Yash stops bodyguard from pulling fan away
- ಟಾಕ್ಸಿಕ್ ಪ್ರೀ ರಿಲೀಸ್ ಇವೆಂಟ್ನಲ್ಲಿ ಹೆಚ್ಚು ಗಮನ ಸೆಳೆದ ಸ್ಯಾಂಡಲ್‌ವುಡ್ ನಟ ಯಶ್
- ಸೆಲ್ಫಿಗಾಗಿ ಯಶ್ನತ್ತ ಧಾವಿಸಿದ ಫ್ಯಾನ್ಸ್ನ ಎಳೆದ ಬಾಡಿಗಾರ್ಡ್
- ಬಾಡಿಗಾರ್ಡ್ರನ್ನು ತಡೆದು ಫ್ಯಾನ್ಸ್ ಜೊತೆ ಸೆಲ್ಫಿ ಕ್ಲಕ್ಕಿಸಿಕೊಂಡ ನಟ ಯಶ್
Yash stops bodyguard from pulling fan away: ಟಾಕ್ಸಿಕ್ ರಿಲೀಸ್ಗೆ ಇನ್ನೇನು ಕ್ಷಣಗಣನೇ ಶುರುವಾಗಿದೆ. ಈಗಾಗಲೇ ಸಿನಿಮಾ ವೀಕ್ಷಣೆಗಾಗಿ ಮುಂಗಡವಾಗಿ ಟಿಕೆಟ್ಗಳು ಬುಕ್ ಆಗಿವೆ. ಈ ಹೊತ್ತಲ್ಲೇ ಯಶ್ ಬಗ್ಗೆ ಕೆಲವು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುವಂತೆ ಮಾಡುತ್ತಿದೆ. ಸೆಲ್ಫಿ ತೆಗೆಸಿಕೊಳ್ಳಲು ಬಂದ ಅಭಿಮಾನಿಯನ್ನು ಬಾಡಿಗಾರ್ಡ್ ಅಡ್ಡ ಹಾಕಿದಾಗ, ಅದನ್ನು ತಡೆದ ಪರಿ ಸದ್ಯ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.
ಹೈದರಾಬಾದ್‌ನ ಮಲ್ಲಾ ರೆಡ್ಡಿ ವಿಶ್ವವಿದ್ಯಾಲಯದಲ್ಲಿ ಟಾಕ್ಸಿಕ್ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಅಭಿಮಾನಿಯೊಬ್ಬ ಯಶ್ ಅವರ ಬಳಿ ಸೆಲ್ಫಿ ತೆಗೆಸಿಕೊಳ್ಳಲು ಬಂದಾಗ ಅವರು ನಡೆಸಿಕೊಂಡ ರೀತಿ ಹಾಗೂ ವಿದ್ಯಾರ್ಥಿಗಳ ಮೇಲೆ ಫ್ಲಡ್‌ಲೈಟ್ ಕಂಬ ಬಿದ್ದಾಗ ಭಾಷಣ ನಿಲ್ಲಿಸಿ ಕ್ಷೇಮ ವಿಚಾರಿಸಿದ ಪರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಏನಾಯ್ತು?
ಪ್ರೀ ರಿಲೀಸ್ ಇವೆಂಟ್ ವೇಳೆ ಒಬ್ಬ ಅಭಿಮಾನಿ ಯಶ್ ಜೊತೆಗೆ ಸೆಲ್ಫಿ ತೆಗೆಸಿಕೊಳ್ಳಲು ಅವರಿದ್ದ ಕಡೆ ಧಾವಿಸುತ್ತಿದ್ದ ಕಡೆ ಧಾವಿಸಿದ, ಫೋಟೋಗೂ ಯಶ್ ಒಪ್ಪಿಕೊಂಡಿದ್ದರು. ಆದರೆ ಅವರ ಬಾಡಿಗಾರ್ಡ್ ಆತನನ್ನು ತಡೆದು ಸ್ವಲ್ಪ ಹೊತ್ತು ಕಾಯುವಂತೆ ಹೇಳಿದ. ಇದನ್ನು ಕಂಡ ಯಶ್ ಅವರು ಮಧ್ಯಪ್ರವೇಸಿಇಸ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಈ ಘಟನೆಯನ್ನು ನೋಡುತ್ತಿದ್ದ ನಟಿ ಹುಮಾ ಖರೇಷಿ ನಕ್ಕಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.
ಮತ್ತೊಂದು ವಿಡಿಯೋದಲ್ಲಿ ಅಭಿಮಾನಿಯೊಬ್ಬ ಯಶ್ ಅವರ ಚಿತ್ರ ಬಿಡಿಸಿ, ಅವರತ್ತ ತೋರಿಸುತ್ತಿದ್ದ. ಕೆಲವೇ ಕ್ಷಣದಲ್ಲಿ ಅವರ ಬಳೀ ಆಟೋಗ್ರಾಫ್ ಹಾಕಿಸಿಕೊಂಡು ನಾನೇ ಬರೆದಿದ್ದು ಎಂದು ಹೇಳಿದ. ಈ ವೇಳೆ ಅವರು ಆತನಿಗೆ ತುಂಬಾ ಚೆನ್ನಾಗಿದೆ ಧನ್ಯವಾದ ಎಂದು ಹೇಳಿರುವುದು ಮತ್ತೊಂದು ವಿಡಿಯೋದಲ್ಲಿ ಇದೆ.
ನೆಟ್ಟಿಗರು ಏನಂದ್ರು?
ಬಂಗಾರದಂತಹ ಮನಸ್ಸು ಹೊಂದಿರುವ ವ್ಯಕ್ತಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಯಶ್ ಅವರ ಈ ನಡವಳಿಕೆ ನಟಿ ಹುಮಾ ಖುರೇಷಿ ಮನಸೋತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
‘ಇನ್ನೂ ಕೆಲವರು ಎಂಥ ಒಳ್ಳೆ ಮನುಷ್ಯ ಎಂದು ಹೇಳಿದರೆ ಮತ್ತೊಬ್ಬರು..ಅವರ ಈ ನಡವಳಿಕೆಯೇ ಅವರಿಗೆ ಯಶಸ್ಸನ್ನು ತಂದುಕೊಡುವಂತೆ ಮಾಡುತ್ತಿದೆ.."ನಿಜವಾದ ನಾಯಕರು ತಮ್ಮ ಅಭಿಮಾನಿಗಳನ್ನು ಎಂದಿಗೂ ದ್ವೇಷಿಸುವುದಿಲ್ಲ. ಅವರು ಅವರನ್ನು ತಮ್ಮ ಹೃದಯದಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ಬರೆದುಕೊಂಡಿದ್ದಾರೆ, (ಏಜೆನ್ಸೀಸ್).