Yash halts Toxic event midway after sound box collapses into crowd, two injured
- ಹೈದರಾಬಾದ್‌ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ಟಾಕ್ಸಿಕ್ ಪ್ರೀ-ರೀಲೀಸ್ ಈವೆಂಟ್.
- ಪ್ರೀ-ರೀಲೀಸ್ ಕಾರ್ಯಕ್ರಮದ ವೇಳೆ ಸೌಂಡ್ ಬಾಕ್ಸ್ ಸೆಟಪ್ ಕುಸಿದು ಬಿದ್ದು, ವಿದ್ಯಾರ್ಥಿಗಳಿಗೆ ಗಾಯ.
- ತಕ್ಷಣವೇ ತಮ್ಮ ಭಾಷಣ ನಿಲ್ಲಿಸಿ, ಗಾಯಗೊಂಡವರ ಯೋಗಕ್ಷೇಮ ವಿಚಾರಿಸಿಕೊಂಡ ಯಶ್.
Yash halts Toxic event midway after sound box collapses into crowd, two injured: ಸ್ಯಾಂಡಲ್‌ವುಡ್ ನಟ ಯಶ್ ಅಭಿನಯದ ಟಾಕ್ಸಿಕ್ ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್ ಸಿನಿಮಾ ರಿಲೀಸ್ಗೆ ಇನ್ನೇನು ದಿನಗಣನೆ ಶುರುವಾಗಿದೆ. ಚಂದನವನದಲ್ಲಿ ಒಂದು ಸಂಭ್ರಮದ ವಾತಾವರಣವೇ ಸೃಷ್ಟಿಯಾಗಿದೆ. ಆದರೆ, ಈ ಮಧ್ಯೆ ಹೈದರಾಬಾದ್‌ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅವಘಡವೊಂದು ಸಂಭವಿಸಿದೆ.
ಹೈದರಾಬಾದ್‌ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ಟಾಕ್ಸಿಕ್ ಸಿನಿಮಾದ ಪ್ರೀ-ರೀಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಸೌಂಡ್‌ಬಾಕ್ಸ್ ಹಾಗೂ ಫ್ಲಡ್‌ಲೈಟ್ ಕಂಬ ಕುಸಿದು ಬಿದ್ದು, ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ವೇದಿಕೆಯಲ್ಲಿ ಯಶ್ ಅವರು ಮಾತನಾಡುತ್ತಿದ್ದಾಗಲೇ ಈ ಘಟನೆ ನಡೆದಿದೆ. ಕೂಡಲೇ ಅವರು ಪ್ರತಿಕ್ರಿಯೆ ಕೊಟ್ಟಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಗಸ್ಟ್ 26ರಂದು ಟಾಕ್ಸಿಕ್ ಸಿನಿಮಾ ಭರ್ಜರಿಯಾಗಿ ರಿಲೀಸ್ ಆಗಲಿದೆ. ಈ ಹಿನ್ನೆಲೆ ಹೈದರಾಬಾದ್ನಲ್ಲಿ ಟಾಕ್ಸಿಕ್ ಪ್ರೀ ರಿಲೀಸ್ ಕಾರ್ಯಕ್ರಮ ಇತ್ತು. ಇದಕ್ಕೆ ಸಾವಿರಾರು ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳು ಸೇರಿದ್ದರು. ಯಶ್ ಮತ್ತು ನಟಿಯರನ್ನು ನೋಡುವ ಸಲುವಾಗಿ ಕೆಲವರು ಸೌಂಡ್ ಬಾಕ್ಸ್ ಮತ್ತು ಉಪಕರಣಗಳನ್ನೊಳಗೊಂಡ ಪೋಲ್‌ಗಳ ಮೇಲೆ ಹತ್ತಿದ್ದರಿಂದ ಭಾರವಾಗಿ ಕುಸಿದಿದೆ.
ನೆಲಕ್ಕೆ ಬಿದ್ದ ಸೌಂಡ್ ಬಾಕ್ಸ್ ಸ್ಟ್ರಕ್ಚರ್
ಇದರಿಂದಾಗಿ ಯುವಕ-ಯುವತಿಯರಿಗೆ ಗಾಯಗಳಾಗಿದೆ. ಈ ಘಟನೆಯಿಂದ ಓರ್ವ ವಿದ್ಯಾರ್ಥಿನಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ತಕ್ಷಣವೇ ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಗಾಯಾಳುಗಳ ಆರೋಗ್ಯದ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಯಾವುದೇ ನಿಖರ ಮಾಹಿತಿ ಸಿಕ್ಕಿಲ್ಲ.
ಯಶ್ನಿಂದ ಆತಂಕ
ವೇದಿಕೆಯಲ್ಲಿ ಮಾತನಾಡುತ್ತಿದ್ದ ನಟ ಯಶ್, ತಕ್ಷಣವೇ ಗದ್ದಲವನ್ನು ಗಮನಿಸಿ, ಹೇ ಎಂದು ಕೂಗಿ ತಮ್ಮ ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿದರು. ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಆಯೋಜಕರ ಬಳಿ ವಿಚಾರಿಸಿದ ಅವರು, ಜಾಗರೂಕತೆ, ಅಲ್ಲಿ ಎಲ್ಲವೂ ಸರಿಯಾಗಿದೆಯಾ? ದಯವಿಟ್ಟು ಪರಿಶೀಲಿಸಿ ಸರ್. ವಿದ್ಯಾರ್ಥಿಗಳೇ, ಎಚ್ಚರಿಕೆಯಿಂದ ಇರಿ" ಎಂದು ಮೈಕ್ ಮೂಲಕ ಹೇಳಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ
ಮಲ್ಲಾರೆಡ್ಡಿ ಯೂನಿವರ್ಸಿಟಿಯಲ್ಲಿ ಅತಿಯಾದ ಜನರು ಇದ್ದ ಕಾರಣ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಸೌಂಡ್‌ಬಾಕ್ಸ್ ಹಾಗೂ ಇತರ ಉಪಕರಣಗಳನ್ನು ಕಟ್ಟಿಹಾಕಿದ್ದ ಕಂಬಗಳನ್ನು ಹತ್ತಲು ಯತ್ನಿಸಿದ್ದೇ ಈ ಘಟನೆಗೆ ಕಾರಂ ಅಷ್ಟೇ ಅಲ್ಲದೇ ಇವುಗಳ ಬಳಿ ಬರದಂತೆ ಪೊಲೀಸರು ಎಚ್ಚರಿಕೆ ಸಹ ಕೊಟ್ಟಿದ್ದರು
ಆ.26ಕ್ಕೆ ಸಿನಿಮಾ ರಿಲೀಸ್
ಗೀತು ಮೋಹನ್‌ದಾಸ್ ನಿರ್ದೇಶನದ ಚರಣ್ ರಾಜ್ ಸಂಗೀತವಿರುವ ಮತ್ತು ಯಶ್, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ನಟಿಸಿರುವ 'ಟಾಲಿಕ್' ಚಿತ್ರಕ್ಕೆ ಸೆನ್ಸಾರ್ ಮಂಡಳಿಯು 'ಎ' ಪ್ರಮಾಣಪತ್ರ ನೀಡಿದ್ದು, ಆಗಸ್ಟ್ 26ರಂದು ಬಿಡುಗಡೆಯಾಗಲಿದೆ, (ಏಜೆನ್ಸೀಸ್).