Actress Shruti Haasan Latest Photoshoot Pics 
ಸಿನಿವಾಣಿ

ದರೋಡೆಗಿಳಿದ ಕಮಲ್​ ಹಸನ್​ ಪುತ್ರಿ ! ಕಾರಣ ಕೇಳಿದರೆ ನೀವೂ ನಗ್ತೀರಾ...

ಈ ವರ್ಷ ಬಾಲಯ್ಯ ಜತೆ ‘ವೀರಸಿಂಹ ರೆಡ್ಡಿ’ ಮತ್ತು ಚಿರಂಜೀವಿಗೆ ನಾಯಕಿಯಾಗಿ ‘ವಾಲ್ಟೇರ್ ವೀರಯ್ಯ’ ಚಿತ್ರಗಳ ಮೂಲಕ ಬ್ಯಾಕ್ ಟು ಬ್ಯಾಕ್ ಎರಡು ಹಿಟ್‌ಗಳನ್ನು ನೀಡಿರುವ ನಟಿ ಶೃತಿ ಹಾಸನ್, ಇದೀಗ ‘ಸಲಾರ್’ ಮೂಲಕ ಹ್ಯಾಟ್ರಿಕ್ ಸಕ್ಸಸ್‌ಗೆ ಸಜ್ಜಾಗಿದ್ದಾರೆ. ಪ್ರಭಾಸ್ ನಾಯಕನಾಗಿರುವ, ಪ್ರಶಾಂತ್ ನೀಲ್ ನಿರ್ದೇಶನದ ಪ್ಯಾನ್ ಇಂಡಿಯಾ ‘ಸಲಾರ್’ ಇಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದ್ದು, ಮೊದಲ ದಿನವೇ 120 ಕೋಟಿ ರೂ.ಗಿಂತ ಅಧಿಕ ಗಳಿಕೆ ಮಾಡಿಕೊಳ್ಳುವ ನಿರೀಕ್ಷೆಯಿದೆ.

ಅತ್ತ ‘ಸಲಾರ್’ ತೆರೆಗೆ ಬರುವ ಮುನ್ನವೇ ಶೃತಿ ಹೊಸ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಶೃತಿ, ‘ಹಿಟ್ 2’, ‘ಮೇಜರ್’ ಖ್ಯಾತಿಯ ಅಡಿವಿಶೇಷ್ ಜತೆ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಇದೀಗ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದ್ದು, ‘ಡಕಾಯಿತ್’ ಎಂದು ನಾಮಕರಣ ಮಾಡಲಾಗಿದೆ. ಚಿತ್ರಕ್ಕೆ ‘ಒಂದು ಪ್ರೇಮಕಥೆ’ ಎಂಬ ಅಡಿಬರಹವಿದೆ. ‘ಕ್ಷಣಂ’, ‘ಗೂಢಚಾರಿ’ ಖ್ಯಾತಿಯ ಛಾಯಾಗ್ರಾಹಕ ಶನೀಲ್ ಡಿಯೊ ಈ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ಧರಿಸಿದ್ದಾರೆ.

Actress Shruti Haasan Latest Hot Photoshoot Pics

ಇದೊಂದು ಆ್ಯಕ್ಷನ್ ಡ್ರಾಮಾ ಚಿತ್ರವಾಗಿದ್ದು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರೀಕರಣವಾಗಲಿದೆ. ಇದಲ್ಲದೇ ಡ್ನಾೆ ಶ್ಮಾನ್ ನಿರ್ದೇಶಿಸುತ್ತಿರುವ ‘ದಿ ಐ’ ಎಂಬ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರದ ಮೂಲಕ ಶೃತಿ ಹಾಲಿವುಡ್‌ಗೆ ಡೆಬ್ಯೂ ಮಾಡುತ್ತಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಲಂಡನ್ ಇಂಡಿಪೆಂಡೆಂಟ್ ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂದಿರುವ ಈ ಸಿನಿಮಾ ಸದ್ಯ ರಿಲೀಸ್‌ಗೆ ರೆಡಿಯಿದೆ.

Actress Shruti Haasan Latest Photoshoot Pics