Yash Toxic​ ವದಂತಿಗೆ ಬ್ರೇಕ್  
ಸ್ಯಾಂಡಲ್‌ವುಡ್

Toxic​ ವದಂತಿಗೆ ಬ್ರೇಕ್​; ಯಶ್​ ಸಿನಿಮಾ ಉಗಾದಿಗೆ ಫಿಕ್ಸ್​-Yash

ಪ್ರಮುಖ ಮುಖ್ಯಾಂಶಗಳು

  • ಯಶ್​ ನಟಿಸುತ್ತಿರುವ ಬಹುನಿರೀತ ಪ್ಯಾನ್​ ವರ್ಲ್ಡ್​ ಸಿನಿಮಾ "ಟಾಕ್ಸಿಕ್​; ಎ ಫೇರಿಟೇಲ್​ ಆಫ್​ ಗ್ರೋನಪ್ಸ್​'
  • ಯಶ್​ ಮುಂಬೈನಲ್ಲಿ "ರಾಮಾಯಣ' ಚಿತ್ರೀಕರಣ ಪ್ರಾರಂಭಿಸಿದ ಬೆನ್ನಲ್ಲೇ ಏಪ್ರಿಲ್​ನಿಂದ "ಟಾಕ್ಸಿಕ್​' ಚಿತ್ರದ ಪೋಸ್ಟ್​&ಪ್ರೊಡಕ್ಷನ್​ ಮತ್ತು ವಿಎಫ್​ಎಕ್ಸ್​ ಕೆಲಸಗಳು ಪ್ರಾರಂಭವಾಗಿವೆ.
  • ​ 2026ರ ಜನವರಿಯಿಂದ ಚಿತ್ರತಂಡ "ಟಾಕ್ಸಿಕ್​' ಪ್ರಚಾರ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸುವ ಪ್ಲ್ಯಾನ್​ ಮಾಡಿಕೊಂಡಿದೆ
  • ಗುರುವಾರ ಮತ್ತು ಶುಕ್ರವಾರ ರಜೆ ಇರಲಿದ್ದು, ಶನಿವಾರ ಮತ್ತು ಭಾನುವಾರದವರೆಗೆ ನಾಲ್ಕು ದಿನಗಳ ಕಾಲ ಸುದೀರ್ಘ ವೀಕೆಂಡ್​ ಸಿಗಲಿದೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಯಶ್​ ನಟಿಸುತ್ತಿರುವ ಬಹುನಿರೀತ ಪ್ಯಾನ್​ ವರ್ಲ್ಡ್​ ಸಿನಿಮಾ "ಟಾಕ್ಸಿಕ್​; ಎ ಫೇರಿಟೇಲ್​ ಆಫ್​ ಗ್ರೋನಪ್ಸ್​' ಬಗ್ಗೆ ಕೆಲ ತಿಂಗಳಿನಿಂದ ಇಲ್ಲಸಲ್ಲದ ಗಾಳಿಸುದ್ದಿಗಳು ಹಬ್ಬಿವೆ. ನಿರ್ದೇಶಕಿ ಗೀತು ಮೋಹನ್​ದಾಸ್​ ಮತ್ತು ಯಶ್​ ನಡುವೆ ಗೊಂದಲ ಉಂಟಾಗಿದೆ, ಚಿತ್ರದ ಹಲವು ಭಾಗಗಳ ಮರುಚಿತ್ರೀಕರಣ ನಡೆಸಲಾಗುತ್ತಿದೆ, "ಟಾಕ್ಸಿಕ್​' 2026ರ ಮಾ. 19ಕ್ಕೆ ರಿಲೀಸ್​ ಆಗುವುದಿಲ್ಲ... ಅಂತೆಲ್ಲ ಜಾಲತಾಣದಲ್ಲಿ ಕೆಲವರು ರೂಮರ್​ಗಳನ್ನು ಹಬ್ಬಿಸಿದ್ದರು.
ಇದೀಗ ಈ ರೂಮರ್​ಗಳಿಗೆ ಕೆವಿಎನ್​ ಪ್ರೊಡಕ್ಷನ್ಸ್​ ನಿರ್ಮಾಣ ಸಂಸ್ಥೆಯೇ ತೆರೆ ಎಳೆದಿದೆ. ಮುಂದಿನ ಉಗಾದಿಗೆ "ಟಾಕ್ಸಿಕ್​' ರಿಲೀಸ್​ ಫಿಕ್ಸ್​ ಎಂದು ಸ್ಪಷ್ಟಪಡಿಸಿದೆ. ಯಶ್​ ಮುಂಬೈನಲ್ಲಿ "ರಾಮಾಯಣ' ಚಿತ್ರೀಕರಣ ಪ್ರಾರಂಭಿಸಿದ ಬೆನ್ನಲ್ಲೇ ಏಪ್ರಿಲ್​ನಿಂದ "ಟಾಕ್ಸಿಕ್​' ಚಿತ್ರದ ಪೋಸ್ಟ್​-ಪ್ರೊಡಕ್ಷನ್​ ಮತ್ತು ವಿಎಫ್​ಎಕ್ಸ್​ ಕೆಲಸಗಳು ಪ್ರಾರಂಭವಾಗಿವೆ. ಸದ್ಯ ಅಂತಿಮ ಹಂತದ ಶೂಟಿಂಗ್​ ಕೂಡ ಬೆಂಗಳೂರಿನಲ್ಲಿ ನಡೆಯುತ್ತಿದೆ. ಕನ್ನಡ ಮತ್ತು ಇಂಗ್ಲೀಷ್​ನಲ್ಲಿ ಸಿನಿಮಾ ಮೂಡಿಬರುತ್ತಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿ ಹಲವು ಭಾಷೆಗಳಲ್ಲಿ ಡಬ್​ ಆಗಲಿರುವ ಕಾರಣ, ದೇಶ-ವಿದೇಶಗಳಲ್ಲೂ ಸಿನಿಮಾ ಪ್ರಚಾರ ನಡೆಸಬೇಕಿದೆ. ಹೀಗಾಗಿ ರಿಲೀಸ್​ಗೂ ಮೂರು ತಿಂಗಳು ಮುನ್ನ ಅರ್ಥಾತ್​ 2026ರ ಜನವರಿಯಿಂದ ಚಿತ್ರತಂಡ "ಟಾಕ್ಸಿಕ್​' ಪ್ರಚಾರ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸುವ ಪ್ಲ್ಯಾನ್​ ಮಾಡಿಕೊಂಡಿದೆ.
ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೆವಿಎನ್​ ಪ್ರೊಡಕ್ಷನ್ಸ್​ ಜಾಲತಾಣದಲ್ಲಿ, ""ಟಾಕ್ಸಿಕ್​' ಬಿಡುಗಡೆಗೆ 140 ದಿನಗಳು. ವಿಶ್ವಾದ್ಯಂತ ಮಾರ್ಚ್​ 19, 2026ರಂದು ರಿಲೀಸ್​' ಎಂದು ಸ್ಪಷ್ಟಪಡಿಸಿದೆ. ಮಾ. 19, 2026 ಗುರುವಾರವಾಗಿದ್ದು, ಅಂದು ದಕ್ಷಿಣ ಭಾರತದಲ್ಲಿ ಉಗಾದಿ ಆಚರಿಸಿದೆ, ಉತ್ತರ ಭಾರತದಲ್ಲಿ ಗುಡಿ ಪಡ್ವ ಆಚರಿಸಲಾಗುತ್ತದೆ. ಹಾಗೇ ಮಾ. 19 ಮತ್ತು 20ರಂದು ವಿಶ್ವಾದ್ಯಂತ ಈದ್​ ಆಚರಿಸಲಾಗುತ್ತದೆ. ಹೀಗಾಗಿ ಗುರುವಾರ ಮತ್ತು ಶುಕ್ರವಾರ ರಜೆ ಇರಲಿದ್ದು, ಶನಿವಾರ ಮತ್ತು ಭಾನುವಾರದವರೆಗೆ ನಾಲ್ಕು ದಿನಗಳ ಕಾಲ ಸುದೀರ್ಘ ವೀಕೆಂಡ್​ ಸಿಗಲಿದೆ. ಇದೇ ಲೆಕ್ಕಾಚಾರದಲ್ಲಿ ಚಿತ್ರತಂಡ ಸಿನಿಮಾ ಘೋಷಿಸಿದ ದಿನವೇ ಬಿಡುಗಡೆ ದಿನಾಂಕವನ್ನೂ ಅನೌನ್ಸ್​ ಮಾಡಿತ್ತು.