ಯಶ್ ಭಾರತದ ಹೀತ್ ಲೆಜರ್ ಎಂದ ಹನಿ ಸಿಂಗ್
- ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ನೋಡಿದ ಯೋ ಯೋ ಹನಿ ಸಿಂಗ್
- ರಾಯ ಮತ್ತು ಟಿಕೆಟ್ ಪಾತ್ರಗಳಿಗೆ ಗಾಯಕ ಫುಲ್ ಫಿದಾ
- ಯಶ್ ಭಾರತದ ಹೀತ್ ಲೆಜರ್ ಎಂದ ಹನಿ ಸಿಂಗ್
ಮುಂಬೈ: ರಾಕಿಂಗ್ಸ್ಟಾರ್ ಯಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಹಾಗೂ ಗೀತು ಮೋಹನದಾಸ್ ನಿರ್ದೇಶನದ ಸಿನಿಮಾ ಟಾಕ್ಸಿಕ್ ಬಿಡುಗಡೆಯಾಗಿದ್ದು, ಎಲ್ಲಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ 140 ಕೋಟಿ ಓಪನಿಂಗ್ ಪಡೆದ ಸಿನಿಮಾ ವಾರಾಂತ್ಯದಲ್ಲಿ ಇನ್ನೂ ಹೆಚ್ಚಿನ ಗಳಿಕೆ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಆದರೆ, ತೆರೆಕಂಡ ದಿನ ಸಿನಿಮಾ ವಿರುದ್ಧ ಋಣಾತ್ಮಕ ವಿಮರ್ಶೆ ಕಂಡುಬಂದಿದ್ದು, ಈ ಕುರಿತು ಸಿನಿಮಾ ತಂಡ ಇಂಜೆಕ್ಷನ್ ಆರ್ಡ್ರ್ಅನ್ನು ಪಡೆದಿದ್ದು, ಸಿನಿಮಾ ವಿರುದ್ಧ ಇಲ್ಲ-ಸಲ್ಲದ, ಸುಳ್ಳು ಸುದ್ದಿ ಹಬ್ಬಿಸುವವರಿಗೆ ಲೀಗಲ್ ನೋಟಿಸ್ ನೀಡಲು ಪ್ರಾರಂಭಿಸಿದೆ.
ಪ್ರೇಕ್ಷಕರ ಹಾಗೂ ವಿಮರ್ಶಕರ ಮಿಶ್ರ ಪ್ರತಿಕ್ರಿಯೆ ಹೊರತಾಗಿ ಕೂಡ ರಾಪ್ ಗಾಯಕ, ಯೋ ಯೋ ಹನಿ ಸಿಂಗ್ (Honey Singh on Yash) ಟಾಕ್ಸಿಕ್ ಸಿನಿಮಾವನ್ನು ವೀಕ್ಷಿಸಿದ್ದು, ಯಶ್ ಅಭಿನಯಕ್ಕೆ ಫುಲ್ ಫಿದಾ ಆಗಿದ್ದಾರೆ.
ಯಶ್ ಇಂಡಿಯನ್ ಹೀತ್ ಲೆಜರ್!
ಟಾಕ್ಸಿಕ್ ಸಿನಿಮಾವನ್ನು ವೀಕ್ಷಿಸಲು ಥಿಯೇಟರ್ಗೆ ಹೋಗಿದ್ದ ಯೋ ಯೋ ಹನಿ ಸಿಂಗ್, ಸಾಲು-ಸಾಲು ಸ್ಟೋರಿಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಸ್ಟೋರಿಯಲ್ಲಿ, ಇವತ್ತಿನ ರಾತ್ರಿ ನಾನು ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ವೀಕ್ಷಿಸಲಿದ್ದೆನೆಂದು ಬರೆದುಕೊಂಡಿದ್ದಾರೆ.
ಎರಡನೇ ಸ್ಟೋರಿಯಲ್ಲಿ, ರಾಯಾ (ಯಶ್ ಪಾತ್ರ) ಮತ್ತು ಗಂಗಾ (ನಯನತಾರಾ ಪಾತ್ರ) ಪಾತ್ರಗಳಿಗೆ ರಕ್ಷಾ ಬಂಧನದ ಶುಭಾಷಯವನ್ನು ಹನಿ ಸಿಂಗ್ ತಿಳಿಸಿದ್ದಾರೆ.
ಮೂರನೇ ಸ್ಟೋರಿಯಲ್ಲಿ ರಾಯ, ಮಗ ಟಿಕೆಟ್ ಪಾತ್ರದ ಫೋಟೊಗೆ, ಇದು ನನ್ನ ಹಳೆಯ ಸೈತಾನ್ ಲುಕ್ನಂತಿದೆ ಎಂದಿದ್ದಾರೆ. ನಾಲ್ಕನೇ ಸ್ಟೋರಿಯಲ್ಲಿ, ಯಶ್ ಭಾರತದ ಹೀತ್ ಲೆಜರ್ ಎಂದು ಬರೆದುಕೊಂಡಿದ್ದಾರೆ.
ಯಾರು ಈ ಹೀತ್ ಲೆಜರ್?
ಹೀತ್ ಲೆಜರ್ ಇವರೊಬ್ಬರು ಆಸ್ಟ್ರೇಲಿಯಾ ಮೂಲದ, ಅಮೆರಿಕನ್ ಸಿನಿಮಾದ ನಟರಾಗಿದ್ದರು. 2008 ರಲ್ಲಿ ತೆರೆಕಂಡಿದ್ದ ಕ್ರಿಸ್ಟೋಪರ್ ನೋಲನ್ ನಿರ್ದೇಶನದ ದಿ ಡಾರ್ಕ್ ನೈಟ್ ಸಿನಿಮಾದಲ್ಲಿ ಹೀತ್ ಲೆಜರ್ ಅಭಿನಯಿಸಿದ್ದ ಜೋಕರ್ ಪಾತ್ರ ವಿಶ್ವದಾದ್ಯಂತ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು.
ಈ ಪಾತ್ರದೊಳಗೆ ಹೀತ್ ಲೆಜರ್ ಎಷ್ಟು ಒಳ ಹೋಗಿದ್ದರೆಂದರೆ, ಒಂದರ್ಥದಲ್ಲಿ ಈ ಪಾತ್ರವೇ ಅವರ ಜೀವವನ್ನೇ ಬಲಿ ಪಡಿಯಿತೆಂದು ಕೆಲ ಜನ ನಂಬುತ್ತಾರೆ. ಈ ಪಾತ್ರಕ್ಕೆ 2009 ರಲ್ಲಿ ಆಸ್ಕರ್ (ಅಕಾಡಿಮಿ) ಪ್ರಶಸ್ತಿಯನ್ನು ನೀಡಲಾಗಿದೆ. ಆದರೆ 2008 ರಲ್ಲಿ ಹೀತ್ ಲೆಜರ್ ಡ್ರಗ್ ಓವರ್ ಡೋಸ್ನಿಂದ ಸಾವನ್ನಪ್ಪಿದ್ದರು, (ಏಜನ್ಸೀಸ್).