ಸಿನಿವಾಣಿ

ಶೋಭನ್ ಬಾಬು ಪಾತ್ರಕ್ಕೆ ಬಂಗಾಲಿ ನಟ

ರಮೇಶ್​ ಕುಮಾರ್​​ ಬಿ ಎಡಮೋಳೆ

ಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನದ ಕಥೆ ಆಧಾರಿತವಾಗಿ ಮೂಡಿಬರುತ್ತಿರುವ ‘ತಲೈವಿ’ ಚಿತ್ರಕ್ಕೆ ಈಗ ಬಂಗಾಲಿ ನಟ ಜಿಶುಸೇನ್ ಗುಪ್ತಾ ಸೇರಿಕೊಂಡಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಎ.ಎಲ್.ವಿಜಯ್ ಆಕ್ಷನ್-ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಜಯಲಲಿತಾ ಪಾತ್ರದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ರಿಲೀಸ್ ಆಗಿ ಕೊಂಚ ವಿವಾದವಾಗಿದ್ದು, ಅದು ವೈರಲ್ ಕೂಡ ಆಗಿತ್ತು. ಅದೇ ಚಿತ್ರದ ಎಂಜಿಆರ್ ಪಾತ್ರದಲ್ಲಿ ತಮಿಳಿನ ಅರವಿಂದ ಸಾಮಿ ನಟಿಸುತ್ತಿದ್ದಾರೆ ಎಂಬುದು ಗೊತ್ತಾಗಿತ್ತು. ಈಗ ಆ ಚಿತ್ರದಲ್ಲಿ ಶೋಭನ್ ಬಾಬು ಪಾತ್ರಕ್ಕೆ ಬಂಗಾಲಿಯ ಖ್ಯಾತ ನಟ ಜಿಶು ಸೇನ್​ಗುಪ್ತಾ ಬರಲಿದ್ದಾರಂತೆ.

ಜಯಲಲಿತಾ ಅವರ ಬದುಕಲ್ಲಿ ನಟ ಶೋಭನ್ ಬಾಬು ಅವರು ಬಹು ಮುಖ್ಯ ಪಾತ್ರ ವಹಿಸಿದ್ದರು. ಮೂಲಗಳ ಪ್ರಕಾರ ಅವರಿಬ್ಬರೂ ರಿಲೇಷನ್​ಶಿಪ್​ನಲ್ಲಿಯೂ ಇದ್ದರು. ಹಾಗಾಗಿ ಅವರ ಬಯೋಪಿಕ್​ನಲ್ಲಿ ಶೋಭನ್ ಬಾಬು ಪಾತ್ರ ಬಹಳ ಪ್ರಾಮುಖ್ಯತೆ ವಹಿಸುವುದರಿಂದ, ಅದಕ್ಕಾಗಿ ಉತ್ತಮ ಕಲಾವಿದರನ್ನು ವಿಜಯ್ ಆಯ್ಕೆ ಮಾಡಿದ್ದಾರಂತೆ. ಸದ್ಯದಲ್ಲೆ ಜಿಶುಸೇನ್ ಗುಪ್ತಾ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಜಿಶು ಈಗಾಗಲೇ ಶೋಭನ್ ಬಾಬು ಲುಕ್​ಗಳತ್ತ ತಮ್ಮ ಚಿತ್ತ ಹರಿಸಿದ್ದಾರಂತೆ. ಜಿಶು ಇತ್ತೀಚೆಗೆ ನಾಗಶೌರ್ಯ ನಟನೆಯ ತೆಲುಗು ಸಿನಿಮಾ ‘ಅಶ್ವತ್ಥಾಮ’ದಲ್ಲಿ ನೆಗೆಟಿವ್ ರೋಲ್​ನಲ್ಲಿ ಕಾಣಿಸಿಕೊಂಡಿದ್ದರು. -ಏಜೆನ್ಸೀಸ್