ಬೆಂಗಳೂರು: ಡಾ. ರಾಜಕುಮಾರ್ ಅವರ ಮೊಮ್ಮಗ, ರಾಮ್ುಮಾರ್ ಮಗ ಧೀರೇನ್ ರಾಮ್ುಮಾರ್ ಅಭಿನಯದ ಮೊದಲ ಚಿತ್ರ ‘ಶಿವ 143’, ಎರಡು ವರ್ಷಗಳ ಮುಂಚೆಯೇ ಬಿಡುಗಡೆಯಾಗಬೇಕಿತ್ತು. ಆದರೆ, ಕರೊನಾದಿಂದ ಎಲ್ಲವೂ ತಡವಾಗಿ ಈಗ ಆ. 26ಕ್ಕೆ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ನಾಯಕನ ಪರಿಚಯಿಸುವ ಟೀಸರ್ನ್ನು ಅಶ್ವಿನಿ ಪುನೀತ್ ರಾಜಕುಮಾರ್ ಬಿಡಗುಡೆ ಮಾಡಿದ್ದಾರೆ. ಟೀಸರ್, ಟ್ರೇಲರ್ ನೋಡಿ ಇದೊಂದು ರೌಡಿಸಂ ಚಿತ್ರ ಎಂದನಿಸಬಹುದು. ಆದರೆ, ಇದೊಂದು ರೌಡಿಸಂ ಸಿನಿಮಾ ಅಲ್ಲ ಎನ್ನುತ್ತಾರೆ ನಿರ್ದೇಶಕ ಅನಿಲ್ ಕುಮಾರ್.
‘ಇದು ರೌಡಿಸಂ ಸಿನಿಮಾ ಅಲ್ಲ. ಹಾಗಂತ ಮಾಸ್ ಅಂಶಗಳಿಗೆ ಕೊರತೆ ಇಲ್ಲ. ವಿಭಿನ್ನ ಪ್ರೇಮಕಥೆಯ ಚಿತ್ರ. ತುಂಬಾ ಕಾಡುವ ಚಿತ್ರ. ಪ್ರೀತಿಯನ್ನು ಹೇಗೆ ಕಾಪಾಡಿಕೊಳ್ಳಬೇಕು? ಕಾಪಾಡಿಕೊಳ್ಳದಿದ್ದರೆ ಏನಾಗುತ್ತದೆ? ಅಂತಿಮವಾಗಿ ಕಾಪಾಡಿಕೊಳ್ಳುತ್ತಾನಾ? ಎಂದು ಹೇಳುವ ಚಿತ್ರ. ತೆಲುಗಿನ ಮೂಲ ಚಿತ್ರಕ್ಕೂ ಇಲ್ಲಿಗೂ ಸಾಕಷ್ಟು ಬದಲಾವಣೆ ಆಗಿದೆ. ಅದನ್ನು ಸ್ಪೂರ್ತಿಯನ್ನಾಗಿಟ್ಟುಕೊಂಡು, ಇಲ್ಲಿನ ನೇಟಿವಿಟಿಗೆ ತಕ್ಕ ಹಾಗೆ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ಅನಿಲ್ ಕುಮಾರ್.
‘ಶಿವ 143’, ತೆಲುಗಿನ ‘ಆರ್ಎಕ್ಸ್ 100’ ಚಿತ್ರದ ರೀಮೇಕ್. ಆ ಕಥೆ ಧೀರೇನ್ಗೆ ಬಹಳ ಇಷ್ಟವಾಗಿತ್ತಂತೆ. ಅದನ್ನು ಮನೆಯವರ ಹತ್ತಿರ ರ್ಚಚಿಸಿದಾಗ, ‘ನಿನಗೆ ಸರಿ ಹೊಂದುವುದಾದರೆ ಮಾಡು’ ಎಂದರಂತೆ. ‘ಲಾಕ್ಡೌನ್ಗಿಂತ ಮೊದಲು ಶುರುವಾದ ಸಿನಿಮಾ. ಸಾಕಷ್ಟು ಅಡೆತಡೆಗಳ ನಂತರ ಈಗ ಚಿತ್ರ ಕೊನೆಗೂ ಬಿಡುಗಡೆಯಾಗುತ್ತಿದೆ. ಸಾಕಷ್ಟು ತಯಾರಿಗಳನ್ನು ಮಾಡಿಕೊಂಡೇ ಕ್ಯಾಮೆರಾ ಮುಂದೆ ನಿಂತಿದ್ದೇನೆ. ಈ ಚಿತ್ರದಲ್ಲಿ ಎರಡು ಶೇಡ್ಸ್ ಇದೆ. ರೊಮ್ಯಾಂಟಿಕ್ ಆಗಿಯೂ ಕಾಣಿಸಿಕೊಂಡಿದ್ದೇನೆ. ಮಾಸ್ಲುಕ್ನಲ್ಲೂ ಕಾಣಿಸಿಕೊಂಡಿದ್ದೇನೆ. ನನಗೆ ಇದೊಂದು ಸವಾಲಾಗಿತ್ತು. ಹಾಗಾಗಿ, ಈ ಚಿತ್ರ ಒಪ್ಪಿಕೊಂಡೆ’ ಎನ್ನುತ್ತಾರೆ ಧೀರೇನ್. ಈ ಚಿತ್ರವನ್ನು ಜಯಣ್ಣ, ಭೋಗೇಂದ್ರ ಹಾಗೂ ಡಾ. ಸೂರಿ ಜಂಟಿಯಾಗಿ ನಿರ್ವಿುಸಿದ್ದಾರೆ. ಧೀರೇನ್ಗೆ ಮಾನ್ವಿತಾ ನಾಯಕಿಯಾಗಿ ನಟಿಸಿದ್ದು, ಮಿಕ್ಕಂತೆ ಚರಣ್ರಾಜ್, ಚಿಕ್ಕಣ್ಣ, ಸಾಧು ಕೋಕಿಲ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.