ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಅಜಾತಶತ್ರುವಂತೆಯೇ ಇರುವ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಈಗ ಪರದೆ ಮೇಲೂ ಅಜಾತಶತ್ರುವಾಗಿ ಮಿಂಚಲಿದ್ದಾರೆ.
ಹಾಗಂತ ಇದು ಅವರ ಹೊಸ ಸಿನಿಮಾ ಏನಲ್ಲ. ಬದಲಿಗೆ ಇದು ಅವರ ಕುರಿತಾದ್ದೇ ಸಿನಿಮಾ. ಅಂಥದ್ದೊಂದು ಸಿನಿಮಾ ಬರ್ತ್ಡೇ ಗಿಫ್ಟ್ ಆಗಿ ಅವರಿಗೆ ಲಭಿಸಲಿದೆ. ಅಂದಹಾಗೆ ಈ ಉಡುಗೊರೆ ಅವರಿಗೆ ಸಿಗಲಿರುವುದು ಅಭಿಮಾನಿಗಳಿಂದ. ಅಂದರೆ, ಪುನೀತ್ ಕುರಿತ ‘ಅಜಾತಶತ್ರು’ ಎಂಬ ಕಿರುಚಿತ್ರವೊಂದರ ಪೋಸ್ಟರ್ ‘ಅಭಿಮಾನಿಗಳಿಂದ, ಅಭಿಮಾನಿಗಳಿಗಾಗಿ, ಅಭಿಮಾನಿಗಳಿಗೋಸ್ಕರ..’ ಎಂಬ ಒಕ್ಕಣೆಯೊಂದಿಗೆ ಬಹಿರಂಗಗೊಂಡಿದೆ.
ಈ ಸಿಹಿಸುದ್ದಿಯನ್ನು ಅವರ ಅಳಿಯ ಧೀರೇನ್ ರಾಮ್ುಮಾರ್ ಹಂಚಿಕೊಂಡಿದ್ದಾರೆ. ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಧೀರೇನ್, ಆ ತಂಡಕ್ಕೆ ಶುಭ ಹಾರೈಸಿದ್ದಾರೆ. ತೇಜಸ್ ರಂಗನಾಥ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಕಿರುಚಿತ್ರವನ್ನು ಪುನೀತ್ ಅವರಿಗೆ ಅರ್ಪಿಸಲಾಗಿದೆ. ಪವರ್ಸ್ಟಾರ್ ಜನ್ಮದಿನವಾದ ಮಾ. 17ರಂದು ಬಿಡುಗಡೆ ಆಗಲಿರುವ ಈ ಕಿರುಚಿತ್ರದಲ್ಲಿ ಪುನೀತ್ ಬದುಕಿನ ಕುರಿತ ಚಿತ್ರಣ ಇರಲಿದೆ ಎನ್ನಲಾಗುತ್ತಿದೆ.