ಸಿನಿವಾಣಿ

ಸಂಗೀತ ಕಾರ್ಯಕ್ರಮ ರದ್ದುಗೊಳಿಸಿದ ಶ್ರೇಯಾ ಘೋಷಾಲ್, ಅರಿಜಿತ್ ಸಿಂಗ್​, ಅನಿರುದ್ಧ್​ ರವಿಚಂದರ್​. ಇದೇ ಕಾರಣ!

ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಹಿಂದುಗಳ ನರಮೇಧ ಪ್ರಕರಣದಿಂದಾಗಿ ಇಡೀ ದೇಶ ಶೋಕಾಚರಣೆಯಲ್ಲಿ ಮುಳುಗಿದೆ. ಹೀಗಾಗಿ ಬಾಲಿವುಡ್​ನ ಹೆಸರಾಂತ ಸಿಂಗರ್​ಗಳು ತಮ್ಮ ಸಂಗೀತ ಕಾರ್ಯಕ್ರಮಗಳನ್ನು ರದ್ದು ಅಥವಾ ಮುಂದೂಡುವ ಮೂಲಕ ಈ ನೋವಿನಲ್ಲಿ ತಾವೂ ಭಾಗಿಯಾಗಿದ್ದಾರೆ. ಶನಿವಾರ ಸೂರತ್​ನಲ್ಲಿ ಗಾಯಕಿ ಶ್ರೇಯಾ ಘೋಷಾಲ್​ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದನ್ನು ಮುಂದೂಡಿರುವ ಅವರು, "ಇತ್ತೀಚೆಗೆ ನಡೆದ ದುರಂತದಿಂದಾಗಿ ನಮ್ಮ ತಂಡದವರೆಲ್ಲರು ಸೇರಿ ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಲು ತೀರ್ಮಾನಿಸಿದ್ದೇವೆ. ಟಿಕೆಟ್​ ಖರೀದಿಸಿರುವ ಎಲ್ಲರ ಹಣವನ್ನು ಮರುಪಾವತಿ ಮಾಡಲಾಗುವುದು' ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಹಾಗೇ ಗಾಯಕ ಅರಿಜಿತ್​ ಸಿಂಗ್​ ಕೂಡ ಭಾನುವಾರ ಚೆನ್ನೆ$ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಹಾಗೇ ರ್ಯಾಪರ್​ ಎಪಿ ಧಿಲ್ಲೋನ್​ ಕೂಡ ತಮ್ಮ ಹೊಸ ಆಲ್ಬಂ ವಿಡಿಯೋ ಸಾಂಗ್​ ಬಿಡುಗಡೆಯನ್ನು ಮುಂದೂಡಿದ್ದು, ಹೊಸ ದಿನಾಂಕ ಘೋಷಿಸುವುದಾಗಿ ತಿಳಿಸಿದ್ದಾರೆ. ಇನ್ನು ಅನಿರುದ್ಧ್​ ರವಿಚಂದರ್​ ಬೆಂಗಳೂರಿನಲ್ಲಿ ಜೂ. 1ರಂದು ನಡೆಯಲಿರುವ ಎರಡನೇ ಶೋನ ಟಿಕೆಟ್​ ಮಾರಾಟವನ್ನು ರದ್ದುಗೊಳಿಸಿದ್ದು, ಹೊಸ ದಿನಾಂಕ ಅನೌನ್ಸ್​ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಹಾಗೇ ಶನಿವಾರ ಅಹಮದಾಬಾದ್​ನಲ್ಲಿ ಆಯೋಜಿಸಲಾಗಿದ್ದ ಗಾಯಕ ಪಪೋನ್​ ಲೈವ್​ ಶೋ ಕೂಡ ರದ್ದುಗೊಳಿಸಲಾಗಿದೆ. ಇನ್ನು ಪಂಜಾಬಿ ಗಾಯಕ ಗುರು ರಂಧಾವ ಒಂದು ವಾರದವರೆಗೆ ಯಾವುದೇ ಹೊಸ ಹಾಡಿನ ರಿಲೀಸ್​ ಅಥವಾ ಕಾರ್ಯಕ್ರಮದ ಬಗ್ಗೆ ಘೋಷಣೆ ಮಾಡದಿರಲು ನಿರ್ಧರಿದ್ದಾರೆ. &ಏಜೆನ್ಸೀಸ್​