Kiran Rathod: ಕ್ಷಣ ಕ್ಷಣ, ಗನ್ ಮತ್ತು ಮಾಣಿಕ್ಯ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ಕಿರಣ್ ರಾಥೋಡ್ ಅವರು ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಆದರೆ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದು, ಅಲ್ಲಿನ ಮಂದಿಗೆ ಹೆಚ್ಚು ಹತ್ತಿರವಾಗಿದ್ದಾರೆ. ತಮ್ಮ ಬೋಲ್ಡ್ ಪಾತ್ರಗಳಿಂದಲೂ ಕಿರಣ್ ಖ್ಯಾತಿ ಪಡೆದಿದ್ದರು. ಇತ್ತೀಚಿನ ದಿನಗಳಲ್ಲಿ ಅವಕಾಶಗಳು ಇಲ್ಲದಿರುವುದರಿಂದ ಸಿನಿ ಲೋಕದಿಂದ ದೂರವಿರುವ ಕಿರಣ್, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ.
ತಾಜಾ ಸಂಗತಿ ಏನೆಂದರೆ, ಈ ಹಿಂದೆ ಗಲಾಟ ಸಿನಿಮಾ ಹೆಸರಿನ ಯೂಟ್ಯೂಬ್ ಚಾನೆಲ್ಗೆ ನೀಡಿದ್ದ ಸಂದರ್ಶನದ ವಿಡಿಯೋ ತುಣುಕು ಮತ್ತೆ ವೈರಲ್ ಆಗುತ್ತಿದೆ. ಈ ಸಂದರ್ಶನದಲ್ಲಿ ಕಿರಣ್ ಆಡಿದ್ದ ಮಾತುಗಳು ವೀಕ್ಷಕರ ಹುಬ್ಬೇರಿಸಿದೆ. ಒಂದು ಕಾಲದಲ್ಲಿ ತಮಿಳು ಮತ್ತು ಮಲಯಾಳಂನ ಸಾಫ್ಟ್ಕೋರ್ ನೀಲಿ ಚಿತ್ರಗಳಲ್ಲಿ ನಟಿಸುವ ಮೂಲಕ ಭಾರಿ ಸುದ್ದಿ ಮಾಡಿದ್ದ ಶಕೀಲಾ ಅವರು ಈ ಸಂದರ್ಶನದಲ್ಲಿ ನಿರೂಪಕಿಯಾಗಿ, ಕಿರಣ್ ಅವರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದು, ಕಿರಣ್ ಅವರು ಎಲ್ಲ ಪ್ರಶ್ನೆಗಳಿಗೆ ಬೋಲ್ಡ್ ಉತ್ತರವನ್ನು ನೀಡಿದ್ದಾರೆ.
ನೀವು ಹಣಕ್ಕಾಗಿ ಆಕರ್ಷಕ ಹಾಗೂ ತುಂಬಾ ಗ್ಲಾಮರಸ್ ಆಗಿರುವ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದೀರಾ ಎಂದು ಶಕೀಲಾ ಅವರು ಪ್ರಶ್ನೆ ಮಾಡಿದಾಗ, ಯಾವುದೇ ಹಿಂಜರಿಕೆಯಿಲ್ಲದೆ ಹೌದು, ನಾನು ಹಣಕ್ಕಾಗಿಯೇ ಹಂಚಿಕೊಳ್ಳುತ್ತೇನೆ. ಅದರಲ್ಲಿ ಭಾರಿ ಹಣ ಸಿಗುತ್ತದೆ ಎಂದು ಕಿರಣ್ ಓಪನ್ ಆಗಿಯೇ ಉತ್ತರಿಸಿದ್ದಾರೆ.
ಬಿಕಿನಿ ಹಾಗೂ ಅರ್ಧಂಬರ್ಧ ಉಡುಗೆ ಧರಿಸಿದ ಫೋಟೋಗಳನ್ನು ನಾನು ಹಂಚಿಕೊಳ್ಳುತ್ತೇನೆ. ನಾನೊಬ್ಬಳೇ ಅಲ್ಲ, ಸ್ಟಾರ್ ನಟಿಯರು ಕೂಡ ಹಂಚಿಕೊಳ್ಳುತ್ತಾರೆ. ಆದರೆ, ನನ್ನೊಬ್ಬಳನ್ನೇ ಏಕೆ ಟಾರ್ಗೆಟ್ ಮಾಡುತ್ತೀರಾ ಎಂದು ಕಿರಣ್ ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು. ಅಲ್ಲದೆ, ಯಾರು ಏನೇ ಹೇಳಲಿ ನಾನು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಜನರಿಗೆ ಅವರಿಗೆ ಅನಿಸಿದ್ದನ್ನು ಬರೆಯುವ ಹಕ್ಕಿದೆ. ನನಗೆ ಮೂರು ಮದುವೆ ಆಗಿದೆ ಮತ್ತು ಮೂವರು ಮಕ್ಕಳಿದ್ದಾರೆ ಎಂದು ಬರೆದಿದ್ದಾರೆ. ಆದರೆ, ನನಗೆ ಎಲ್ಲಿ ಮದುವೆಯಾಗಿದೆ? ಮಕ್ಕಳು ಎಲ್ಲಿದ್ದಾರೆ? ಬೇಕಾದನ್ನು ಬರೆಯುತ್ತಿದ್ದಾರೆ. ಈ ಮೊದಲು ಏನಾದರೂ ಬರೆದುಕೊಳ್ಳಲಿ ಅಂತ ಸುಮ್ಮನಿದ್ದೆ ಆದರೆ, ಈಗ ಸ್ಪಷ್ಟನೆ ಕೊಡಲೇಬೇಕಿದೆ. ಅದಕ್ಕಾಗಿ ನಾನು ಸಂದರ್ಶನಗಳನ್ನು ಕೊಡಲು ಆರಂಭಿಸಿದ್ದೇನೆ ಎಂದು ಕಿರಣ್ ಅವರು ಹೇಳಿದ್ದಾರೆ.
ಅಂದಹಾಗೆ 42 ವರ್ಷದ ಕಿರಣ್ ಈಗೀಗ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಹೊರತುಪಡಿಸಿ ಇನ್ಸ್ಟಾಗ್ರಾಂನಲ್ಲಿ ಗ್ಲಾಮರಸ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳ ಮೈ ಬಿಸಿಯೇರಿಸುತ್ತಿರುತ್ತಾರೆ. ಕಿರಣ್ ಅವರು ಇನ್ಸ್ಟಾಗ್ರಾಂಗೆ ಸೀಮಿತವಾಗದೆ, ಆ್ಯಪ್ ಒಂದನ್ನು ಆರಂಭಿಸಿ ಆ ಮೂಲಕ ಉದ್ಯಮಕ್ಕೂ ಕೈಹಾಕಿದ್ದಾರೆ. ಅಭಿಮಾನಿಗಳಿಗಾಗಿ kiran.celebgaze.in ಎಂಬ ಆ್ಯಪ್ ಮತ್ತು ವೆಬ್ಸೈಟ್ ತೆರೆದಿದ್ದಾರೆ. ಮೊಬೈಲ್ನಲ್ಲಿ ಈ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕಾದರೆ 49 ರೂ. ಪಾವತಿಸಬೇಕು. ಆ್ಯಪ್ ಮೂಲಕ ನೀವು ಸಾವಿರಾರು ರೂಪಾಯಿ ಪಾವತಿಸಿದರೆ ಕಿರಣ್ ಅವರು ಗ್ಲಾಮರಸ್ ಫೋಟೋಗಳನ್ನು ಕಳುಹಿಸಲಿದ್ದಾರಂತೆ. ಈಗಾಗಲೇ ಹಣ ಪಡೆಯುವ ಮೂಲಕ ಅಭಿಮಾನಿಗಳಿಗೆ ತಮ್ಮ ಗ್ಲಾಮರಸ್ ಅವತಾರವನ್ನು ಕಿರಣ್ ರಾಥೋಡ್ ಅನಾವರಣಗೊಳಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಗ್ಲಾಮರಸ್ ಫೋಟೋಗಳು ಸಣ್ಣ ಝಲಕ್ ಅನ್ನು ಕಿರಣ್ ಹರಿಬಿಡುತ್ತಿರುತ್ತಾರೆ. ಮತ್ತಷ್ಟು ಹಾಟ್ ಅವತಾರಕ್ಕಾಗಿ ಆ್ಯಪ್ ಮೊರೆ ಹೋಗಿ ಎಂದು ಪ್ರಚಾರ ಮಾಡುತ್ತಿದ್ದಾರೆ. (ಏಜೆನ್ಸೀಸ್)