ಬಾಲಿವುಡ್ ನಟ ಟೈಗರ್ ಶ್ರಾಫ್ ಮತ್ತು ಶ್ರದ್ಧಾ ಕಪೂರ್ ಈಗಾಗಲೇ ಒಟ್ಟಿಗೆ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ನಾಲ್ಕನೇ ಬಾರಿ ಒಂದಾಗುವ ಕಾಲ ಹತ್ತಿರ ಬಂದಿದೆ. ‘ಬಡೇ ಮಿಯಾ ಛೋಟೆ ಮಿಯಾ’ ಚಿತ್ರದಲ್ಲಿ ಟೈಗರ್ಗೆ ನಾಯಕಿಯಾಗಿ ಶ್ರದ್ಧಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಗುಸುಗುಸು ಬಿಟೌನ್ ಅಂಗಳದಲ್ಲಿ ಹರಿದಾಡುತ್ತಿದೆ. ಈ ಹಿಂದೆ ‘ಎ ಪ್ಲೈಯಿಂಗ್ ಜಟ್’ ಮತ್ತು ‘ಭಾಗಿ’ ಸರಣಿಯ ಎರಡು ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಗೆ ನಟಿಸಿತ್ತು.
ಇದೀಗ ‘ಬಡೆ ಮಿಯಾ ...’ದಲ್ಲಿಯೂ ಮೋಡಿ ಮಾಡಲಿದೆ ಎನ್ನಲಾಗುತ್ತಿದೆ. 1998ರಲ್ಲಿ ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ಮತ್ತು ಗೋವಿಂದ ನಟನೆಯ ‘ಬಡೆ ಮಿಯಾ ಛೋಟೆ ಮಿಯಾ’ ಸಿನಿಮಾ ತೆರೆಗೆ ಬಂದಿತ್ತು. ಇದೀಗ ಆ ಶೀರ್ಷಿಕೆಯನ್ನಷ್ಟೇ ಬಳಸಿ ಪೂಜಾ ಎಂಟರ್ಟೈನ್ವೆುಂಟ್ ಬ್ಯಾನರ್ನಲ್ಲಿ ಹೊಸ ಚಿತ್ರ ನಿರ್ವಣವಾಗುತ್ತಿದೆ. ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈ ಮೊದಲೇ ಸುದ್ದಿಯಾದಂತೆ, ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಬಡೆ ಮಿಯಾ ಆಗಿ ನಟಿಸಿದರೆ, ಟೈಗರ್ ಚೋಟೆ ಮಿಯಾ ಆಗಲಿದ್ದಾರೆ. ಇದೀಗ ಶ್ರದ್ಧಾ ಹೆಸರೂ ಕೇಳಿಬಂದಿದ್ದು, ಇಂದು (ಫೆ. 6) ಅಧಿಕೃತ ಮಾಹಿತಿ ಹೊರಬೀಳಲಿದೆ. -ಏಜೆನ್ಸೀಸ್