Yash advises students and sends a strong message on ‘North-South’ comp 
ಸ್ಯಾಂಡಲ್‌ವುಡ್

'ಉತ್ತರ, ದಕ್ಷಿಣ ಭಾಷೆಗಳ ಗಡಿ ಬೇಡ..ನಿಮ್ಮ ನಿಷ್ಕಲ್ಮಶ ಪ್ರೀತಿ ಸಾಕು'; 'Toxic' Pre-Release Eventನಲ್ಲಿ ಯಶ್ ಮಾತು

ಪ್ರಮುಖ ಮುಖ್ಯಾಂಶಗಳು

  • ಸಿನಿಮಾಕ್ಕೆ ಭಾಷಾ ಗಡಿ ಬೇಡ ಎಲ್ಲರನ್ನೂ ಪ್ರೀತಿಸುತ್ತೀರಿ ಎಂದು ನಂಬುತ್ತೇನೆ: ಯಶ್
  • ಹೈದರಾಬಾದ್​ನಲ್ಲಿ ಆಗಸ್ಟ್​ 22ರಂದು ಟಾಕ್ಸಿಕ್​ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮ
  • ನಿಮ್ಮಿಂದ ನನಗೆ ಹೆಚ್ಚು ಆತ್ಮವಿಶ್ವಾಸ ಸಿಕ್ಕಿದೆ ಎಂದು ತೆಲುಗು ಭಾಷೆಯಲ್ಲೇ ಮಾತನಾಡಿದ ಯಶ್
Yash advises students and sends a strong message on ‘North-South’ comp: 'ನಾನು ಪ್ರತಿ ಬಾರಿ ಹೇಳೋದು ಇದೇ ವಿಚಾರ ಸಿನಿಮಾವನ್ನು ಹೆಚ್ಚಾಗಿ ಸೀರಿಯಸ್​​ ಆಗಿ ತೆಗೆದುಕೊಳ್ಳೋಕೆ ಹೋಗಬೇಡಿ. ನಾವೇನೂ ತುಂಬಾ ಚೆನ್ನಾಗಿ ಮಾಡಿಲ್ಲ. ಸಿನಿಮಾವನ್ನು ಭಾಷಾ ಗಡಿಗಳಿಂದ ನಿರ್ಬಂಧಿಸಬಾರದು. ಯಾವುದೇ ರಾಜ್ಯದ ನಟ-ನಟಿಯರಿಗೆ ಒಂದೇ ರೀತಿಯ ಪ್ರೀತಿಯನ್ನು ನೀವು ನೀಡುತ್ತೀರಾ ಎನ್ನುವುದನ್ನು ನಾನು ನಂಬಿದ್ದೇನೆ' ಹೀಗೆಂದು ನಟ ಯಶ್​ ಹೈದರಾಬಾದ್​ನಲ್ಲಿ ನಡೆದ ಟಾಕ್ಸಿಕ್​  ಪ್ರೀ ರಿಲೀಸ್ ಇವೆಂಟ್​​ನಲ್ಲಿ ಮಾತನಾಡಿದರು.
ಹೈದರಾಬಾದ್​ನ ಮಲ್ಲಾ ರೆಡ್ಡಿ ವಿಶ್ವವಿದ್ಯಾನಿಲಯದಲ್ಲಿ ಆಗಸ್ಟ್​ 22ರಂದು   ಟಾಕ್ಸಿಕ್​ ಸಿನಿಮಾ ಪ್ರೀ ರಿಲೀಸ್ ಕಾರ್ಯುಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟಿ ಕಿಯಾರಾ ಅಡ್ವಾಣಿ, ನಿರ್ದೇಶಕಿ ಗೀತು ಮೋಹನ್​ ದಾಸ್​​, ನಯನತಾರಾ, ರುಕ್ಮಿಣಿ ವಸಂತ್​ ಸೇರಿದಂತೆ ಹಲವರು ಇದ್ದರು.  ಈ ವೇಳೆ ಯಶ್​ ಅಲ್ಲಿನ ಪ್ರಾದೇಶಿಕ ಭಾಷೆ ತೆಲುಗುವಿನಲ್ಲೇ ಮಾತನಾಡಿದ್ದು ಸಾಕಷ್ಟು ಜನರ ಗಮನ ಸೆಳೆಯಿತು.

ಯಶ್​  ಮಾತುಗಳು ಹೀಗಿತ್ತು

'ಕೆಜಿಎಫ್​ ಸಿನಿಮಾ ಸಕ್ಸಸ್ ಕಂಡ ನಂತರ ನಾನು ಒಂದು ತ್ಯಾಂಕ್ಸ್ ಹೇಳೋಕೆ ಬಂದಿಲ್ಲ. ಸ್ವಾರಿ ಆ ವಿಚಾರಕ್ಕೆ. ಆದರೆ ಆ ಗೆಲುವಿಗೆ ಧನ್ಯವಾದ. ನೀವೆಷ್ಟು ಪ್ರೀತಿ ತೋರಿಸಿದ್ದೀರಿ ಎಂದರೆ, ನೀವು ನಮಗೆ ಆತ್ಮವಿಶ್ವಾಸ ಕೊಟ್ಟಿದ್ದೀರಿ,. ನೀವೆಂದಿಗೂ ಬಯಾಸ್ಡ್​​ ಆಗಿ ನಡೆಸಿಕೊಂಡಿದ್ದೀರಿ ಎಂದು ನನಗೆ ಅನಿಸಲಿಲ್ಲ. ನನ್ನಂತ ಒಂದು ಸಾಧಾರಣ ಮನುಷ್ಯ ಸಹ ನಟನಾಗುವ ಕನಸು ಕಾಣಬಹುದು ಎಂದು ಇಲ್ಲಿನ ಜನ ಭರವಸೆ ಕೊಟ್ಟಿದ್ದಾರೆ ಎಂದು ಕೊಂಡಾಡಿದರು.

ನಿಮ್ಮಲ್ಲಿ ಎಲ್ಲರನ್ನು ಮೆಚ್ಚುವ ಗುಣ ಇದೆ

'ನಿಮ್ಮ  ಪ್ರೀತಿ ಹಾಗೂ ಸಿನಿಮಾ ನೋಡುವ ಪರಿಗೆ ಯಾವುದೇ ಗಡಿ ಇಲ್ಲ, ಬ್ಯಾರಿಕೇಡ್ಸ್ಇಲ್ಲ, ರಾಜಕೀಯ ಮಾಡೋದಿಲ್ಲ. ಭಾಷೆಗೂ ಮೀರಿದ ಮಾನವೀಯತೆ ಇದೆ, ಪ್ರೀತಿ ಇದೆ ಎನ್ನುವುದನ್ನು ನೀವು ತೋರಿಸಿದ್ದೀರಿ.  ಕರ್ನಾಟಕದ ಜನರು ಅಷ್ಟೇ  ತೆಲುಗು ಭಾಷೆ ಮತ್ತು ಜನರನ್ನು ಅಷ್ಟೇ ಪ್ರೀತಿ ಮಾಡುತ್ತಾರೆ. ನೆಚ್ಚಿಕೊಳ್ಳುತ್ತಾರೆ. ನಾವೆಲ್ಲ ಜೊತೆಗಿದ್ದಾಗ ಭಾರತೀಯ ಸಿನಿಮಾಗಳಾಗಿ ಮಿಂಚಬಹುದು' ಎಂದರು. 
'ಆದಷ್ಟು ಬೇಗನೆ ನಾವೆಲ್ಲರೂ ಜಾಗತಿಕ ಮಟ್ಟದಲ್ಲಿ ಇಂಡಿಯಾ ಸಿನಿಮಾಗಳು ಪೊಸಿಷನ್ ,ಮತ್ತು ಮಾರ್ಕ್​ ಆಗಿರುವಂತೆ ನೋಡಿಕೊಳ್ಳಬೇಕು.  ಯುವಕರರು, ವಿದ್ಯಾರ್ಥಿಗಳಿಗೆ ಹೇಳ್ತೇನೆ ಸಿನಿಮಾವನ್ನು ಹೆಚ್ಚಾಗಿ ಸೀರಿಯಸ್​ ಆಗಿ ತೆಗೆದುಕೊಳ್ಳಬೇಡಿ. ಜೀವನದಲ್ಲಿ ಏನು ಮಾಡಬೇಕು ಎನ್ನುವ ಗುರಿ ಹೊಂದಿದ್ದೀರೋ ಅದನ್ನು ಮಾಡುತ್ತಾ ಹೋಗಿ ನಿಮ್ಗೆ ನಿಜವಾಗಲೂ ಸಕ್ಸಸ್ ಸಿಗುತ್ತೆ ಎಂದು ಹುರಿದುಂಬಿಸಿದರು.

ಜಗತ್ತನ್ನು ದೂಷಿಸಬೇಡಿ

'ನಂಗೆ ಒಂದು ವಿಚಾರವನ್ನು ಯುವಜನತೆಗೆ ಹೇಳೋದಿದೆ. ನಾವು ಏನಾದರೂ ಸಾಧಿಸಿದರೆ ಅಥವಾ ಸಾಧಿಸದೇ ಹೋದರೆ ನಾವೆಂದಿಗೂ  ಜಗತ್ತನ್ನು ನಿಂದಿಸಕೂಡದು. ಅದಕ್ಕೆ ನಾವೇ ಜವಾಬ್ದಾರಾಗಿರುತ್ತೇವೆ. ನೀವು ಎಲ್ಲಿಗೆ ಹೋದರೂ, ಯಾವ ರಾಜ್ಯದಲ್ಲಿ ಕೆಲಸ ಮಾಡಿದರೂ ಒಳ್ಳೆಯ ಕೆಲಸ ಮಾಡಿದರೆ ಒಂದೇ ರೀತಿಯ ಪ್ರೀತಿ ಸಿಗುತ್ತದೆ' ಎಂದು ಯಶ್​​​​ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಪ್ರಚೋದಿಸುವ ಹೇಳಿಕೆಗೆ ಕಿವಿಗೊಡಬೇಡಿ

ಮತ್ತೊಂದು ವಿಚಾರ ಎಂದರೆ 'ನಮ್ಮ ದೇಶದಲ್ಲಿ ಹಲವು ರಾಜ್ಯಗಳಿವೆ...ಜಿಲ್ಲೆಗಳಿವೆ ಆಯಾ  ಪ್ರಾಂತ್ಯಕ್ಕೆ ಆಯಾ ಭಾಷೆ ಪ್ರತ್ಯೇಕವಾಗಿದೆ. ಅದರ ಮೇಲೆ ನಮಗೆ ತುಂಬಾನೆ ಪ್ರೀತಿ ಇದೆ. ಆದರೆ ಇಂದಿನ  ಕಾಲದ ಯುವಜನರು  ನೀವೆಲ್ಲ ಒಟ್ಟಾಗಿ ಹೋರಾಡಬೇಕು.  ಯಾರಾದರೂ ನಿಮ್ಮ ಒಗ್ಗಟ್ಟನ್ನು ಮುರಿದುಕೊಳ್ಳಲು ಹೇಳಿದರೆ ಅವರ ಮಾತನ್ನು ಎಂದಿಗೂ ಕೇಳಬೇಡಿ. ಅದರೊಂದಿಗೆ ರಾಜಕೀಯವನ್ನು ತಳಕು ಹಾಕಲು ನೋಡಿದರೆ ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಯಾವುದೇ ರಾಜ್ಯದ ಜನರಿಗೆ ಅಥವಾ ನಟರಿಗೆ ನೀವು ನಿಷ್ಕಲ್ಮಶ ಪ್ರೀತಿಯನ್ನು ನೀಡುತ್ತೀರಿ ಎನ್ನುವ ನಂಬಿಕೆ ನನಗೆ ಇದೆ ಎಂದು ಯಶ್ ಹೇಳಿದರು, (ಏಜೆನ್ಸೀಸ್).