ಮುಂಬೈ: ಬಾಲಿವುಡ್ನ ಅತ್ಯಂತ ಜನಪ್ರಿಯ ಚಿತ್ರಗಳ ಪೈಕಿ ಶಾರೂಖ್ ಖಾನ್ ಮತ್ತು ಕಾಜೋಲ್ ಅಭಿನಯದ 'ದಿಲ್ವಾಲೇ ದುಲ್ಹನಿಯಾ ಲೇ ಜಾಯೇಂಗೆ' ಸಹ ಒಂದು. ಈ ಚಿತ್ರ 1995ರ ಅಕ್ಟೋಬರ್ 20ರಂದು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಮತ್ತು ಜನಪ್ರಿಯತೆಗಳೆರಡನ್ನೂ ಪಡೆದಿತ್ತು.
ಇದನ್ನೂ ಓದಿ: ಏನಿದು ‘ಸೌಲ್ ಆಫ್ ದಿಯಾ’? ಇಲ್ಲಿದೆ ನೋಡಿ ಉತ್ತರ …
ಈಗ ಚಿತ್ರ ಬಿಡುಗಡೆಯಾಗಿ 25 ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ, ಲಂಡನ್ನ ಲೇಸಿಸ್ಟರ್ ಸ್ಕ್ವೇರ್ನಲ್ಲಿ ಶಾರೂಖ್ ಮತ್ತು ಕಾಜೋಲ್ ಅವರ ಕಂಚಿನ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಶಾರೂಖ್ ಮತ್ತು ಕಾಜೋಲ್ ಇಬ್ಬರೂ ಈ ಚಿತ್ರದಲ್ಲಿ ರಾಜ್ ಮತ್ತು ಸಿಮ್ರನ್ ಎಂಬ ಪಾತ್ರಗಳನ್ನು ಮಾಡಿದ್ದರು. ಈ ಪಾತ್ರಗಳು ಈಗಲೂ ಅದೆಷ್ಟು ಜನಪ್ರಿಯವಾಗಿವೆ ಎಂದರೆ, ಈ ಪಾತ್ರಗಳ ನೆನಪಲ್ಲಿ ಕಂಚಿನ ಪ್ರತಿಮೆಗಳ ನಿರ್ಮಾಣವಾಗುತ್ತಿದ್ದು, ಮುಂದಿನ ವರ್ಷ ಪ್ರತಿಷ್ಠಾಪಿಸಲಾಗುತ್ತಿದೆ.
ವಿಶೇಷವೆಂದರೆ, ಈ ಪ್ರತಿಮೆಗಳನ್ನು ಹ್ಯಾರಿ ಪಾಟರ್, ಬ್ಯಾಟ್ಮ್ಯಾನ್ ಮುಂತಾದ ಹಾಲಿವುಡ್ನ ಜನಪ್ರಿಯ ಪಾತ್ರಗಳ ಪ್ರತಿಮೆಗಳ ಜತೆಗೆ ಪ್ರತಿಷ್ಠಾಪಿಸಲಾಗುತ್ತಿದೆ. ವಿಶೇಷವೆಂದರೆ, ಇಂಗ್ಲೆಂಡ್ನಲ್ಲಿ ಪ್ರತಿಷ್ಠಾಪನೆಯಾಗುತ್ತಿರುವ ಭಾರತದ ಮೊದಲ ಬಾಲಿವುಡ್ ಪ್ರತಿಮೆ ಎಂಬ ಹೆಗ್ಗಳಿಕೆಗೆ ಈ ಪ್ರತಿಮೆ ಪಾತ್ರವಾಗಿದೆ.
ಎಲ್ಲಾ ಸರಿ, ಪ್ರತಿಮೆಗಳು ಇಲ್ಲೇ ಏಕೆ ಪ್ರತಿಷ್ಠಾಪೆನಯಾಗಬೇಕು ಎಂಬುದಕ್ಕೂ ಕಾರಣವಿದೆ. ಪ್ರಮುಖವಾಗಿ, ಚಿತ್ರದಲ್ಲಿ ಇದೇ ಲೊಕೇಶನ್ನಲ್ಲಿ ರಾಜ್ ಮತ್ತು ಸಿಮ್ರನ್ ಮೊದಲ ಬಾರಿ ಭೇಟಿಯಾಗುತ್ತಾರೆ. ಹಾಗಾಗಿ ಲೇಸಿಸ್ಟರ್ ಸ್ಕ್ವೇರ್ ನ ಓಡಿಯನ್ ಸಿನಿಮಾ ಹೊರಗೆ ಈ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಭಾರತೀಯ ಚಿತ್ರರಂಗದಲ್ಲೇ ಸುಧೀರ್ಘ ಪ್ರದರ್ಶನ ಕಂಡ ಚಿತ್ರರಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 'ದಿಲ್ವಾಲೆ ಸುಲ್ಹನಿಯಾ ಲೇ ಜಾಯೆಂಗೆ' ಚಿತ್ರವನ್ನು ನಿರ್ದೇಶಿಸಿದವರು ಆದಿತ್ಯ ಚೋಪ್ರಾ. ಯಶ್ ಚೋಪ್ರಾ ನಿರ್ಮಾಣದ ಈ ಚಿತ್ರದಲ್ಲಿ ಶಾರೂಖ್, ಕಾಜೋಲ್, ಅನುಪಮ್ ಖೇರ್, ಅಮರೀಶ್ ಪುರಿ, ಫರೀದಾ ಜಲಾಲ್, ಮಂದಿರಾ ಬೇಡಿ ಸೇರಿದಂತೆ ಹಲವರು ನಟಿಸಿದ್ದರು.