ಸಿನಿವಾಣಿ

2ನೇ ಕನ್ನಡ ಚಿತ್ರಕ್ಕೆ ಸಹಿ ಹಾಕಿದ 'ಅಧೀರ'; ಯಾವ ನಟನ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಸಂಜಯ್ ದತ್?

ಬೆಂಗಳೂರು: ಕೆಜಿಏಫ್-2 ಸಿನಿಮಾದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿರವ ನಟ ಸಂಜಯ್ ದತ್ 'ಅಧೀರ'ನಾಗಿ ಮಿಂಚಲಿದ್ದಾರೆ. ಕೆಜಿಏಫ್-2ಗೆ ಮೊನ್ನೆ ತಾನೆ ಡಬ್ಬಿಂಗ್ ಮುಗಿಸಿದ್ದರು ನಟ ಸಂಜಯ್ ದತ್. ಆದರೆ, ಅಷ್ಟರೊಳಗೆ ಅವರು ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ, ಕೆಜಿಏಫ್-2 ನಂತೆ ಅವರು ಎರಡನೇ ಸಿನಿಮಾದಲ್ಲೂ ಸಂಜಯ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಹೌದು, ನಟ ಧ್ರುವ ಸರ್ಜಾ ಸದ್ಯ 'ಮಾರ್ಟಿನ್' ಚಿತ್ರದಲ್ಲಿ ನಟಿಸುತ್ತಿದ್ದು, ಅದರ ನಂತರ ಪ್ರೇಮ್ ಅವರು ನಿರ್ದೇಶನ ಮಾಡುತ್ತಿರುವ ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪ್ರೇಮ್ ನಿರ್ದೇಶನ ಮಾಡಲಿರುವ ಆ ಸಿನಿಮಾದಲ್ಲಿ ನಟ ಧ್ರುವ ಸರ್ಜಾ ಎದುರಿಗೆ ಸಂಜಯ್ ದತ್ ಖಳನಾಯಕನ ಪಾತ್ರವನ್ನು ನಿರ್ವಹಿಸಲಿದ್ದಾರಂತೆ. ಸಾಮಾನ್ಯವಾಗಿ, ಪ್ರೇಮ್ ಅವರ ಚಿತ್ರಗಳಲ್ಲಿ ಬಾಲಿವುಡ್ ನಟರು ಖಳನಾಯಕರ ರೋಲ್​ಗಳನ್ನು ನಿರ್ವಹಿಸುವುದು ಸಹಜ. ಹೀಗಾಗಿ, ತಮ್ಮ ಹೊಸ ಸಿನಿಮಾಗೆ ನಟ ಸಂಜಯ್ ದತ್ ಅವರನ್ನು ಸಂಪರ್ಕಿಸಲಾಗಿದೆ. ಇದಕ್ಕೂ ಮುನ್ನ ನಟ ಅಜಯ್ ದೇವ್ಗನ್​ರನ್ನು ಈ ರೋಲ್ ಮಾಡಲು ವಿನಂತಿಸಿದ್ದಾಗ, ಅದಕ್ಕೆ ಅವರ ಡೇಟ್ಸ್ ಸಿಗದ ಕಾರಣ ಸಂಜಯ್ ದತ್ ಅವರನ್ನು ಆಯ್ಕೆ ಮಾಡಿದ್ದಾರಂತೆ ಪ್ರೇಮ್. ನಟ ಧ್ರುವ ಸರ್ಜಾರ 'ಮಾರ್ಟಿನ್' ಸಿನಿಮಾದ ಚಿತ್ರೀಕರಣ ಮುಗಿದ ನಂತರ ಪ್ರೇಮ್​ರ ಹೊಸ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ.