ವಯಸ್ಸಿಗೂ ಮೀರಿದ ಯಶಸ್ಸು... ಈ ಬಾಲನಟನ ಒಂದು ದಿನದ ಸಂಭಾವನೆ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ! Bulliraju
- 'ಸಂಕ್ರಾಂತಿಕಿ ವಸ್ತುನ್ನಾಮ್' ಖ್ಯಾತಿಯ ಬಾಲನಟ ಬುಲ್ಲಿರಾಜು ಸಂಭಾವನೆ ಕೇಳಿ ನೆಟ್ಟಿಗರು ಶಾಕ್
- ಟ್ರೆಂಡಿಂಗ್‌ನಲ್ಲಿ ವೆಂಕಟೇಶ್ ಚಿತ್ರದ ಬಾಲನಟ ರೇವಂತ್ ರೆಮ್ಯುನರೇಷನ್
- ವೆಂಕಿ ಮಾಮ-ಅನಿಲ್ ರವಿಪುಡಿ ಹೊಸ ಚಿತ್ರದಲ್ಲೂ ಬುಲ್ಲಿರಾಜು ಧಮಾಕಾ
- ಟಾಲಿವುಡ್‌ನಲ್ಲಿ ಧೂಳೆಬ್ಬಿಸುತ್ತಿದೆ ಬಾಲನಟ ಬುಲ್ಲಿರಾಜನ ದಿನದ ಗಳಿಕೆಯ ರಹಸ್ಯ
Bulliraju : ಕಳೆದ ವರ್ಷ ತೆರೆಕಂಡು ಭರ್ಜರಿ ಪ್ರದರ್ಶನ ಕಂಡ ತೆಲುಗು ಚಿತ್ರ 'ಸಂಕ್ರಾಂತಿಕಿ ವಸ್ತುನ್ನಾಮ್' ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡಿತು. ವಿಕ್ಟರಿ ವೆಂಕಟೇಶ್ ಮತ್ತು ಯಶಸ್ವಿ ನಿರ್ದೇಶಕ ಅನಿಲ್ ರವಿಪುಡಿ ಅವರ ಸೂಪರ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ಈ ಔಟ್ ಅಂಡ್ ಔಟ್ ಕಾಮಿಡಿ ಎಂಟರ್‌ಟೈನರ್ ಸಿನಿಮಾ ವಿಶ್ವಾದ್ಯಂತ ಬರೋಬ್ಬರಿ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಕೌಟುಂಬಿಕ ಪ್ರೇಕ್ಷಕರನ್ನು ನಗುವಿನ ಕಡಲಲ್ಲಿ ತೇಲಿಸಿದ ಈ ಚಿತ್ರದಲ್ಲಿ ವೆಂಕಟೇಶ್ ಅವರಿಗೆ ಜೋಡಿಯಾಗಿ ಐಶ್ವರ್ಯಾ ರಾಜೇಶ್ ಮತ್ತು ಮೀನಾಕ್ಷಿ ಚೌಧರಿ ನಾಯಕಿಯರ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದರು.
'ಸಂಕ್ರಾಂತಿಕಿ ವಸ್ತುನ್ನಾಮ್' ಚಿತ್ರದ ಮೂಲಕ ಪ್ರೇಕ್ಷಕರ ಭಾರಿ ಗಮನ ಸೆಳೆದ ಮತ್ತೊಂದು ಪಾತ್ರವೆಂದರೆ ಅದು 'ಬುಲ್ಲಿರಾಜು'. ಈ ಸಿನಿಮಾದ ಅದ್ಭುತ ಯಶಸ್ಸಿನ ನಂತರ ಬಾಲನಟ ರೇವಂತ್, ಚಿತ್ರರಂಗದಲ್ಲಿ ಹಾಗೂ ಪ್ರೇಕ್ಷಕರ ವಲಯದಲ್ಲಿ 'ಬುಲ್ಲಿರಾಜು' ಎಂದೇ ಜನಪ್ರಿಯರಾಗಿದ್ದಾರೆ. ಈ ಚಿತ್ರದ ಸಕ್ಸಸ್ ಬೆನ್ನಲ್ಲೇ ಈ ವರ್ಷ ತೆರೆಕಂಡ ಮೆಗಾಸ್ಟಾರ್ ಚಿರಂಜೀವಿ ನಟನೆಯ ಮನ ಶಂಕರ ವಾರ ಪ್ರಸಾದ್ ಗಾರು ಸಿನಿಮಾದಲ್ಲೂ ನಟಿಸುವ ಮೂಲಕ ಈ ಬಾಲಕ ಅಭಿಮಾನಿಗಳನ್ನು ಮತ್ತೊಮ್ಮೆ ರಂಜಿಸಿದ್ದಾನೆ.
ಇದೇ ಖುಷಿಯಲ್ಲಿ ಇತ್ತೀಚೆಗಷ್ಟೇ ವಿಕ್ಟರಿ ವೆಂಕಟೇಶ್ ಮತ್ತು ನಿರ್ದೇಶಕ ಅನಿಲ್ ರವಿಪುಡಿ ಕಾಂಬಿನೇಷನ್‌ನ ಹೊಸ ಸಿನಿಮಾದ ಶೂಟಿಂಗ್ ಅಧಿಕೃತವಾಗಿ ಚಾಲನೆ ಪಡೆದುಕೊಂಡಿದೆ. ಮುಂದಿನ ವರ್ಷದ ಸಂಕ್ರಾಂತಿ ಹಬ್ಬದ ಉಡುಗೊರೆಯಾಗಿ ಈ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ವಿಶೇಷವೆಂದರೆ, ವೆಂಕಟೇಶ್ ಅವರ ಈ ಹೊಸ ಚಿತ್ರದಲ್ಲೂ ಬುಲ್ಲಿರಾಜು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದು, ನಿರ್ದೇಶಕ ಅನಿಲ್ ರವಿಪುಡಿ ಅವರ ನಿರ್ದೇಶನದಲ್ಲಿ ಈತ ನಟಿಸುತ್ತಿರುವ ಸತತ ಮೂರನೇ ಸಿನಿಮಾ ಇದಾಗಿದೆ.
ಹೀಗೆ ಚಿತ್ರರಂಗದ ಸಾಲು ಸಾಲು ಸ್ಟಾರ್ ಹೀರೊಗಳ ಸಿನಿಮಾಗಳಲ್ಲಿ ಬ್ಯಾಕ್-ಟು-ಬ್ಯಾಕ್ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ಈ ಬಾಲನಟನ ಸಂಭಾವನೆಯ ಕುರಿತು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ಲೇಟೆಸ್ಟ್ ಸುದ್ದಿಗಳ ಪ್ರಕಾರ, ಬಾಲನಟ ಬುಲ್ಲಿರಾಜು ಸಿನಿಮಾದಲ್ಲಿ ನಟಿಸಲು ಒಂದು ದಿನಕ್ಕೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾನಂತೆ!
ಕೇವಲ ಒಂದೇ ಒಂದು ಸಿನಿಮಾದ ಯಶಸ್ಸಿನಿಂದ ಈ ಪುಟ್ಟ ಬಾಲಕನ ಇಮೇಜ್ ಮತ್ತು ಬೇಡಿಕೆ ಚಿತ್ರರಂಗದಲ್ಲಿ ಯಾವ ಮಟ್ಟಿಗೆ ಬದಲಾಗಿದೆ ನೋಡಿ ಎಂದು ನೆಟ್ಟಿಗರು ಹಾಗೂ ಸಿನಿಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಬುಲ್ಲಿರಾಜನ ಒಂದು ದಿನದ ಗಳಿಕೆಯ ವಿಚಾರ ಟಾಲಿವುಡ್ ಗಲ್ಲಿಗಲ್ಲಿಯಲ್ಲಿ ಸಖತ್ ವೈರಲ್ ಆಗುತ್ತಿದೆ, (ಏಜೆನ್ಸೀಸ್).