ಸಿನಿವಾಣಿ

ರವಿ ಅರಸು ನಿರ್ದೇಶನದ ಅದ್ದೂರಿ ಸಿನಿಮಾದಲ್ಲಿ ಶಿವಣ್ಣ ಆರ್​ಡಿಎಕ್ಸ್!

malli

ಬೆಂಗಳೂರು:  ‘ಸತ್ಯಜ್ಯೋತಿ ಫಿಲಮ್ಸ್​’ ಬ್ಯಾನರ್​ನಲ್ಲಿ ರವಿ ಅರಸು ನಿರ್ದೇಶನದ ಅದ್ದೂರಿ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ನಾಯಕನಾಗಿ ನಟಿಸಲಿದ್ದಾರೆ ಎಂಬುದು ಈ ಹಿಂದೆಯೇ ಸುದ್ದಿಯಾಗಿತ್ತು. ಆದರೆ, ಸಿನಿಮಾ ಶೀರ್ಷಿಕೆ ಏನು ಎಂಬ ಬಗ್ಗೆ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ಈಗ ಆ ಕುತೂಹಲಕ್ಕೆ ತೆರೆಬಿದ್ದಿದೆ. ಚಿತ್ರಕ್ಕೆ ‘ಆರ್​ಡಿಎಕ್ಸ್’ ಟೈಟಲ್ ಫಿಕ್ಸ್ ಆಗಿದೆ.

ಫೆಬ್ರವರಿ 19ಕ್ಕೆ ಶಿವರಾಜ್​ಕುಮಾರ್ ಚಿತ್ರರಂಗಕ್ಕೆ ಬಂದು ಬರೋಬ್ಬರಿ 34 ವರ್ಷಗಳು ತುಂಬಲಿವೆ. ಆ ವಿಶೇಷ ದಿನದಂದೇ ‘ಆರ್​ಡಿಎಕ್ಸ್’ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಮತ್ತೆ ಕಾಪ್ ಅವತಾರದಲ್ಲಿ ಶಿವಣ್ಣ ಎದುರಾಗಲಿದ್ದು, ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

‘ಟಗರು’ ಚಿತ್ರಕ್ಕೆ ಸಂಗೀತ ನೀಡಿದ್ದ ಚರಣ್ ರಾಜ್ ಇಲ್ಲಿಯೂ ಮುಂದುವರಿದಿದ್ದು, ಚಂದ್ರಮೌಳಿ ಸಂಭಾಷಣೆ ಬರೆಯಲಿದ್ದಾರೆ. ಈ ಹಿಂದೆ ರವಿ ಅರಸು ನಿರ್ದೇಶನದ ‘ಎಟ್ಟಿ’ ಮತ್ತು ‘ಐಂಗರನ್’ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದ ಎಂ. ಸರವಣನ್, ‘ಆರ್​ಡಿಎಕ್ಸ್’ ಮೂಲಕ ಮೊದಲ ಬಾರಿ ಕನ್ನಡಕ್ಕೆ ಆಗಮಿಸುತ್ತಿದ್ದಾರೆ.

ಜತೆಗೆ ತಾರಾಗಣದ ಆಯ್ಕೆ ಪ್ರಕ್ರಿಯೆಯೂ ನಡೆಯುತ್ತಿದೆ. ಸದ್ಯ ಹರ್ಷ ನಿರ್ದೇಶನದ ‘ಭಜರಂಗಿ 2’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಬಿಜಿಯಾಗಿದ್ದಾರೆ. ಆ ಚಿತ್ರದ ಕೆಲಸಗಳ ಜತೆಯಲ್ಲಿ ‘ಆರ್​ಡಿಎಕ್ಸ್’ಗೂ ಸಜ್ಜಾಗಲಿದ್ದಾರೆ. ಚಿತ್ರದ ಎರಡನೇ ಭಾಗದ ಶೂಟಿಂಗ್ ಭೋಪಾಲ್ ಮತ್ತು ಮೇಘಾಲಯದಲ್ಲಿ ಚಿತ್ರೀಕರಿಸಲು ತಂಡ ಪ್ಲಾ್ಯನ್ ಹಾಕಿದೆ.