Nora Fatehi  
ಸಿನಿವಾಣಿ

ಸರ್ಕೆ ಚುನಾರ್ ವಿವಾದ; 'ಯಾರನ್ನು ದೂಷಿಸಲ್ಲ, ಹೆಣ್ಣು ಮಕ್ಕಳ ಓದಿಗೆ ಆಸರೆಯಾಗುವೆ': Nora Fatehi

ಪ್ರಮುಖ ಮುಖ್ಯಾಂಶಗಳು

  • 'KD: ದಿ ಡೆವಿಲ್' ಚಿತ್ರದ 'ಸರ್ಕಿ ಚುನಾರ್' ಹಾಡಿನ ವಿವಾದ
  • ಹಾಡಿನಲ್ಲಿ ಅಶ್ಲೀಲತೆ ಆರೋಪದ ಮೇಲೆ ರಾಷ್ಟ್ರೀಯ ಮಹಿಳಾ ಆಯೋಗದಿಂದ ಕ್ರಮ.
  • ಯೂಟ್ಯೂಬ್‌ನಿಂದ ವೀಡಿಯೊ ತೆರವುಗೊಳಿಸಿದ ಚಿತ್ರತಂಡ.
Nora Fatehi : ಸರ್ಸೆ ನಿನ್ನ ಸೆರಗ ಸರ್ಸೆ, ಹಿಂದಿಯಲ್ಲಿ ಸರ್ಕೆ ಚುನಾರ್​ ಹಾಡು ಬಾಲಿವುಡ್​ ಸೇರಿದಂತೆ ದೇಶದ ಚಿತ್ರರಂಗದಲ್ಲಿ ವಿವಾದಕ್ಕೆ ಸಿಲುಕಿತ್ತು. ಇದ್ರಲ್ಲಿ ಪ್ರೇಮ್​ನ ಮಾತ್ರವಲ್ಲದೇ ಹಾಡಿಗೆ ಹೆಜ್ಜೆ ಹಾಕಿದ್ದ ನೊರಾ ಫತೇಹಿಯವರನ್ನು ನಿಂದಿಸಲಾಗಿತ್ತು. ಈ ಮಧ್ಯೆ ನೋರಾ ಫತೇಹಿ ಸೇರಿದಂತೆ ಹಲವು ನಟರಿಗೆರಾಷ್ಟ್ರೀಯ ಮಹಿಳಾ ಆಯೋಗ ಸಮನ್ಸ್​ ನೀಡಲಾಗಿತ್ತು. ಈ ವಿಚಾರವಾಗಿ ಆಯೋಗದ ಮುಂದೆ ಹಾಜರಾಗಿ, ನಂತರ ಮಾತನಾಡಿದ ಅವರು ಬುಡಕಟ್ಟು ಹೆಣ್ಣುಮಕ್ಕಳ ಶಿಕ್ಷಣಕ್ಕೆ ವ್ಯಯಿಸುವುದಾಗಿ ಹೇಳಿದ್ದಾರೆ.

ನೋರಾ ಹೇಳಿದ್ದೇನು?

ಹಾಡಿನ ವಿವಾದ ಬಗ್ಗೆ ಮಾತನಾಡಿದ ಅವರು, ಯಾರನ್ನು ಹೊಣೆಗಾರರನ್ನಾಗಿ ಮಾಡಲು ನಾನು ಇಷ್ಟ ಪಡೋದಿಲ್ಲ. ಈ ಹಾಡಿನಿಂದ ನೋವಾಗಿದ್ದರೆ ನನನ್ನು ಕ್ಷಮಿಸಿ. ಈ ವಿವಾದದ ನಂತರ ಒಂದು ಹೆಜ್ಜೆಯಾಗಿ ನಾನು ನಾನು ಅನಾಥ ಬುಡಕಟ್ಟು ಹೆಣ್ಣುಮಕ್ಕಳಿಗೆ ಶಿಕ್ಷಣ ಒದಗಿಸಲು ನಿರ್ಧರಿಸಿದ್ದೇನೆ ಎಂದು ನೋರಾ ಫತೇಹಿ ಹೇಳಿದರು.
ದೆಹಲಿಯಲ್ಲಿರುವ ಆಯೋಗದ ಕಚೇರಿಗೆ ಮೇ.7ರಂದು ಬೆಳಿಗ್ಗೆ 11:30ಕ್ಕೆ ನೊರಾ ಫತೇಹಿ ಅವರು, ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈಗಾಗಲೇ ಈ ಹಾಡನ್ನು ನಿಷೇಧಿಸುವಂತೆ ಆದೇಶ ನೀಡಿದ್ದು, ಚಿತ್ರತಂಡವು ಯೂಟ್ಯೂಬ್‌ನಿಂದ ಹಾಡಿನ ಹಿಂದಿ ಆವೃತ್ತಿಯನ್ನು ತೆಗೆದುಹಾಕಿದೆ.
ಕೆಡಿ ಸಿನಿಮಾದ ಹಾಡಿಗೆ ವಿವಾದ ವ್ಯಕ್ತವಾಗಿ ದೂರು ದಾಖಲಾಗಿತ್ತು. ಮಾರ್ಚ್​ನಲ್ಲಿ ಹಲವರಿಗೆ ಸಮನ್ಸ್​ ಜಾರಿ ಮಾಡಲಾಗಿತ್ತು. ಅದರಲ್ಲಿ ನೋರಾ ಸಹ ಒಬ್ಬರು. ಸಂಜಯ್​ ದತ್​, ರಕೀಬ್​ ಆಲಂ, ನಿರ್ಮಾಪಕ ವೆಂಕಟ್​ ಕೆ ನಾರಾಯಣ, ನಿರ್ದೇಶಕ ಸೇರಿದ್ದಾರೆ.

ಏನಿದು ವಿವಾದ?

ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ 'KD: ದಿ ಡೆವಿಲ್' ಚಿತ್ರದ 'ಸರ್ಕಿ ಚುನಾರ್' ಹಾಡು ಬಿಡುಗಡೆಯಾದಾಗಿನಿಂದಲೂ ತೀವ್ರ ವಿವಾದಕ್ಕೆ ಗುರಿಯಾಗಿತ್ತು. ಈ ಹಾಡಿನಲ್ಲಿ ಮಹಿಳೆಯರನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಮತ್ತು ಸಾಹಿತ್ಯವು ಅಶ್ಲೀಲತೆಯಿಂದ ಕೂಡಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು.
ಏಪ್ರಿಲ್ 27 ರಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ಪ್ರಮುಖ ಪಾತ್ರಧಾರಿ ಸಂಜಯ್ ದತ್ ಆಯೋಗದ ಮುಂದೆ ಹಾಜರಾಗಿದ್ದರು. ಅವರು ಲಿಖಿತ ರೂಪದಲ್ಲಿ ಕ್ಷಮೆಯಾಚಿಸಿದ್ದಲ್ಲದೆ, ಸಾಮಾಜಿಕ ಕಳಕಳಿಯ ಭಾಗವಾಗಿ 50 ಬುಡಕಟ್ಟು ಹೆಣ್ಣುಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಹೊರುವುದಾಗಿ ಭರವಸೆ ನೀಡಿದ್ದರು, (ಏಜೆನ್ಸೀಸ್).