಾಸನ್ ಅವರು ತಮ್ಮ ಅಭಿಮಾನಿಗಳು ಈ ಜನವರಿ ತಿಂಗಳು ಪೂರ್ತಿ ಅವರ ಹುಟ್ಟುಹಬ್ಬವನ್ನು ಸಾಮಾಜಿಕ ಜಾಲತಾಣದಲ್ಲಿ ಬೇರೆ ಬೇರೆ ರೀತಿಗಳಲ್ಲಿ ಆಚರಿಸುತ್ತಿರುವುದನ್ನು ಕಂಡು ಭಾವುಕರಾಗಿದ್ದಾರೆ. ನಟಿ ತಮಗೆ ಲಭಿಸುತ್ತಿರುವ ಇಷ್ಟು ಪ್ರೀತಿಗಾಗಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳುತ್ತಿದ್ದಾರೆ.
ಜತೆಗೆ, ಈ ವರ್ಷದಲ್ಲಿ ತಮ್ಮ 36ನೇ ಜನ್ಮದಿನದಂದು, ಶ್ರುತಿ ಸಮಾಜದಲ್ಲಿ ಇರುವ ಕೆಲವು ಸಮಸ್ಯೆಗಳ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಲಿದ್ದಾರಂತೆ. ಹೌದು, ಅವರು ಇದೇ ಜನವರಿ 27 ರಿಂದ ಮಾನಸಿಕ ಆರೋಗ್ಯ, ಚಲನಚಿತ್ರಗಳು ಮತ್ತು ಮಾಧ್ಯಮಗಳಲ್ಲಿ ಮಹಿಳೆಯರ ಪಾತ್ರ, ಫ್ಯಾಷನ್‌ನಲ್ಲಿ ಸುಸ್ಥಿರತೆಯಂತಹ ವಿಷಯಗಳ ಕುರಿತು ಬಹಳಷ್ಟು ಲೈವ್ ಸೆಷನ್‌ಗಳಲ್ಲಿ ಮಾತಾಡಿ ಎಲ್ಲರಿಗೂ ಅರಿವು ಮೂಡಿಸಲು ಪ್ರಯತ್ನಿಸಲಿದ್ದಾರಂತೆ.
ಈ ಲೈವ್ ಸೆಷನ್‌ಗಳ ಮೂಲಕ ನಟಿ ಶ್ರುತಿ ಸಾಮಾನ್ಯವಾಗಿ ಚರ್ಚೆಯಾಗಬೇದರೂ, ಅಷ್ಟು ಚರ್ಚಿಸದಂತಹ ವಿಷಯಗಳತ್ತ ಗಮನ ಸೆಳೆಯಲು ಬಯಸುತ್ತಿದ್ದಾರಂತೆ. ಹಾಗಾಗಿ, ಹೆಚ್ಚು ಚರ್ಚೆಗೆ ಗ್ರಾಸವಾಗದ ಪ್ರಮುಖ ವಿಷಯಗಳ ಬಗ್ಗೆ ನಮ್ಮ ದೈನಂದಿನ ಜೀವನದಲ್ಲಿ ಈ ಸಂಭಾಷಣೆಗಳನ್ನು ಸಾಮಾನ್ಯಗೊಳಿಸುವ ಪ್ರಯತ್ನದಲ್ಲಿ, ಲೈವ್ ಸೆಷನ್‌ಗಳಲ್ಲಿ ಶ್ರುತಿ ಮತ್ತು ವಿವಿಧ ಪ್ರಭಾವಿ ವ್ಯಕ್ತಿಗಳ ಜತೆ ಸುದೀರ್ಘವಾಗಿ ಚರ್ಚಿಸುತ್ತಾರೆ ಎಂದು ನಮ್ಮ ಮೂಲಗಳು ಹೇಳುತ್ತಿವೆ.