ಬೆಂಗಳೂರು: ಸಿನಿಮಾ ಮಂದಿಯ ಸೋಷಿಯಲ್ ಮೀಡಿಯಾ ಖಾತೆ ಆಗಾಗ ಹ್ಯಾಕ್ ಆಗುತ್ತಲೇ ಇರುತ್ತವೆ. ಇದೀಗ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಅವರ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ. ಅಷ್ಟೇ ಅಲ್ಲ ತಕ್ಷಣ ಅದನ್ನು ಸರಿಪಡಿಸಿಕೊಂಡಿದ್ದಾರವರು.
ಹೌದು, ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೇಘಾ, ನನ್ನ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿತ್ತು. ಆದರೆ, ನಾನು ಅದನ್ನು ಇದೀಗ ಸರಿಪಡಿಸಿಕೊಂಡಿದ್ದೇನೆ. ಸಾಕಷ್ಟು ಜನ ಮತ್ತು ಅಭಿಮಾನಿಗಳು ನಿಮ್ಮ ಖಾತೆಯನ್ನು ಯಾರು ಹ್ಯಾಂಡಲ್ ಮಾಡುತ್ತಿದ್ದಾರೆ ಎಂದು ಕೇಳಿದ್ದರು. ನನ್ನ ಖಾತೆಯನ್ನು ನಾನೇ ನಿಭಾಯಿಸುತ್ತಿದ್ದೇನೆ‘ ಎಂದು ಹೇಳಿಕೊಂಡಿದ್ದಾರೆ.
ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡುತ್ತಿರುವ ನಟಿ ಮೇಘಾ ಶೆಟ್ಟಿ, ಆ ಧಾರಾವಾಹಿಯ ಖ್ಯಾತಿಯಿಂದಲೇ ಗಣೇಶ್ ಜತೆಗೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಚಾನ್ಸ್ ಸಹ ಗಿಟ್ಟಿಸಿಕೊಂಡು ಇದೀಗ ಸಿನಿಮಾದಲ್ಲಿಯೂ ಸಕ್ರಿಯರಾಗಿದ್ದಾರೆ. ಅಷ್ಟೇ ಅಲ್ಲ ಮೋನಿಕಾ ಕಲ್ಲೂರಿ ಅವರ ನೋಡು ಶಿವ ಹೆಸರಿನ ಆಲ್ಬಂನಲ್ಲಿಯೂ ಹಾಡಿಗೆ ಹೆಜ್ಜೆ ಹಾಕಿದ್ದಾರೆ.