Sara Ali Khan Poses With Henry Cavill
- ಹಾಲಿವುಡ್ ನಟನೊಂದಿಗೆ ಗುಟ್ಟಾಗಿ ಮದುವೆ ಮಾಡಿಕೊಂಡರಾ ಸಾರಾ ಅಲಿಖಾನ್
- ಲಂಡನ್ನಲ್ಲಿ ನಡೆದ ಪ್ರತಿಷ್ಠಿತ ರಾಯಲ್ ಅಸ್ಕಾಟ್ ಕುದುರೆ ರೇಸ್ ಕ್ರೀಡಾಕೂಟದಲ್ಲಿ ಭಾಗಿ
- ರಾಯಲ್ ಅಸ್ಕಾಟ್ನಲ್ಲಿ ಹೆನ್ರಿ ಕ್ಯಾವಿಲ್ ಜೊತೆಗೆ ಫೋಟೋ ಶೂಟ್ ಮಾಡಿಸಿಕೊಂಡ ಸಾರಾ
Sara Ali Khan Poses With Henry Cavill: ಸೆಲಬ್ರೆಟಿಗಳು ಯಾವ ದೇಶದಲ್ಲಿದ್ದರೂ ಅವರ ಬಗ್ಗೆ ಮಾಹಿತಿ ಕಲೆ ಹಾಕುವುದು ಅವರ ಅಭಿಮಾನಿಗಳ ಅಭ್ಯಾಸ. ಯಾರೊಂದಿಗಿದ್ದಾರೆ. ಡೇಟಿಂಗ್ ಸೇರಿದಂತೆ ನಾನಾ ವಿಚಾರಗಳ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಅದರಂತೆ ಸದ್ಯ ಬಾಲಿವುಡ್ ನಟಿ ಸಾರಾ ಅಲಿಖಾನ್ ಅವರು ಹಾಲಿವುಡ್ ನಟ ಹೆನ್ರಿ ಕ್ಯಾವಿಲ್ ಜೊತೆಗೆ ಹಂಚಿಕೊಂಡಿರುವ ಫೋಟೋಗಳು ಸದ್ಯ ನಾನಾ ಊಹಾಪೋಹಕ್ಕೆ ಕಾರಣವಾಗಿದೆ.
ಲಂಡನ್ನಲ್ಲಿ ನಡೆದ ಪ್ರತಿಷ್ಠಿತ ರಾಯಲ್ ಅಸ್ಕಾಟ್ ಕುದುರೆ ರೇಸ್ ಕ್ರೀಡಾಕೂಟದಲ್ಲಿ ಸಾರಾ ಅಲಿಖಾನ್ ಮತ್ತು ಹೆನ್ರಿ ಕ್ಯಾವಿಲ್ ಭಾಗವಹಿಸಿದ್ದಾರೆ. ಈ ವೇಳೆ ಆತ್ಮೀಯವಾಗಿ ತೆಗೆಸಿಕೊಂಡ ಫೋಟೋವನ್ನು ಹಂಚಿಕೊಂಡಿಡಿದ್ದಾರೆ. ಇಷ್ಟೇ ಅಲ್ಲದೆ, ರಾಯಲ್ ಅಫೇರ್ ವಿತ್ ಎಂದು ಹೆನ್ರಿಯನ್ನು ಟ್ಯಾಗ್ ಮಾಡಿರುವುದು ಗುಸುಗುಸುಗೆ ಕಾರಣವಾಗಿದೆ. ಇಬ್ಬರು ಗುಟ್ಟಾಗಿ ಮದುವೆಯಾದರ ಅಥವಾ ಡೇಟಿಂಗ್ನಲ್ಲಿದ್ದಾರ ಎನ್ನುವ ಬಗ್ಗೆ ಸಾರಾ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಹೆನ್ರಿ ಕ್ಯಾವಿಲ್ ಜೊತೆ ಫೋಟೋಶೂಟ್
ಸಾರಾ ಈ ಕ್ರೀಡಾ ಕಾರ್ಯಕ್ರಮಕ್ಕೆ ಬಿಳಿ ಬಣ್ಣದ ಫಾರ್ಮಲ್ ಸ್ಕರ್ಟ್, ಹ್ಯಾಟ್, ಹೀಲ್ಸ್ ಧರಿಸಿ ಸಿಂಪಲ್ ಲುಕ್ನಲ್ಲಿ ಮಿಂಚಿದ್ದಾರೆ. ಇನ್ನು ಹೆನ್ಸರಿ ಅವರು ಕ್ಲಾಸಿಕ್ ಬ್ಲ್ಯಾಕ್ ಅಡ್ ವೈಟ್ ಸೂಟ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಇಬ್ಬರು ಕ್ರೈಸ್ತ ಧರ್ಮದ ವಧು-ವರನಂತೆ ಕಂಡಿದ್ದರಿಂದ ಅಭಿಮಾನಿಗಳು, ಗುಟ್ಟಾಗಿ ಮದುವೆಯಾಗಿರಬಹುದು ಅಥವಾ ಡೇಟಿಂಗ್ನಲ್ಲಿದ್ದಾರೆ ಎಂದು ತಪ್ಪಾಗಿ ಭಾವಿಸಿದ್ದಾರೆ.
ಆದರೆ, ಇದು ಗುಟ್ಟಾದ ಮದುವೆ ಅಲ್ಲ. ಬ್ರಿಟನ್ನ ರಾಯಲ್ ಅಸ್ಕಾರ್ಟ್ಗೆ ಭಾಗವಹಿಸುವರ ಡ್ರೆಸ್ ಕೋರ್ಟ್. ಅಲ್ಲಿಗೆ ಬರುವ ಪುರುಷರು ಹಾಗೂ ಮಹಿಳೆಯರು ಇಂತದ್ದೇ ಸಾಂಪ್ರದಾಯಿಕ ಡ್ರೆಸ್ ಧರಿಸಬೇಕು ಎನ್ನಲಾಗಿದೆ. ಇನ್ನು ಈ ಕಾರ್ಯಕ್ರಮಕ್ಕೆ ರಾಣಿ ಕೆಮಿಲ್ಲಾ, ಚಾರ್ಲ್ಸ್III ಹಾಗೂ ರಾಜಕುಮಾರ್ ವಿಲಿಯಂ ಸೇರಿದಂತೆ ರಾಜ ಮನೆತನ ಭಾಗಿಯಾಗುತ್ತದೆ.
ನೆಟ್ಟಿಗರು ಏನಂದ್ರು?
ಸಾರಾ ಜೊತೆಗೆ ನಿಂತಿದ್ದ ಹೆನ್ರಿ ಕ್ಯಾವಿಲ್ ಕಂಡು ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದಾರೆ. ಇದು ನಿಜವೋ ಅಥವಾ ಎಐನಿಂದ ಕ್ರಿಯೇಟ್ ಮಾಡಿದ ಚಿತ್ರವೋ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಪಟೋಡಿ ಪ್ರಿನ್ಸೆಸ್ ಹಾಗೂ ಸೂಪರ್ ಮ್ಯಾನ್ ಎಂದು ಕರೆದುಕೊಂಡಿದ್ದಾರೆ.
ಸಾರಾ ಅಲಿಖಾನ್ ಅವರು ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ನಟ ಆಯುಷ್ಮಾನ್ ಖುರಾನ ಜೊತೆಗೆ ನಟಿಸಿದ್ದ ಪತಿ ಪತ್ನಿ ಔರ್ ದೋ ರಿಲೀಸ್ ಆಗಿತ್ತು. ಜೊತೆಗೆ ಧರ್ಮಾ ಪ್ರೊಡಕ್ಷನ್ಸ್ ನಿರ್ಮಾಣದ 'ಉಡ್ತಾ ತೀರ್' ಸ್ಪೈ ಕತೆಯ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ, (ಏಜೆನ್ಸೀಸ್).