ಸಿನಿವಾಣಿ

ನನಗೆ ಬಂದ ಪರಿಸ್ಥಿತಿ ಯಾರಿಗೂ ಬಾರದಿರಲಿ: ಟ್ರೋಲಿಗರಿಗೂ ಒಳ್ಳೆಯದ್ದನ್ನೇ ಬಯಸಿದ ಸಮಂತಾ

ಹೈದರಾಬಾದ್​: ನಟಿ ಸಮಂತಾ ನಟನೆಯ ಬಹುನಿರೀಕ್ಷಿತ ಶಾಕುಂತಲಂ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಿನ್ನೆಯಷ್ಟೇ (ಜ.9) ಹೈದರಾಬಾದ್​ನಲ್ಲಿ ಟ್ರೈಲರ್​ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ನಿರ್ದೇಶಕ ಗುಣಶೇಖರ್​ ಆಡಿದ ಮಾತಿಗೆ ಸಮಂತಾ ವೇದಿಕೆ ಮೇಲೆಯೇ ಭಾವುಕರಾಗಿ ಕಣ್ಣೀರು ಸುರಿಸಿದರು.

ನನ್ನ ಸಿನಿಮಾದ ಮೊದಲ ಹೀರೋ ಸಮಂತಾ ಎಂದ ನಿರ್ದೇಶಕ ಗುಣ ಶೇಖರ್ ಹೊಗಳಿದರು. ಈ ವೇಳೆ ನಿರ್ದೇಶಕರ ಮಾತು ಕೇಳಿ ಇದ್ದಕ್ಕಿದ್ದಂತೆ ಸಮಂತಾ ಕಣ್ಣೀರಾಕಿದರು. ಸಮಂತಾರ ಕಣ್ಣೀರು ಕಂಡು ನಿರ್ದೇಶಕರು ಸಹ ಭಾವುಕರಾದರು. ಮಯೋಸಿಟಿಸ್​ ಎಂಬ ವಿಚಿತ್ರ ಕಾಯಿಲೆಯಿಂದ ಸಮಂತಾ ಬಳಲುತ್ತಿದ್ದು, ತುಂಬಾ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿಕಿತ್ಸೆಯ ನಡುವೆಯೇ ಸಮಂತಾ ನಟನೆಯ ಯಶೋದಾ ಸಿನಿಮಾ ಬಿಡುಗಡೆಯಾಗಿತ್ತು. ಆ ಕ್ಷಣದಲ್ಲೂ ಸಿನಿ ಪ್ರಚಾರದಲ್ಲಿ ಸಮಂತಾ ಕಾಣಿಸಿಕೊಂಡಿದ್ದರು. ಇದೀಗ ತುಂಬಾ ದಿನಗಳ ವಿರಾಮ ನಂತರ ಶಾಕುಂತಲಂ ಸಿನಿಮಾ ಟ್ರೈಲರ್​ ವೇಳೆ ಸಮಂತಾ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ವೇದಿಕೆಯಲ್ಲಿ ಸಮಂತಾ ಕಣ್ಣೀರಿಟ್ಟಿದ್ದನ್ನು ಕಂಡು, ಸ್ಯಾಮ್ ನೀವು ತುಂಬಾ ಸ್ಟ್ರಾಂಗ್ ಆಗಿರಬೇಕು ಎಂದು ಅಭಿಮಾನಿಗಳು ಧೈರ್ಯ ತುಂಬುತ್ತಿದ್ದಾರೆ.

ಸಮಂತಾ ಅವರು ತಮ್ಮ ಸೌಂದರ್ಯ ಮತ್ತು ಕಾಂತಿಯನ್ನು ಕಳೆದುಕೊಂಡಿದ್ದಾರೆ. ಡಿವೋರ್ಸ್​ ಆದ ಬಳಿಕವು ಸಮಂತಾ ಅವರು ಮತ್ತೆ ಪುಟಿದೇಳುತ್ತಾರೆ ಮತ್ತು ವೃತ್ತಿ ಬದುಕಿನಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದ್ದಾರೆ ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ, ಮಯೋಸಿಟಿಸ್​ ಆಕೆಯ ಮೇಲೆ ತೀವ್ರ ಪರಿಣಾಮ ಬೀರಿದ್ದು, ಸಮಂತಾರನ್ನು ಮಾನಸಿಕವಾಗಿ ಕುಗ್ಗಿಸಿದೆ ಎಂಬ ಬರಹವುಳ್ಳ ಪೋಸ್ಟ್​ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೋಸ್ಟರ್​ ಅನ್ನು ಶೇರ್​ ಮಾಡಿ ಟ್ವೀಟ್​ ಮಾಡಿರುವ ಸಮಂತಾ ನನ್ನಂತೆ ತಿಂಗಳುಗಟ್ಟಲೆ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಯಾರಿಗೂ ಬಾರದಿರಲಿ ಎಂದು ಪಾರ್ಥಿಸಿದ್ದಾರೆ. ಕಷ್ಟದ ಸಮಯದಲ್ಲೂ ಸಮಂತಾರ ಆರೋಗ್ಯ ಸ್ಥಿತಿಯನ್ನು ಅಣಕಿಸಿ ಟ್ರೋಲ್​ ಮಾಡಿದವರಿಗೂ ಸಮಂತಾ ಒಳ್ಳೆಯದನ್ನೇ ಬಯಸಿ, ದೊಡ್ಡತನ ಮೆರೆದಿದ್ದಾರೆ.

ಏನಿದು ಮಯೋಸಿಟಿಸ್​?

ಮಯೋಸಿಟಿಸ್​ ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ಸಮಂತಾ ಹೇಳಿದ್ದಾರೆ. ಈ ಕಾಯಿಲೆಯಿಂದ ಮಾಂಸಖಂಡಗಳು ವೀಕ್​ ಆಗುತ್ತವಂತೆ. ಮಾಂಸಖಂಡಗಳಲ್ಲಿ ಉರಿಯೂತ ಕಾಣಿಸಿಕೊಳ್ಳುತ್ತವಂತೆ. ಸಮಂತಾರ ಈ ಆರೋಗ್ಯ ಸ್ಥಿತಿಗೆ ಅತಿಯಾದ ವರ್ಕೌಟ್​ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಜಿಮ್‌ನಲ್ಲಿ ಹೆಚ್ಚು ಸಮಯ ಕೆಳೆಯುವವರು ಹಾಗೂ ಎಂದಿಗೂ ಸಾಮಾನ್ಯ ದೈನಂದಿನ ಕೆಲಸ ಮಾಡದ ಜನರು ಈ ಮೈಯೋಸಿಟಿಸ್‌ನಂತಹ ಆರೋಗ್ಯ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಅಲ್ಲದೆ, ಅಂತರಾಷ್ಟ್ರೀಯ ವೈದ್ಯಕೀಯ ನಿಯತಕಾಲಿಕಗಳ ಪ್ರಕಾರ ಆಲ್ಕೋಹಾಲ್ ಮತ್ತು ಡ್ರಗ್ಸ್‌ನ ಅತಿಯಾದ ಬಳಕೆಯು ಸಹ ಈ ಸ್ಥಿತಿಗೆ ಕಾರಣವಾಗುತ್ತದೆಯಂತೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೇ ಸಮಂತಾ ತುಂಬಾ ವರ್ಕೌಟ್​ ಮಾಡುತ್ತಿದ್ದರು. ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸದಾ ಹಂಚಿಕೊಳ್ಳುತ್ತಿದ್ದರು. ಜಿಮ್​ನಲ್ಲಿ ಸಮಂತಾ ಅವರು ತುಂಬಾ ಕಠಿಣವಾದ ಅಭ್ಯಾಸಗಳನ್ನೇ ಮಾಡಿದ್ದಾರೆ. ಅಲ್ಲದೆ, ಹೆಚ್ಚು ಸಮಯ ಜಿಮ್​ನಲ್ಲಿ ಕಳೆಯುತ್ತಿದ್ದರು. ದೇಹವನ್ನು ಫಿಟ್​ ಆಗಿ ಇಡಲು ಅತಿಯಾದ ಜಿಮ್​ ಮಾಡಿದ ಕಾರಣ ಇಂದು ಈ ಆರೋಗ್ಯ ಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ಇದೇ ಸಮಯದಲ್ಲಿ ನಾಗಚೈತನ್ಯರೊಂದಿಗಿನ ಡಿವೋರ್ಸ್​ ಕಾರಣದಿಂದಾಗಿ ಸಮಂತಾ ಖಿನ್ನತೆಗೂ ಜಾರಿದ್ದರು ಎನ್ನಲಾಗಿದೆ.

'ಶಾಕುಂತಲಂ’ ಚಿತ್ರವನ್ನು ಗುಣ ಟೀಂವರ್ಕ್ಸ್​ ಬ್ಯಾನರ್​ನಡಿ ನಿರ್ಮಾಣವಾಗಿದ್ದು, ಕಾಳಿದಾಸನ ‘ಅಭಜ್ನಾನ ಶಾಕುಂತಲ’ವನ್ನು ಆಧರಿಸಿದೆ. ಈ ಚಿತ್ರದಲ್ಲಿ ಸಮಂತಾ ಜತೆಗೆ ಅಲ್ಲು ಅರ್ಜುನ್​ ಮಗಳು ಅಲ್ಲು ಅರ್ಹ, ಮೋಹನ್​ ಬಾಬು, ಸಚಿನ್​ ಖೇಡೇಕರ್​, ಗೌತಮಿ ಮುಂತಾದವರು ನಟಿಸಿದ್ದು, ಚಿತ್ರವು ಫೆಬ್ರವರಿ 17ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)