ರಾಮಾಯಣದಲ್ಲಿ ಕಂಡು ಬರುವ ವಿಎಫ್ಎಕ್ಸ್ನಂತರ ಸಣ್ಣ ತಪ್ಪು ಹುಡುಕಬೇಡಿ ಎಂದ ಯಶ್.
ಹೈದರಾಬಾದ್ನಲ್ಲಿ ನಡೆದ ರಾಮಾಯಣ ಪ್ರೀ ರಿಲೀಸ್ ಈವೆಂಟ್ನಲ್ಲಿ ಯಶ್ ಮನವಿ.
ದುಡ್ಡು ಕೊಟ್ಟು ಸಿನಿಮಾ ನೋಡೋರು ನಾವು, ಟೀಕೆ ಮಾಡ್ಬಾರ್ದು ಅಂದ್ರೆ ಹೇಗೆ ಎಂದ ನೆಟ್ಟಿಗರು.
ಬಟರ್ ಚಿಕನ್ನಲ್ಲಿ ಬಟನ್ ಇಲ್ಲದಿದ್ದರೂ ಮುಕ್ತ ಮನಸ್ಸಿನಿಂದ ತಿನ್ನಿ ಎನ್ನುವಂತಿದೆ ಯಶ್ ಮಾತು ಎಂದ ನೆಟ್ಟಿಗರು.
ನವೆಂಬರ್ 5ರಂದು ರಿಲೀಸ್ ಆಗಲು ಸಜ್ಜಾಗಿರುವ ರಾಮಾಯಣ ಸಿನಿಮಾದ ಪ್ರಚಾರ ಕಾರ್ಯವು ಭರ್ಜರಿಯಾಗಿ ಆರಂಭವಾಗಿದೆ. ಹೈದರಾಬಾದಲ್ಲಿ ನಡೆದ ಪ್ರೀ ರಿಲೀಸ್ ಈವೆಂಟ್ನಲ್ಲಿ ಯಶ್ ಮಾತನಾಡಿ, 'ದಯವಿಟ್ಟು ಸಿನಿಮಾದಲ್ಲಿ ವಿಎಫ್ಎಕ್ಸ್ನಂತಹ ಸಣ್ಣ ತಪ್ಪುಗಳನ್ನು ಹುಡುಕಲು ಹೋಗಬೇಡಿ. ಮುಕ್ತ ಮನಸ್ಸಿನಿಂದ ನೋಡಿ' ಎಂದು ವಿನಂತಿಸಿಕೊಂಡಿದ್ದರು. ಅವರ ಈ ಒಂದು ಮಾತು ಇಂಟರ್ನೆಟ್ನಲ್ಲಿ ಟ್ರೋಲ್ಗೆ ಕಾರಣವಾಗಿದೆ.
'ಹಣ ಕೊಟ್ಟು ನೋಡುವ ಸಿನಿಮಾದಲ್ಲಿ ಯಾವುದೇ ತಪ್ಪುಗಳನ್ನು ಪರಿಗಣಿಸದೆ ಮುಕ್ತವಾಗಿ ನೋಡೋದು ಹೇಗೆ?'. 'ಕೋಟಿಗಟ್ಟಲೇ ಹೂಡಿಕೆ ಮಾಡಿ, ಒಂದೇ ಕತೆಯನ್ನಾಧರಿಸಿ ಮಾಡುವ ಸಿನಿಮಾಗಳಲ್ಲಿ ದೋಷ ಕಂಡು ಬರೋದಾದ್ರು ಯಾಕೆ?', 'ನೀವೇನಾದ್ರು ಫ್ರೀ ಟಿಕೆಟ್ ಕೊಡ್ತೀರಾ' ಹೀಗೆ ನಾನಾ ಕಾಮೆಂಟ್ಗಳು ಯಶ್ ಅವರ ಹೇಳಿಕೆ ವಿರುದ್ಧ ಕೇಳಿ ಬರುತ್ತಿದೆ.
ಟಾಕ್ಸಿಕ್ ಸಿನಿಮಾದಲ್ಲಿ ವಿಎಫ್ಎಕ್ಸ್ ಎಫೆಕ್ಟ್ , ಆಡಿಯೋ ಗುಣಮಟ್ಟದ ಬಗ್ಗೆ ವೀಕ್ಷಕರು ಟ್ರೋಲ್ ಮಾಡಿದ್ದರು. ಇಷ್ಟೆಲ್ಲ ಖರ್ಚು ಮಾಡಿ ಸಣ್ಣ ತಪ್ಪು ಮಾಡಿದ್ಯಾಕೆ ಎಂದು ಟೀಕೆ ಮಾಡಿದ್ದರು. ಜೊತೆಗೆ ರಾಮಾಯಣ ಸಿನಿಮಾದ ಟ್ರೇಲರ್ನಲ್ಲಿದ್ದ ಸಣ್ಣ ತಪ್ಪುಗಳನ್ನು ಹೆಕ್ಕಿ ಟ್ರೋಲ್ ಮಾಡಲಾಗಿತ್ತು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಹೈದರಾಬಾದ್ನಲ್ಲಿ ನಡೆದ ಪ್ರೀ ರಿಲೀಸ್ ಈವೆಂಟ್ನಲ್ಲಿ ಯಶ್ ಮಾತನಾಡಿದರು.
'ನಾನು ಎಲ್ಲರಿಗೂ ಒಂದು ವಿಚಾರ ಹೇಳಲು ಬಯಸುತ್ತೇನೆ. ಪ್ಲೀಸ್ ಸಿನಿಮಾದಲ್ಲಿ ಕಂಡು ಬರುವ ಸಣ್ಣ ಸಣ್ಣ ವಿಎಫ್ಎಕ್ಸ್ಗಳಲ್ಲಿ ಕಂಡು ಬರುವ ಸಣ್ಣ ತಪ್ಪು ಕಂಡುಬಂದರೆ ಅದರ ಬಗ್ಗೆ ಮಾತನಾಡಬೇಡಿ. ಸಿನಿಮಾವನ್ನು ಮುಕ್ತ ಮನಸ್ಸಿನಿಂದ ನೋಡಿ. ನಾವು ಪುರಾತನ ಕಾಲಘಟ್ಟವನ್ನು ಅಂದು ಹೇಗಿತ್ತೋ ಹಾಗೆಯೇ ವಾಸ್ತವಕ್ಕೆ ತರಲಾಗುವುದಿಲ್ಲ. ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿ ಚಿತ್ರರಂಗಗಳ ಅಭಿಮಾನಿಗಳೇ. ಒಮ್ಮೆ, ನಿಮಗೆ ಈ ಸಿನಿಮಾ ಇಷ್ಟವಾದರೆ, ನಾವೆಲ್ಲರೂ ಒಗ್ಗೂಡಿ ಜಗತ್ತಿಗೆ ತೋರಿಸೋಣ' ಎಂದು ಹೇಳಿದರು.
ನಟ ಯಶ್ ಹೇಳಿಕೆ ಹೇಗಿದೆ ಎಂದರೆ, 'ಇದು ಬಟರ್ ಚಿಕನ್, ದಯವಿಟ್ಟು ಸಣ್ಣ ದೋಷಗಳನ್ನು ಈ ಆಹಾರದಲ್ಲಿ ಹುಡುಕಬೇಡಿ. ಬಟರ್ ಚಿಕನ್ನಲ್ಲಿ ಬೆಣ್ಣೆ ಇಲ್ಲದಂತೆ, ಮುಕ್ತ ಮನಸ್ಸಿನಿಂದ ತಿನ್ನಿರಿ' ಎಂದು ಹೇಳಿದಂತೆ ಇದೆ ಎಂದು ವ್ಯಂಗ್ಯವಾಡಿದ್ದಾರೆ.
'ಬನ್ನಿ ಈಗಾಗಲೇ ಒಟಿಟಿಯಲ್ಲಿ ಭಾರತೀಯರು ವಿಶ್ವ ದರ್ಜೆಯ ಸಿನಿಮಾಗಳನ್ನು, ವೆಬ್ಸೀರಿಸ್ಗಳನ್ನು ವೀಕ್ಷಿಸುತ್ತಿದ್ದಾರೆ. ನಮಗೀಗ ಆ ವೀಕ್ಷಕರ ಮಟ್ಟವನ್ನು ಹೆಚ್ಚಿಸುವ ಸಮಯ' ಎಂದು ಬರೆದುಕೊಂಡಿದ್ದಾರೆ. ಅಂದರೆ ಭಾರತೀಯ ಸಿನಿಮಾಗಳಿಗಿಂತ ಅಂತರರಾಷ್ಟ್ರೀಯ ಸಿನಿಮಾಗಳಿಗೆ ಜನ ನೆಚ್ಚಿಕೊಳ್ಳುತ್ತಿದ್ದಾರೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.
'4,000 ಕೋಟಿಯಲ್ಲಿ ನಿರ್ಮಾಣ ಮಾಡಿರುವ ರಾಮಾಯಣ ಸಿನಿಮಾವನ್ನು, 500 ರೂ. ಕೊಟ್ಟು ನೋಡುವ ಸಿನಿ ಪ್ರೇಮಿ ಟೀಕೆ ಮಾಡಬಾರದು ಯಾಕೆ? ನೀವೇನಾದ್ರೂ ಉಚಿತವಾಗಿ ಟಿಕೆಟ್ ಕೊಡ್ತೀರಾ' ಎಂದು ಕಿಡಿಕಾರಿದ್ದಾರೆ
'ಒಂದೇ ಸ್ಟೋರಿಯನ್ನು ಹಲವಾರು ದಶಕಗಳಿಂದ ಚಿತ್ರೀಕರಿಸಲಾಗುತ್ತಿದೆ. ಹೀಗಿದ್ದಾಗಲೂ ತಪ್ಪಾಗುತ್ತದೆ ಎಂದರೆ ಹೇಗೆ'? ಎಂದು ಒಬ್ಬ ಎಕ್ಸ್ ಬಳಕೆದಾರ ಬೇಸರ ವ್ಯಕ್ತಪಡಿಸಿದ್ದಾರೆ.
'ರಾಮಾಯಣ ಎಲ್ಲರಿಗೂ ತಿಳಿದಿರುವ ಕಥೆ. ವು ಇಲ್ಲಿಗೆ ಬರುತ್ತಿರುವುದು ಕಥೆಯನ್ನು ತಿಳಿದುಕೊಳ್ಳಲಿಕ್ಕಲ್ಲ, ಬದಲಾಗಿ ವಿಎಫ್ಎಕ್ಸ್ , ದೃಶ್ಯ ವೈಭವ ಮತ್ತು ದೊಡ್ಡ ಪರದೆಯ ಅನುಭವವನ್ನು ಪಡೆಯಲು. ಇದನ್ನು ನೋಡುವುದು ಏನೋ ದೊಡ್ಡ ವಿಶೇಷ ಸೌಭಾಗ್ಯ ಎಂಬಂತೆ ವರ್ತಿಸುವುದನ್ನು ನಿಲ್ಲಿಸಿ. ಟೀಕೆಗಳನ್ನು ಅನುಸರಿಸಿ ಮುಂದೆ ತಪ್ಪಾಗದಂತೆ ನೋಡಿಕೊಳ್ಳಿ' ಎಂದಿದ್ದಾರೆ ಆರ್ಕೆ ಎನ್ನುವವರು.
ಕೇಶವ ಎಂಬುವವರು ಕಾಮೆಂಟ್ ಮಾಡಿದ್ದು, 'ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಅದಕ್ಕೂ ಮುಂಚೆಯೇ ಏನನ್ನೋ ಹೇಳಲು ಹೊರಟಿದ್ದಾರೆ. 4000 ಕೋಟಿ ರೂ. ಬಜೆಟ್ ಎಂದು ಹೇಳಲಾಗುತ್ತಿದೆ, ಇಂತಹ ಸಂದರ್ಭದಲ್ಲಿ VFX ಕಳಪೆಯಾಗಿದ್ದರೆ, ಟೀಕೆ ಮಾಡದೆ ಇರಲಾಗುತ್ತದೆಯೇ' ಎಂದು ಬರೆದುಕೊಂಡಿದ್ದಾರೆ..
ನವೆಂಬರ್ 5ರಂದು ನಿತೀಶ್ ತಿವಾರಿ ನಟನೆಯ ರಾಮಾಯಣ ಭಾಗ1 ಸಿನಿಮಾ ರಿಲೀಸ್ ಆಗಲು ಸಜ್ಜಾಗಿದೆ. ನಮಿತ್ ಮಲ್ಹೋತ್ರಾ (ಪ್ರೈಮ್ ಫೋಕಸ್ ಸ್ಟುಡಿಯೋಸ್) ಮತ್ತು ಯಶ್ (ಮಾನ್ಸ್ಟರ್ ಮೈಂಡ್ ಕ್ರ/ಮೇಷನ್ಸ್) ನಿರ್ಮಾಣದ ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತೆಯಾಗಿ, ರಣಬೀರ್ ರಾಮನಾಗಿ, ಯಶ್ ರಾವಣನಾಗಿ ಮಿಂಚಿದ್ದಾರೆ. ಈಗಾಗಲೇ ಟ್ರೇಲರ್ ಹೆಚ್ಚು ಕುತೂಹಲ ಮೂಡಿಸಿದ್ದು, ಸಿನಿಮಾ ರಿಲೀಸ್ ಆಗಿ ಸಿನಿ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ, (ಏಜೆನ್ಸೀಸ್).