ಸಿನಿವಾಣಿ

ಚಿತ್ರೋತ್ಸವಗಳಲ್ಲಿ ಒಪ್ಟಿಮೆಲೊ; ಸೈನ್ಸ್ ಫಿಕ್ಷನ್ ಕಥಾಹಂದರದ ಕಿರುಚಿತ್ರ

Webdesk - Ravikanth

ಕನ್ನಡದಲ್ಲಿ ‘ಕಿರು’ ಪ್ರಯತ್ನಗಳು ಒಂದೆರಡಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಕಿರುಚಿತ್ರಗಳನ್ನು ಮಾಡುತ್ತಲೇ ಇರುತ್ತಾರೆ. ಸಾಕಷ್ಟು ಪ್ರಯತ್ನಗಳಿಗೆ ಮನ್ನಣೆಯೂ ಸಿಕ್ಕಿದೆ. ಇದೀಗ ಅಂಥದ್ದೇ ಮತ್ತೊಂದು ಪ್ರಯತ್ನ ‘ಒಪ್ಟಿಮೆಲೊ’. ಆಕಾಶ್ ಕೋಟೆಮನೆ ನಿರ್ದೇಶನ ಮಾಡಿರುವ ‘ಒಪ್ಟಿಮೆಲೊ’, ಸೈನ್ಸ್ ಫಿಕ್ಷನ್ ಕಥಾಹಂದರದ ಕಿರುಚಿತ್ರ. ಕನ್ನಡದಲ್ಲಿ ಈ ಪ್ರಯತ್ನ ಹೊಸದು ಎಂದು ಹೇಳಿಕೊಳ್ಳುತ್ತಾರೆ ನಿರ್ದೇಶಕರು. ಸಮಯದ ಭ್ರಮಾಲೋಕದ ಗೊಂದಲದಲ್ಲಿ ಸಿಲುಕಿರುವ ವ್ಯಕ್ತಿಯ ಕಾಲ್ಪನಿಕ ದೃಶ್ಯರೂಪಕ. ಮಾರ್ಗದರ್ಶಕನ ಅಣತಿಯಂತೆ ಭೂತ, ವರ್ತಮಾನ ಹಾಗೂ ಭವಿಷ್ಯದ ಜಂಜಾಟದಿಂದ ತಪ್ಪಿಸಿಕೊಳ್ಳಲು ಆ ವ್ಯಕ್ತಿ ಹೆಣಗಾಡುವ ಕಥನವನ್ನು ‘ಒಪ್ಟಿಮೆಲೊ’ದಲ್ಲಿ ಹೇಳಲಾಗಿದೆಯಂತೆ.

ಈಗಾಗಲೇ ದೇಶ ವಿದೇಶದ ಹತ್ತು ಹಲವು ಸಿನಿಮೋತ್ಸವಗಳಲ್ಲಿ ಈ ಕಿರುಚಿತ್ರ ಪ್ರದರ್ಶನವಾಗಿ ಪ್ರಶಸ್ತಿಯ ಜತೆಗೆ ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ‘ನನ್ನರಸಿ ರಾಧೆ’ ಧಾರಾವಾಹಿ ಖ್ಯಾತಿಯ ನಟ ಶಿಶಿರ್ ಕುಮಾರ್ ಮತ್ತು ವಿಶಾಖ್, ವಿಶ್ವಾಸ್ ಈ ಮೂರು ಪಾತ್ರಗಳ ಮೇಲೆ ಕಿರುಚಿತ್ರ ಸಾಗಲಿದೆ. ಅರುಣ್ ಛಾಯಾಗ್ರಹಣ, ಕ್ಲಾರೆನ್ಸ್ ಅಲೆನ್ ಸಂಗೀತ ಚಿತ್ರಕ್ಕಿದೆ.