ಹೈದರಾಬಾದ್: ಒಂದು ಕಾಲದಲ್ಲಿ ತಮಿಳು ಮತ್ತು ಮಲಯಾಳಂನ ಸಾಫ್ಟ್ಕೋರ್ ನೀಲಿ ಚಿತ್ರಗಳಲ್ಲಿ ನಟಿಸುವ ಮೂಲಕ ಶಕೀಲಾ ಅವರು ದೊಡ್ಡ ದೊಡ್ಡ ನಟರಿಗೆ ಪೈಪೋಟಿ ನೀಡಿದ್ದರು. ಶಕೀಲಾ ಅವರ ಚಿತ್ರ ಬಿಡುಗಡೆಯಾಗುವಾಗ ಸ್ಟಾರ್ ನಟರ ಚಿತ್ರಗಳೇ ಬದಿಗೆ ಸರಿಯುತ್ತಿದ್ದವು. ಆದರೆ ದಿನ ಕಳೆದಂತೆ ಶಕೀಲಾ ಅವರ ಖ್ಯಾತಿ ಕೂಡ ಕ್ಷೀಣಿಸುತ್ತಾ ಬಂದಿತು. ಅಲ್ಲದೆ, ಶಕೀಲಾ ನಿರಂತರವಾಗಿ ಸಾಫ್ಟ್ ಸಾಫ್ಟ್ಕೋರ್ ನೀಲಿ ಚಿತ್ರಗಳಲ್ಲಿ ನಟಿಸಿದ್ದರಿಂದ ಕೇರಳ ಸಿನಿಮಾ ಕ್ಷೇತ್ರದಿಂದಲೇ ಬ್ಯಾನ್ ಮಾಡಲಾಯಿತು. ಬಳಿಕ ಮಲಯಾಳಂ ಸಿನಿಮಾ ಇಂಡಸ್ಟ್ರಿ ಬಿಟ್ಟು ತಮಿಳುನಾಡಿಗೆ ಬಂದು ನೆಲೆಸಿದರು.
ತಮಿಳುನಾಡಿಗೆ ಬಂದು ನೆಲೆಸಿದ ಬಳಿಕ ನೀಲಿ ಸಿನಿಮಾಗಳ ನಟನೆಯಿಂದ ದೂರ ಉಳಿದ ಶಕೀಲಾ ತಮಗೆ ಸಿಕ್ಕ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡುತ್ತಾ ಬಂದರು. ಜಯಂ, ಅಳಗಿಯ ತಮಿಳ್ ಮಗನ್ ಸೇರಿದಂತೆ ಕೆಲವು ತಮಿಳು ಸಿನಿಮಾಗಳಲ್ಲಿಯೂ ಶಕೀಲಾ ನಟಿಸಿದ್ದಾರೆ. ಅಲ್ಲದೆ, ಟಿವಿ ರಿಯಾಲಿಟಿ ಶೋಗಳಲ್ಲಿಯೂ ಭಾಗಿಯಾಗಿದ್ದಾರೆ.
ಕನ್ನಡದ ಬಿಗ್ಬಾಸ್ ಶೋನಲ್ಲೂ ಶಕೀಲಾ ಅವರು ಕಾಣಿಸಿಕೊಂಡಿದ್ದರು. ಅಲ್ಲದೆ, ಶಕೀಲಾ ಕಳೆದ ವರ್ಷ ಕುಕ್ ವಿತ್ ಕೋಮಾಲಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ತಮ್ಮ ಅಡುಗೆ ಕೌಶಲ್ಯವನ್ನು ತೋರಿಸಿದರು. ಟಿವಿ ಶೋಗಳಲ್ಲಿ ಭಾಗವಹಿಸಿದ ಬಳಿಕ ಅವರ ಖ್ಯಾತಿಯು ಹೆಚ್ಚಾಯಿತು. ಅಭಿಮಾನಿ ಬಳಗವೂ ಬೆಳೆಯಿತು. ಇದೀಗ ಸಂದರ್ಶನವೊಂದರಲ್ಲಿ ಶಕೀಲಾ ಅವರು ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕಿದ್ದಾರೆ.
ತಮಿಳಿನ ಯೂಟ್ಯೂಬ್ ಚಾನೆಲ್ ಒಂದಕ್ಕೆ ಶಕೀಲಾ ಸಂದರ್ಶನ ನೀಡಿದ್ದು, ಅದರಲ್ಲಿ ಮೊದಲ ಬಾರಿಗೆ ಕನ್ಯತ್ವ ಕಳೆದುಕೊಂಡ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಯಾರೊಂದಿಗೆ ಮೊದಲ ಬಾರಿಗೆ ಸೆಕ್ಸ್ ಮಾಡಿದ್ರಿ ಎಂದು ಯೂಟ್ಯೂಬರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಕೀಲಾ, ನಾನೇನು ವರ್ಜಿನ್ ಅಲ್ಲ. ನಾನು ಮೊದಲ ಬಾರಿಗೆ ನನ್ನ ಸ್ನೇಹಿತ ರಿಚಾರ್ಡ್ ಜತೆಯಲ್ಲಿ ಲೈಂಗಿಕ ಕ್ರಿಯೆ ನಡೆಸಿದೆ ಎಂದು ಓಪನ್ ಆಗಿ ಹೇಳಿಕೊಂಡಿದ್ದಾರೆ.
ಈ ಹಿಂದಿನ ಸಂದರ್ಶನವೊಂದರಲ್ಲಿ ಶಕೀಲಾ ಅವರು ತಾವು ಎದುರಿಸಿದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದರು. ನನ್ನ ಬಗ್ಗೆ ಹಲವು ತಪ್ಪು ಮಾಹಿತಿಗಳಿವೆ. ನಾನು ಐಷಾರಾಮಿ ಫ್ಲ್ಯಾಟ್ ಮತ್ತು ಬಿಎಂಡಬ್ಲ್ಯು ಕಾರನ್ನು ಹೊಂದಿದ್ದೇನೆ ಎಂದು ವಿಕಿಪೀಡಿಯಾ ಪುಟವು ಹೇಳುತ್ತದೆ. ಆದರೆ, ಇದ್ಯಾವುದು ವಾಸ್ತವವಲ್ಲ. ನಾನಿನ್ನೂ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದೇನೆ ಎಂದು ಮೊದಲಿಗೆ ಸ್ಪಷ್ಟನೆ ನೀಡಿದರು. ಇದೇ ವೇಳೆ ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡರು. ವಯಸ್ಕರ ಸಿನಿಮಾಗಳ ಮೂಲಕ ಗಳಿಸಿದ ಹಣವನ್ನು ತನ್ನ ಸಹೋದರಿಗೆ ನೀಡಿದ್ದನ್ನು ಸ್ಮರಿಸಿದರು. ನಾನು ಪ್ರತಿ ದಿನಕ್ಕೆ 4 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದೆ. ಆಗ ಅಷ್ಟೊಂದು ಜನಪ್ರಿಯತೆ ಇತ್ತು. ಆದರೆ, ನನ್ನ ಸಹೋದರಿ ನನ್ನ ಎಲ್ಲ ಹಣವನ್ನು ತೆಗೆದುಕೊಂಡಳು ಮತ್ತು ನನಗಾಗಿ ಏನೂ ಉಳಿಸಲಿಲ್ಲ ಎಂದರು. (ಏಜೆನ್ಸೀಸ್)