ಬೆಂಗಳೂರು: ಕನ್ನಡದಲ್ಲಿ ಸಾಕಷ್ಟು ಹಾರರ್ ಕಥಾಹಂದರವಿರುವ ಚಿತ್ರಗಳು ಬಂದಿವೆ. ಹೀಗಿರುವಾಗ ಅಂಥದ್ದೆ ಭಯಬೀಳಿಸುವ ವಿಭಿನ್ನ ಕಥೆಯುಳ್ಳ 'ಸ್ಕೇರಿ ಫಾರೆಸ್ಟ್' ಚಿತ್ರ ಫೆಬ್ರವರಿ 26ರಂದು ಬಿಡುಗಡೆಯಾಗಲಿದೆ.ಈ ಚಿತ್ರಕ್ಕೆ ಪ್ರೀತಿ- ಭಯ- ಆತ್ಮ ಎಂಬ ಅಡಿಬರಹವಿದೆ. ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಸ್ನೇಹಿತ - ಸ್ನೇಹಿತೆಯರು ಸಂಶೋಧನೆಗಾಗಿ ಕಾಡಿಗೆ ತೆರಳುತ್ತಾರೆ. ಆಗ ಆ ಕಾಡಿನಲ್ಲಿ ಏನೆಲ್ಲಾ ನಡೆಯುತ್ತದೆ? ಎನ್ನುವುದು ಈ ಚಿತ್ರದ ಕಥಾವಸ್ತು. ಮೂಲತಃ ತುಮಕೂರಿನ ಮಾರಶೆಟ್ಟಿ ಹಳ್ಳಿಯವರಾದ ಜಯಪ್ರಭು ಆರ್ ಲಿಂಗಾಯಿತ್ ಈಗ ಮುಂಬೈನಲ್ಲಿ ನೆಲೆಸಿದ್ದಾರೆ. ಅವರೇ ಈ ಚಿತ್ರದ ನಿರ್ಮಾಪಕರು.
ಇದನ್ನೂ ಓದಿ: ಮತ್ತೆ ಶುರು ಸಖತ್; ಸದ್ಯದಲ್ಲೇ ಯುರೋಪ್ಗೆ ಪ್ರಯಾಣ..
ನಿರ್ಮಾಪಕ ಜಯಪ್ರಭು ನಾಯಕನಾಗಿಯೂ ಅಭಿನಯಿಸಿದ್ದಾರೆ. ಜೀತ್ ರಾಯ್ದತ್ ಈ ಚಿತ್ರದ ದ್ವಿತೀಯ ನಾಯಕ. ಬಹುಭಾಷಾ ನಟ ಯಶ್ ಪಾಲ್ ಶರ್ಮ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಕೊಡಗಿನ ಟೀನಾ ಪೊನ್ನಪ್ಪ, ಆಮ್ ರೀನ್, ಕಲ್ಪನಾ ಈ ಚಿತ್ರದ ನಾಯಕಿಯರು. ಅಷ್ಟೇ ಅಲ್ಲದೆ ಅನುಭವಿ ಕಲಾವಿದರ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ನಿರ್ಮಾಪಕರ ಪುತ್ರಿ ಬೇಬಿ ಪೂಜಾ ಸಹ ಈ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಿದ್ದಗಂಗಾ ಮಠದ ಆವರಣ, ತುಮಕೂರು, ಚಿಕ್ಕಮಗಳೂರು ಹಾಗೂ ಮುಂಬೈನಲ್ಲಿ ಚಿತ್ರೀಕರಣ ನಡೆದಿದೆ.