ಸಿನಿವಾಣಿ

ಮಗಳೇ ನಾಳಿನ ಗಣಿತದ ಹೋಮ್‌ವರ್ಕ್ ಆಯ್ತಾ?; ಕಿರಿಯ ನಟಿಯೊಂದಿಗೆ ರೊಮ್ಯಾಂಟಿಕ್ ದೃಶ್ಯ ನೆನೆದ ಶಾರುಖ್ ಖಾನ್, ವಯಸ್ಸಿಗೆ ತಕ್ಕ ಪಾತ್ರ ನಿರ್ವಹಿಸಲು ನಿರ್ಧಾರ!

  • ಕಿರಿಯ ನಟಿಯೊಂದಿಗೆ ರೊಮ್ಯಾಂಟಿಕ್​ ದೃಶ್ಯ ಮಾಡಲಾಗದೆ ಒದ್ದಾಡಿದ ಘಟನೆ ನೆನಪಿಸಿಕೊಂಡ ಶಾರುಖ್​ ಖಾನ್​.

  • ವಯಸ್ಸಿಗೆ ತಕ್ಕಂತೆ 'ಕೂಲ್' ಆಗಿರುವ ಪಾತ್ರಗಳನ್ನು ಮಾಡಲು ನಿರ್ಧರಿಸಿದ ಬಗ್ಗೆ ಮಾತು.

  • 61 ವರ್ಷದ ವ್ಯಕ್ತಿ ಎಷ್ಟು ಕೂಲ್ ಆಗಿರಬಲ್ಲನೋ ಅಷ್ಟು ಕೂಲ್ ಆಗಿರಲು ಬಯಸುತ್ತೇನೆ ಎಂದ ಶಾರುಖ್.

'ನಿನ್ನ ಕಣ್ಣುಗಳಲ್ಲಿ ಕಳೆದು ಹೋಗಲು ಬಯಸುತ್ತೇನೆ..ನಿನ್ನನ್ನು ತುಂಬಾ ಪ್ರೀತಿಸುತ್ತೇನೆ..ನಾಳೆಯ ಗಣಿತ ಹೋಂ ವರ್ಕ್ ಮಾಡಿದ್ದೀಯಾ ಮಗಳೇ' ಇತ್ತೀಚೆಗೆ ನಟ ಶಾರುಖ್​ ಖಾನ್​ ಅವರು ತಮಗಿಂತ ಅತ್ಯಂತ ಕಿರಿಯ ನಟಿಯೊಂದಿಗೆ ರೊಮ್ಯಾಂಟಿಕ್​ ಸೀನ್​ ಶೂಟ್ ಮಾಡುವಾಗ ನಡೆದ ಪ್ರಸಂಗವೊಂದನ್ನು ನೆನಪಿಸಿಕೊಂಡರು. ಜೊತೆಗೆ ವಯಸ್ಸಿಗೆ ತಕ್ಕಂತೆ 'ಕೂಲ್' ಆಗಿರುವ ಪಾತ್ರಗಳನ್ನು ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಮುಂಬೈನ ದಿ ಲೀಲಾ ಹೋಟೆಲ್​​ನಲ್ಲಿ ನಡೆದ 'ಹೌಸ್ ಆಫ್ ಇನ್‌ಸ್ಟಾಗ್ರಾಮ್' ಕಾರ್ಯಕ್ರಮವನ್ನು ಚಿತ್ರ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಟ್ಟರು. ಇದರಲ್ಲಿ ಭಾಗಿಯಾಗಿದ್ದ ಶಾರುಖ್​ ಖಾನ್​ ಅವರು, ತಮಗೆ ಹೀರೋ ಆಗಬೇಕು ಎಂದಿದ್ದ ಹುಚ್ಚು ಮತ್ತು, ಮುಂದಿನ ದಿನಗಳಲ್ಲಿ ತಾವು ಯಾವ ಪಾತ್ರಗಳನ್ನು ತೆಗೆದುಕೊಳ್ಳಬೇಕು ಎನ್ನುವುದನ್ನು ನಿರ್ಧರಿಸಿದ್ದಾಗಿ ಮಾಹಿತಿ ಹಂಚಿಕೊಂಡರು. ಜೊತೆಗೆ ಡಿಸೆಂಬರ್​ 24ರಂದು ರಿಲೀಸ್​ ಆಗಲಿರುವ ಕಿಂಗ್​ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

ಯುವ ನಟಿ ಜೊತೆಗಿನ ಸೀನ್​ ಬಗ್ಗೆ ಹೇಳಿದ್ದು ಹೀಗೆ

ನಟ ಶಾರುಖ್​ ಖಾನ್​ ಮಾತು ಆರಂಭಿಸಿದ್ದು ಹೀಗೆ, 'ನಾನು ಒಂದು ಸಿನಿಮಾದಲ್ಲಿ ನಟಿಸುತ್ತಿದ್ದೆ. ಆ ಸಿನಿಮಾ ಬಗ್ಗೆ ಕರಣ್​ಗೆ ಗೊತ್ತಿದೆ. ಆ ನಟಿ ಯಾರು ಎಂದು ಮತ್ತು ಸಿನಿಮಾ ಯಾವುದೆಂದು ನಾನು ಹೇಳೋದಿಲ್ಲ. ಅದರಲ್ಲಿ ಒಂದು ರೊಮ್ಯಾಂಟಿಕ್​ ಸೀನ್​ ಇತ್ತು. ಆ ಸಿನಿಮಾದ ಡೈಲಾಗ್​ ಹೇಳಿದ ಅವರು, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ; ನಿನ್ನ ಕಣ್ಣುಗಳಲ್ಲಿ ಕಳೆದುಹೋಗಲು ಬಯಸುತ್ತೇನೆ. ನಿನ್ನನ್ನು ನೋಡಿದಾಗ ಇಡೀ ಜಗತ್ತನ್ನೇ ನೋಡಿದಂತಾಗುತ್ತದೆ' ಎಂದು ಹೇಳಿದೆ. ಆ ಬಳಿಕ,'ಮತ್ತು ಇನ್ನೊಂದು ವಿಷಯ: ನಾಳೆಗಾಗಿ ನೀನು ಗಣಿತದ ಹೋಮ್‌ವರ್ಕ್ ಮುಗಿಸಿದ್ದೀಯಾ ಎಂದು ಭಾವಿಸುತ್ತೇನೆ, ಮಗಳೇ' ಎಂದು ಕೇಳಿದ್ದೆ.

ವಯಸ್ಸಿಗೆ ತಕ್ಕಂತೆ ಪಾತ್ರ ಆಯ್ಕೆ

ಆ ಕ್ಷಣ ನೆನಪಾಗಿ ಉಳಿಯಿತು. ನಾನು ನಟಿಸುತ್ತಿದ್ದ ಸಿನಿಮಾದಲ್ಲಿನ ನಟಿಯರ ವಯಸ್ಸು ಮತ್ತು ನನ್ನ ವಯಸ್ಸಿನ ನಡುವಿನ ಅಂತರ ತುಂಬಾ ಹೆಚ್ಚಿತ್ತು. ಈಗ ನಾನೊಂದು ನಿರ್ಧಾರಕ್ಕೆ ಬಂದಿದ್ದೇನೆ ಅದು, ನಾನು ನನ್ನ ವಯಸ್ಸಿನ ಆಸುಪಾಸು ಇರುವವರ ಜೊತೆಗೆ ನಟಿಸಬೇಕು ಎಂದು ನಿರ್ಧರಿಸಿದ್ದೇನೆ. 61 ವರ್ಷದ ವ್ಯಕ್ತಿ ಎಷ್ಟು ಕೂಲ್ ಆಗಿರಬಲ್ಲನೋ ಅಷ್ಟು ಕೂಲ್ ಆಗಿರಲಿದ್ದೇನೆ ಎಂದು ತಮಾಷೆ ಮಾಡಿದರು.

'ಹಾಗಾಗಿ, ಇಂದಿಗೂ ನಾನು ಕುಳಿತೋ ನಿಂತೋ ಯಾವುದೇ ಡೈಲಾಗ್ ಹೇಳಿದರೂ, ಅದು ಇನ್ನೂ ಪ್ರಸ್ತುತವಾಗಿಯೇ ಕಾಣಿಸುತ್ತದೆ. ಜಗತ್ತಿನ ಎಲ್ಲಾ ಹುಡುಗಿಯರೂ ಏಕೆಂದರೆ ನನ್ನ ಮಗಳು ಸುಹಾನಾ ಕೂಡ ಈ ಸಿನಿಮಾದ ಭಾಗವಾಗಿದ್ದಾಳೆ. ನನ್ನ ತಂದೆ ಹೀಗೆಯೇ ಇರಬೇಕು ಎಂದುಕೊಳ್ಳುತ್ತಾರೆ. ನಾನು 60ರ ವಯಸ್ಸಿನಲ್ಲೂ ಹೀರೋ ಆಗಿರಲು ಮತ್ತು ನನ್ನ ವಯಸ್ಸಿಗೆ ತಕ್ಕಂತೆ ನಟಿಸಲು ಬಯಸಿದೆ ಎಂದು ಅವರು ತಿಳಿಸಿದರು.

ಹೀರೋ ಆಗ್ಬೇಕು ಎನ್ನುವುದಿತ್ತು

ಹೀರೋ ಆಗಬೇಕು ಎನ್ನುವ ಕಲ್ಪನೆ ತನಗೆ ಎಷ್ಟು ಮಹತ್ವದ್ದಾಗಿತ್ತು ಎಂಬುದನ್ನು ಹೇಳುವ ಮೂಲಕ ಶಾರುಖ್ ತಮ್ಮ ಮಾತು ಆರಂಭಿಸಿದರು. ಚಿತ್ರರಂಗದ ಆರಂಭದ ದಿನಗಳನ್ನು ನೆನಪಿಸಿಕೊಂಡ ಅವರು, ತಾನು ಅಷ್ಟೇನೂ ಸುಂದರವಾಗಿಲ್ಲ ಎಂದು ಭಾವಿಸಿದ್ದರಿಂದ, ಮುಖ್ಯ ಪಾತ್ರದಲ್ಲಿ (ಲೀಡಿಂಗ್ ಮ್ಯಾನ್) ನಟಿಸುವ ಅವಕಾಶವನ್ನು ತುಂಬಾ ಅಮೂಲ್ಯವಾಗಿ ಕಂಡಿದ್ದಾಗಿ ಹೇಳಿದರು.

'ನನಗೆ ಯಾವಾಗಲೂ ಹೀರೋ ಆಗಬೇಕೆಂಬ ಆಸೆ ಇತ್ತು. ನಾನು ಮೊದಲು ಚಿತ್ರರಂಗಕ್ಕೆ ಬಂದಾಗ ನಾನು ಅಷ್ಟು ಚೆನ್ನಾಗಿ ಕಾಣುತ್ತಿಲ್ಲ ಅನಿಸುತ್ತಿತ್ತು. ಹಾಗಾಗಿ, ನನ್ನಂತಹ ಸರಳವಾಗಿ ಕಾಣುವ ವ್ಯಕ್ತಿಗೆ ಹೀರೋ ಆಗುವ ಅವಕಾಶ ಸಿಕ್ಕಾಗ, ಅದನ್ನು ನಾನು ತುಂಬಾ ಪ್ರೀತಿಯಿಂದ ಜೋಪಾನ ಮಾಡಿದೆ' ಎಂದು ಅವರು ಹೇಳಿದರು, (ಏಜೆನ್ಸೀಸ್).