ಕ್ರಿಕೆಟಿಗ ಸಂಜು ಸ್ಯಾಮನ್ಸ್ ಮತ್ತು ಮಲಯಾಳಂ ನಟ ಬಸಿಲ್​ ಜೋಸೆಫ್​ 
ಸಿನಿವಾಣಿ

ಆ ಪಾತ್ರ ನನಗೆ... ಮಲಯಾಳಂ ಚಿತ್ರದಲ್ಲಿ ನಟಿಸುವ ಅವಕಾಶ ರಿಜೆಕ್ಟ್​ ಮಾಡಿದ್ದ ಸಂಜು ಸ್ಯಾಮ್ಸನ್​! ​

ಪ್ರಮುಖ ಮುಖ್ಯಾಂಶಗಳು

  • ಮಲಯಾಳಂ ಚಿತ್ರದಲ್ಲಿ ನಟಿಸಲು ಸಿಕ್ಕ ಅವಕಾಶ ರಿಜೆಕ್ಟ್ ಮಾಡಿದ ಸಂಜು ಸ್ಯಾಮ್ಸನ್​
  • ಸ್ನೇಹಿತ, ಮಾಲಿವುಡ್​ ನಟ ಬಸಿಲ್​ ಜೋಸೆಫ್​ ಬಿಚ್ಚಿಟ್ಟ ವಿಷಯ
  • ಚಿತ್ರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂಜು ಸ್ಯಾಮ್ಸನ್​
Sanju Samson: ಪ್ರಸಕ್ತ 19ನೇ ಆವೃತ್ತಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ಪರ ಆರಂಭಿಕ ಬ್ಯಾಟರ್​ ಹಾಗೂ ವಿಕೆಟ್​ ಕೀಪರ್​ ಆಗಿ ಆಡುತ್ತಿರುವ ಸಂಜು ಸ್ಯಾಮ್ಸನ್​, ತಂಡವನ್ನು ಹೇಗಾದರೂ ಮಾಡಿ ಪ್ಲೇಆಫ್​ಗೆ ಕೊಂಡೊಯ್ಯಲು ಮೈದಾನದಲ್ಲಿ ಬೆವರಿಳಿಸುತ್ತಿದ್ದಾರೆ. ಈ ಮಧ್ಯೆ, ತಮ್ಮ ಸ್ನೇಹಿತ, ಮಲಯಾಳಂ ನಟರಾದ ಬಸಿಲ್​ ಜೋಸೆಫ್ ಅವರ ಚಿತ್ರದ ಇತ್ತೀಚಿಗಿನ ಈವೆಂಟ್​ನಲ್ಲಿ ಭಾಗವಹಿಸಿದ ಸಂಜು, ಸಿನಿಪ್ರಿಯರ ಕುತೂಹಲ ಕೆರಳಿಸುವಂತ ವಿಷಯಗಳನ್ನು ಹಂಚಿಕೊಂಡಿದ್ದಾರೆ.​
ಬಸಿಲ್​ ಅಭಿನಯದ ಮಲಯಾಳಂ ಹಾಸ್ಯ ಸಿನಿಮಾ 'ಅಥಿರಡಿ'ಯಲ್ಲಿ ಒಂದು ಪಾತ್ರ ಸಂಜು ಅವರಿಗೂ ಹೋಗಿತ್ತು. ಆದರೆ, ಅವರು ಈ ಆಫರ್​ ಅನ್ನು ರಿಜೆಕ್ಟ್ ಮಾಡುವ ಮೂಲಕ ನಮ್ಮೊಂದಿಗೆ ನಟಿಸಲು ನಿರಾಕರಿಸಿದರು ಎಂದು ಜೋಸೆಫ್​ ವೇದಿಕೆಯಲ್ಲಿ ಹೇಳಿದರು. ಐಪಿಎಲ್​ ಪಂದ್ಯಗಳ ಮಧ್ಯೆಯೂ ಬಿಡುವು ಮಾಡಿಕೊಂಡು ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸ್ಯಾಮ್ಸನ್​, ಅವರು ಕೊಟ್ಟ ಪಾತ್ರ ನನಗೆ ಬಹಳ ಚಿಕ್ಕದು ಎನಿಸಿತು. ಹೀಗಾಗಿಯೇ ತಿರಸ್ಕರಿಸಿದೆ ಎಂದಿದ್ದಾರೆ.
ಅಷ್ಟಕ್ಕೂ ನಮ್ಮ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಸಂಜು ಸ್ಯಾಮ್ಸನ್​ರನ್ನು ನೋಡಲು ನಾವು ಬಯಸಿದ್ದೆವು. ಅದಕ್ಕಾಗಿ, ಅವರಿಗೆ ಆಫರ್​ ಕೊಟ್ಟಿದ್ದೆವು. ಆದರೆ, ಅದನ್ನು ತಕ್ಷಣವೇ ರಿಜೆಕ್ಟ್​ ಮಾಡಿದ ಸಂಜು, ನಾನು ಮಾಡಿದರೆ ದೊಡ್ಡದೇ ಮಾಡೋದು ಎಂದು ಹೇಳಿದ್ದಾಗಿ ಬಸಿಲ್​ ಹಾಸ್ಯ ಚಟಾಕಿ ಸಿಡಿಸಿದರು.
ನನ್ನನ್ನು ತಮ್ಮ ಚಿತ್ರದಲ್ಲಿ ನಟಿಸುವಂತೆ ಅವರು ಕರೆದಿದ್ದು ನಿಜ. ಆದರದು ಒಂದು ಸಣ್ಣ ಪಾತ್ರವಾಗಿತ್ತು. ನಾನೇನಾದರೂ ಅಭಿನಯಿಸಿದರೆ ದೊಡ್ಡ ಪಾತ್ರದಲ್ಲೇ ನಟಿಸೋದು ಎಂದು ಚಿತ್ರತಂಡಕ್ಕೆ ತಿಳಿಸಿ, ನಟಿಸುವುದಿಲ್ಲ ಎಂದಿದ್ದಾಗಿ ಸಂಜು ಹೇಳಿದ್ದಾರೆ,(ಏಜೆನ್ಸೀಸ್).