ಸಿನಿವಾಣಿ

VIDEO | ಮುಖ ಮುಚ್ಚಿಕೊಂಡು ವೈಷ್ಣೋದೇವಿ ದರ್ಶನಕ್ಕೆ ತೆರಳಿದ ಶಾರೂಖ್: ಕಾಲೆಳೆದ ನೆಟ್ಟಿಗರು!

ಜಮ್ಮು: ಬಾಲಿವುಡ್ ನಟ ಶಾರುಖ್ ಖಾನ್ ಇತ್ತೀಚೆಗಷ್ಟೇ ಮೆಕ್ಕಾಗೆ ಭೇಟಿ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಪಠಾಣ್ ಸಿನಿಮಾ ನಿರ್ದೇಶಕ ಸಿದ್ಧಾರ್ಥ್ ಆನಂದ್ ಜೆತೆಗೆ ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ವೈಷ್ಣೋದೇವಿ ದೇವಸ್ಥಾನಕ್ಕೆ ಸದ್ದಿಲ್ಲದೆ ಭೇಟಿ ನೀಡಿದ್ದಾರೆ.

ಬೆಳ್ಳಂಬೆಳಗ್ಗೆ ವೈಷ್ಣೋದೇವಿ ದೇವಸ್ಥಾನಕ್ಕೆ ತಮ್ಮ ಮುಖ ಕಾಣದಂತೆ ಶಾರುಖ್ ಖಾನ್ ಬಂದಿದ್ದಾರೆ. ಶಾರುಖ್ ಖಾನ್ ಕಾರಿನಿಂದ ಇಳಿಯುತ್ತಿದ್ದಂತೆ ಅವರ ಬಾಡಿಗಾರ್ಡ್​​ಗಳು ಸುತ್ತುವರಿದಿದ್ದಾರೆ. ನಂತರ ನೇರವಾಗಿ ದೇವರ ದರ್ಶನಕ್ಕೆ ಹೋಗಿದ್ದಾರೆ.

ಶಾರುಖ್ ಖಾನ್ ತಮ್ಮ ಮುಖ ಕಾಣದಂತೆ ದೇವರ ದರ್ಶನಕ್ಕೆ ಹೋಗುತ್ತಿರುವ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ. ಇನ್ನು ಶಾರುಖ್ ಕಾರಿನಿಂದ ಇಳಿಯುತ್ತಿದ್ದಂತೆ ಫೋಟೋ ತೆಗಯಲು ಅಲ್ಲಿದ್ದ ಜನರು ಮುಂದೆ ಬಂದಾಗ ಭಧ್ರತಾ ಸಿಬ್ಬಂದಿ ಫೋಟೋ ತೆಗೆಯಬೇಡಿ ಎಂದು ಹೇಳಿರುವುದು ವರದಿಯಾಗಿದೆ. (ಏಜೆನ್ಸೀಸ್)