ಭಾರತೀಯ ಚಿತ್ರರಂಗದ ಸೂಪರ್ಸ್ಟಾರ್ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದಾರೆ. ಮನೋವ್ಯಾದಿಗೆ ಒಳಗಾಗಿ ಮೆಂಟಲಿ ಸ್ಥಿಮಿತ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಕಳೆದ ಮೂರು ವರ್ಷದಿಂದ ಅದಕ್ಕೆ ಔಷಧೋಪಚಾರವನ್ನೂ ಮಾಡುತ್ತಿದ್ದಾರಂತೆ!
ಹೌದು, ಶ್ರುತಿ ಹಾಸನ್ ಮೊದಲಿನಂತಿಲ್ಲ. ಅವರ ಜೀವನ ಶೈಲಿ ಬದಲಾಗಿದೆ. ಸಿನಿಮಾ ಫೆಲ್ಯೂರ್, ಇಲ್ಲ ಸಲ್ಲದ ವದಂತಿಗಳು, ಲವ್ ಬ್ರೇಕಪ್, ಕುಡಿತದ ವ್ಯಸನ ಹೀಗೆ ಹಲವು ಏರಿಳಿತಗಳು ಜೀವನದಲ್ಲಿ ಘಟಿಸಿದ್ದರಿಂದ ಕಳೆದ ಮೂರು ವರ್ಷಗಳಿಂದ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದರು ಶ್ರುತಿ. ಇದೀಗ ಅದೆಲ್ಲದಕ್ಕೂ ಉತ್ತರ ಕಂಡುಕೊಂಡಿದ್ದಾರೆ. ಇದೀಗ ಒಂದು ಹನಿ ಮದ್ಯವನ್ನೂ ಮುಟ್ಟುವುದಿಲ್ಲವಂತೆ ಶ್ರುತಿ.
ಸಿನಿಮಾ ಅವಕಾಶಗಳೂ ಇಲ್ಲ ಎಂಬುದೂ ಈ ವ್ಯಾದಿಗೆ ಮುಖ್ಯ ಕಾರಣ. ಇದರಿಂದ ಹೊರಬರಲು, ಮಾನಸಿಕವಾಗಿ ಗಟ್ಟಿಯಾಗಲು ಥೆರಪಿಯೊಂದರ ಮೊರೆ ಹೋಗಿದ್ದರು. ಅದರಿಂದ ಕೊಂಚ ಸುಧಾರಿಸಿಕೊಂಡಿರುವ ಅವರು, ಈಗ ಅದೇ ಥೆರಪಿಯನ್ನು ಬೇರೆಯವರೂ ಬಳಸುವಂತೆ ಸಜೆಸ್ಟ್ ಮಾಡಿದ್ದಾರೆ. ‘ಕಳೆದ ಮೂರು ವರ್ಷಗಳಿಂದ ನಾನಾ ಕಾರಣಗಳಿಂದಾಗಿ ಮಾನಸಿಕವಾಗಿ ನಾನು ಕುಗ್ಗಿ ಹೋಗಿದ್ದೆ. ಅದರಿಂದ ಹೊರಬರಲು ಸಾಕಷ್ಟು ಪ್ರಯತ್ನಿಸಿದ್ದೆ. ಕೊನೆಗೆ ಥೆರಪಿಯೊಂದು ಸಹಕಾರಿ ಆಯಿತು. ಈ ರೀತಿಯ ಮಾನಸಿಕ ಖಿನ್ನತೆಗೊಳಗಾಗಿದ್ದರೆ, ಆ ಥೆರಪಿಯನ್ನು ನಾನು ಸಜೆಸ್ಟ್ ಮಾಡಬಲ್ಲೆ’ ಎಂದಿದ್ದಾರೆ.
ಸದ್ಯ ರವಿತೇಜ ಜತೆಗಿನ ಕ್ರ್ಯಾಕ್ ಸಿನಿಮಾದ ಮಾತಿನ ಭಾಗದ ಶೂಟಿಂಗ್ ಮುಗಿಸಿರುವ ಶ್ರುತಿ, ಹಾಡಿನ ಚಿತ್ರೀಕರಣಕ್ಕೆ ಕಾಯುತ್ತಿದ್ದಾರೆ. ಇತ್ತ ಪವನ್ ಕಲ್ಯಾಣ್ ಜತೆ ವಕೀಲ್ ಸಾಬ್ ಸಿನಿಮಾದಲ್ಲೂ ಶ್ರುತಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆಯಾದರೂ, ಅದಿನ್ನೂ ಅಧಿಕೃತ ಆಗಿಲ್ಲ. (ಏಜೆನ್ಸೀಸ್)