ಸಿನಿವಾಣಿ

ಸಾವಿತ್ರಿ ಚಿತ್ರದ ಶೂಟಿಂಗ್ ಮುಗಿಸಿದ ತಾರಾ, ವಿಜಯ್ ರಾಘವೇಂದ್ರ

manjunathktgns

ಬೆಂಗಳೂರು: ಹಿರಿಯ ನಟಿ ತಾರಾ ಅನರಾಧಾ ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ಸಾವಿತ್ರಿ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. 45 ಕ್ಕೂ ಹೆಚ್ಚು ದಿನಗಳ ಕಾಲ‌ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಸದ್ಯ ಪ್ರಸ್ತುತ ಸಂಕಲನ ಕಾರ್ಯ ಬಿರುಸಿನಿಂದ ಸಾಗಿದೆ.

ಪಿ.ಎನ್.ಪಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರಶಾಂತ್ ಕುಮಾರ್ ಹೀಲಲಿಗೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರಶಾಂತ್ ಕುಮಾರ್ ಮೂಲತಃ ಸಾಫ್ಟ್ ವೇರ್ ಉದ್ಯೋಗಿ. ಎಸ್ ದಿನೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ‌ ಮಾಡಿದ್ದಾರೆ. 'ಉಯ್ಯಾಲೆ' ನಂತರ ಇದು ನಿರ್ದೇಶಕರಿಗೆ ಎರಡನೇ ಚಿತ್ರ.

ಖ್ಯಾತ ಸಾಹಿತಿ ಹೃದಯ ಶಿವ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಗೀತರಚನೆ ಹಾಗೂ ಸಂಭಾಷಣೆ ಕೂಡ ಹೃದಯ ಶಿವ ಅವರದ್ದೆ. ಇಷ್ಟು ದಿನ ಗೀತರಚನೆಕಾರರಾಗಿದ್ದ ಹೃದಯ ಶಿವ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿದ್ದಾರೆ. ನಾಗಾರ್ಜುನ ಡಿ ಛಾಯಾಗ್ರಹಣ ಹಾಗೂ ಮನು ಅವರ ಸಂಕಲನ ಈ ಚಿತ್ರಕ್ಕಿದೆ.

ಕೌಟುಂಬಿಕ ಹಾಗೂ ಹಾರರ್ ಕಥಾಹಂದರ ಹೊಂದಿರುವ ಈ ಚಿತ್ರದ ನಾಯಕರಾಗಿ ವಿಜಯ ರಾಘವೇಂದ್ರ ಅಭಿನಯಿಸಿದ್ದಾರೆ. ಊರ್ವಶಿ ರೈ ಈ ಚಿತ್ರದ ನಾಯಕಿ. ಪ್ರಕಾಶ್ ಬೆಳವಾಡಿ, ಸಂಜು ಬಸಯ್ಯ, ‌ಬೇಬಿ ನೈಲಾ ಪ್ರಮೋದ್, ಸ್ವಾತಿ, ಮಾ. ಪುನೀತ್, ಮಾ. ಮಾನ್ವಿಕ್, ಮಾ. ಚಿನ್ಮಯ್, ಬೇಬಿ ಸಂಜನಾ ಹೃದಯಶಿವ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.