ಸಿನಿವಾಣಿ

ಬಿಗ್​ಬಾಸ್​ನಿಂದ ಶಂಕರ್ ಅಶ್ವತ್ಥ ಹೊರಕ್ಕೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಬಿಗ್​ಬಾಸ್ ಸೀಸನ್ 8ರ ಐದನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ಮನೆಯ ಹಿರಿಯ ಸದಸ್ಯ ಶಂಕರ್ ಅಶ್ವತ್ಥ ಭಾನುವಾರ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.

ಈ ವಾರ ಶಂಕರ್ ಅಶ್ವತ್ಥ, ನಿಧಿ ಸುಬ್ಬಯ್ಯ, ಅರವಿಂದ್, ಶುಭ ಪೂಂಜ, ಪ್ರಶಾಂತ್ ಸಂಬರಗಿ, ಶಮಂತ್ ಗೌಡ ನಾಮಿನೇಟ್ ಆಗಿದ್ದರು. ಇವರೆಲ್ಲರ ಪೈಕಿ ಶಂಕರ್ ಅಶ್ವತ್ಥ ಎಲಿಮಿನೇಟ್ ಆಗಿದ್ದಾರೆ.

ಮನೆಯಲ್ಲಿ ಹಿರಿಯ ಎಂಬ ಕಾರಣಕ್ಕೆ ಮತ್ತು ಟಾಸ್ಕ್ ವಿಚಾರದಲ್ಲಿಯೂ ಎರಡೆರಡು ಬಾರಿ ಕಳಪೆ ಪಟ್ಟವನ್ನೂ ಪಡೆದು ಜೈಲುವಾಸ ಅನುಭವಿಸಿದ್ದರು. ಇದೆಲ್ಲದರ ಜತೆಗೆ ನೀರಿಗೆಲ್ಲಿ ಎಲ್ಲೆ ಎಲ್ಲಿದೆ ಟಾಸ್ಕ್​ನ ನಿಯಮವನ್ನು ಉಲ್ಲಂಘಿಸಿ ಇತರ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.