ಸಿನಿವಾಣಿ

ಕಡಲತಡಿಯ ಕಥೆ ಗುಂಮ್ಟಿ; ’ಇನಾಮ್ದಾರ್​’ ಸಂದೇಶ್​ ಶೆಟ್ಟಿ ಅಜ್ರಿ ನಟಿಸಿ, ನಿರ್ದೇಶಿಸಿರುವ ಸಿನಿಮಾ

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

"ಕತ್ತಲೆ ಕೋಣೆ' ಮತ್ತು "ಇನಾಮ್ದಾರ್​' ಖ್ಯಾತಿಯ ನಿರ್ದೇಶಕ ಸಂದೇಶ್​ ಶೆಟ್ಟಿ ಅಜ್ರಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ, ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸಿರುವ ಚಿತ್ರ "ಗುಂಮ್ಟಿ'. ಇದೊಂದು ಕಲಾತ್ಮಕ ಚಿತ್ರವಾಗಿದ್ದು, ಕರ್ನಾಟಕದ ಕರಾವಳಿ ತೀರದ ಕುಡುಬಿ ಜನಾಂಗದ ಕಥೆಯನ್ನು ತೆರೆಯ ಮೇಲೆ ತರುವ ಪ್ರಯತ್ನ ಚಿತ್ರತಂಡದ್ದವು. ಈಗಾಗಲೇ ಚಿತ್ರದ ಪೋಸ್ಟ್​- ಪ್ರೊಡಕ್ಷನ್​ ಪೂರ್ಣಗೊಂಡಿದ್ದು, ಇತ್ತೀಚೆಗಷ್ಟೆ ಟ್ರೇಲರ್​ ರಿಲಿಸ್​ ಮಾಡಲಾಯಿತು.

ಚಿತ್ರದ ಬಗ್ಗೆ ನಾಯಕ, ನಿರ್ದೇಶಕ ಸಂದೇಶ್​, ""ಗುಂಮ್ಟಿ' ಎಂಬುದು ಕುಡುಬಿ ಸಮುದಾಯದ ಕಲಾಪ್ರಕಾರಾದ ಸಾಂಪ್ರದಾಯಿಯ ವಾದ್ಯ. ಅದನ್ನೇ ಸಿನಿಮಾ ಟೈಟಲ್​ ಮಾಡಿಕೊಂಡಿದ್ದೇವೆ. ಕುಡುಬಿ ಜನಾಂಗದ ಸಂಪ್ರದಾಯ, ಆಚಾರ-ವಿಚಾರ, ಬದುಕು ಮತ್ತು ಆಧುನಿಕತೆಯ ಸಂರ್ಷದ ಮೇಲೆ ಈ ಚಿತ್ರದಲ್ಲಿ ಬೆಳಕು ಚೆಲ್ಲಿದ್ದೇವೆ. ರಿಲೀಸ್​ಗೂ ಮುನ್ನವೇ ಚಿತ್ರದ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಿದ್ದು, ಈಗಾಗಲೇ ಉಡುಪಿ ಸುತ್ತಮುತ್ತ 24 ಪ್ರದರ್ಶನಗಳು ಮುಂಗಡವಾಗಿ ಬುಕ್ಕಿಂಗ್​ ಆಗಿವೆ' ಎಂದು ಸಂತಸ ಹಂಚಿಕೊಂಡರು.

ಚಿತ್ರದಲ್ಲಿ ಸಂದೇಶ್​ಗೆ ವೈಷ್ಣವಿ ನಾಡಿಗ್​ ನಾಯಕಿಯಾಗಿದ್ದು, ಮಲ್ಲಿ ಎಂಬ ಕುಡುಬಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ರಂಜನ್​ ಛತ್ರಪತಿ, ಕರಣ್​ ಕುಂದರ್​, ಯಶ್​ ಆಚಾರ್ಯ, ಪ್ರಭಾಕರ, ರು ಪಾಂಡೇಶ್ವರ, ಚೇತನ, ಚಿತ್ರಕಲಾ ಪ್ರಮುಖ ತಾರಾಗಣದಲ್ಲಿದ್ದಾರೆ. ಉಡುಪಿ, ಕುಂದಾಪುರ, ಕಾರವಾರ, ಶಿರಸಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಹಾರಾಷ್ಟ್ರದ ಸೊಲ್ಹಾಪುರ ಸೇರಿ ಕರಾವಳಿ&ಮಲೆನಾಡು ಮತ್ತಯ ಪಶ್ಚಿಮ ಟ್ಟದ ಸುತ್ತಮುತ್ತ ಶೂಟಿಂಗ್​ ನಡೆಸಲಾಗಿದೆ. ಸದ್ಯ ಸಿನಿಮಾ ಸೆನ್ಸಾರ್​ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ರಿಲೀಸ್​ ಡೇಟ್​ ಘೋಷಣೆ ಮಾಡುವ ಯೋಜನೆ ಚಿತ್ರತಂಡದ್ದು.