ಸಿನಿವಾಣಿ

ಅಮೆಜಾನ್​ನಲ್ಲಿ ಶೇರ್​ಷಾ ನಂ.1

ಅಮೆಜಾನ್ ಪ್ರೖೆಂನಲ್ಲಿ ಕಳೆದ ತಿಂಗಳು ಬಿಡುಗಡೆಯಾಗಿ ಸ್ಟ್ರೀಮ್ ಆಗುತ್ತಿರುವ ‘ಶೇರ್​ಷಾ’ ಚಿತ್ರವು, ಅಮೆಜಾನ್ ಪ್ರೖೆಮ್ ಇಂಡಿಯಾದಲ್ಲೇ ಅತೀ ಹೆಚ್ಚು ವೀಕ್ಷಣೆ ಕಂಡ ಸಿನಿಮಾ ಪಟ್ಟಿಗೆ ಸೇರುವ ಮೂಲಕ ನಂ.1 ಪಟ್ಟ ಅಲಂಕರಿಸಿದೆ.

ಆಗಸ್ಟ್ 12ರಂದು ಪ್ರೖೆಂನಲ್ಲಿ ಪ್ರಸಾರವಾದ ಈ ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ಇದೀಗ ಯಾರೂ ಮಾಡದ ದಾಖಲೆಯೊಂದನ್ನು ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ಸಂಭ್ರಮದಲ್ಲಿದೆ ಇಡೀ ತಂಡ. ಅಂದಹಾಗೆ, ‘ಶೇರ್​ಷಾ’, ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತ ಕ್ಯಾಪ್ಟನ್ ವಿಕ್ರಂ ಬಾತ್ರಾ ಅವರ ಕುರಿತಾದ ಸಿನಿಮಾ. 1999ರ ಕಾರ್ಗಿಲ್ ಯುದ್ಧದ ಹಿನ್ನೆಲೆಯಲ್ಲಿ ನಿರ್ದೇಶಕ ವಿಷ್ಣುವರ್ಧನ್ ಚಿತ್ರವನ್ನು ಹೆಣೆದಿದ್ದರು. ಕರಣ್ ಜೋಹರ್ ತಮ್ಮ ಧರ್ಮ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಖುಷಿಯ ವಿಚಾರವನ್ನು ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಧನ್ಯವಾದ ತಿಳಿಸಿದೆ. -ಏಜೆನ್ಸೀಸ್