Actor Risheekaa Singh targets Yash over Toxic
- ಟಾಕ್ಸಿಕ್ ಸಿನಿಮಾ ಬಗ್ಗೆ ಮಾತನಾಟಿದ ಸ್ಯಾಂಡಲ್‌ವುಡ್ ನಟಿ ರಿಷಿಕಾ ಸಿಂಗ್.
- ಟಾಕ್ಸಿಕ್ ಆಗಸ್ಟ್ 26 ರಂದು ಬಹು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆ.
- ನಟಿ ರಿಷಿಕಾ ಸಿಂಗ್ ವಿರುದ್ಧ ಕಿಡಿಕಾರಿದ ಯಶ್ ಫ್ಯಾನ್ಸ್, ಹೊಟ್ಟೆಯುರಿ ಇರಬೇಕು ಎಂದು ಕಿಡಿ
Actor Risheekaa Singh targets Yash over Toxic:
ಬೆಂಕಿ ಬಿರುಗಾಳಿ, ಕಳ್ಳ, ಮಳ್ಳ, ಸುಳ್ಳ, ಕಠಾರಿವೀರ ಸುರಸುಂದರಾಗಿ, ದುನಿಯಾ ವಿಜಯ್ ನಟನೆಯ ಕಂಠೀರವ ಸಿನಿಮಾದಲ್ಲಿ ನಟಿಸಿರುವ ನಟಿಬ ಹಾಗೂ ನಿರ್ಮಾಪಕ ರಾಜೇಂದ್ರ ಬಾಬು ಅವರ ಪುತ್ರಿ ರಿಷಿಕಾ ಸಿಂಗ್ ಅವರು ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಬಗ್ಗೆ ಮಾತನಾಡಿ ಟೀಕೆಗೆ ಒಳಗಾಗಿದ್ದಾರೆ.
ಮಹಿಳೆಯರಿಗೆ ಮರ್ಯಾದೆ ಕೊಡದಿದ್ದರೆ ಕರ್ನಾಟಕದಿಂದ ನಿಮ್ಮ ಜಾಗ ಖಾಲಿ ಮಾಡಿಸಿಬಿಡುತ್ತೇವೆ ಎಂದು ನಟಿ ರಿಷಿಕಾ ಸಿಂಗ್ ಮಾತನಾಡಿದ್ದಾರೆ. ಇದನ್ನು ಉಲ್ಲೇಖಿಸಿ ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ಮೊದಲು ಇವ್ರನ್ನ ಖಾಲಿ ಮಾಡಿಸಿ ಎಂದು ಒಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು ಯಶ್ ಬೆಳವಣಿಗೆ ಹೊಟ್ಟೆ ಉರಿಯುತ್ತಿರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ರಿಷಿಕಾ ಸಿಂಗ್ ಹೇಳಿದ್ದು ಹೀಗೆ
ಟಾಕ್ಸಿಕ್ ಟ್ರೇಲರ್ ಕಳೆದ ಶನಿವಾರ ರಿಲೀಸ್ ಆಗಿತ್ತು. ಇದರಲ್ಲಿ ಯಶ್ ಹೇಳುವ ಹೆಣ್ಮಕ್ಕಳಿಗೆ ಅಂದ ಇದ್ರೆ ಚಂದ ಅದನ್ನೇ ಅಸ್ತ್ರ ಮಾಡಿಕೊಂಡ್ರೆ ಹೆಂಗೆ ಕಂದ ಎನ್ನುವ ಒಂದು ಡೈಲಾಗ್ ಅನ್ನು ಬಳಕೆ ಮಾಡಿಕೊಂಡಿರುವ ರಾಜೇಂದ್ರ ಬಾಬು ಸಿಂಗ್ ಪುತ್ರಿ ಹಾಗೂ ನಟಿ ರಿಷಿಕಾ ಸಿಂಗ್, ಹೆಣ್ಮಕ್ಕಳಿಗೆ ಅಂದ ಇದ್ರೆ ಚಂದ, ಗಂಡ್ಮಕ್ಕಳಿಗೆ ಮರ್ಯಾದೆ ಇದ್ರೆ ಚಂದ ಕಂದ, ಇದೇನೂ ಪ್ಯಾಂಟ್ ಬಿಚ್ಕೊಂಡು ಆಗ್ಬಿಟ್ಟಿದ್ದೀಯಾ ಮಂಗ ಎಂದಿದ್ದಾರೆ.
ಮುಂದುವರೆದು, ಮನೆಯಲ್ಲಿ ಹೆಂಡ್ತಿ ಇದಾಳೆ. ಇದೇನೂ ನಟಿಯರ ಜೊತೆ ನಿನ್ನ ಚಕ್ಕಂದ ಕಂದ. ನಿನಗೂ ಹೆನ್ನೂ ಮಗಳು ಇದ್ದಾಳೆ, ದೊಡ್ಡದಾಗಿ ಡೈಲಾಗ್ ಹೊಡೆಯೋಕೆ ಬಂದ. ಹೆಣ್ಣಿಗೆ ಗೌರವ ಕೊಡಿ. ಇಲ್ಲಾಂದ್ರೆ ಜಾಗ ಖಾಲಿ ಮಾಡಿಸ್ತೀವಿ ಕರ್ನಾಟಕದಿಂದ ಐ ಆಮ್ ಟಾಕ್ಸಿಕ್ ಎಂದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ರಿಷಿಕಾ ಸಿಂಗ್ ಮಾತನಾಡಿದ್ದಾರೆ.
ಮತ್ತೊಂದು ವಿಡಿಯೋದಲ್ಲಿ ಮಾತನಾಡಿರುವ ರಿಷಿಕಾ ಅವರು, ನಾನು ಮಲಯಾಳಂ ಡೈರೆಕ್ಟರ್ ಬಗ್ಗೆ ಮಾತನಾಡುತ್ತಿಲ್ಲ. ಅವರಿಗೆ ಇಲ್ಲಿನ ಸಂಸ್ಕೃತಿ ಬಗ್ಗೆ ಗೊತ್ತಿಲ್ಲ. ಯಶ್ ಅವರಿಗೆ ಗೊತ್ತಿದೆಯಲ್ವಾ. ನಾನು ಆಡಿಯನ್ಸ್, ಸಿನಿಮಾ ನಟಿಯಾಗಿ ನನ್ನ ಅಭಿಪ್ರಾಯ ಹಂಚಿಕೊಂಡಿದ್ದೇನೆ. ನನ್ನ ತಂದೆ ಈ ಹಿಂದೆ ಸಾಕಷ್ಟು ನ್ಯಾಷನಲ್ ಅವಾರ್ಡ್ ತೆಗೆದುಕೊಂಡಿದ್ದರು.ಅವರ ಡೈಲಾಗ್ ನನಗೆ ಹರ್ಟ್ ಆಯ್ತು ಆಗಾಗಿ ಕೌಂಟರ್ ಕೊಟ್ಟೆ ಅದನ್ನು ತಪ್ಪು ಎಂದು ಹೇಳೋಕೆ ನೀವ್ಯಾರು ಎಂದು ರಿಷಿಕಾ ಸಿಂಗ್ ಕಿಡಿಕಾರಿದ್ದಾರೆ.
ನೆಟ್ಟಿಗರು ಹೇಳಿದ್ದೇನು?
ನೀನು ಪಕ್ಕ ದರ್ಶನ್ ಅಭಿಮಾನಿ ಅಂತ ಗೊತ್ತಾಗ್ತಿದೆ. ಇದು ಒತ್ತಡದಿಂದ ವಿಡಿಯೋ ಮಾಡ್ತಿರೋದು ಎಂದು ಸಾನ್ವಿ ಎಂಬುವವರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇವರಿಗೆ ಯಶ್ ಅವರ ಬೆಳವಣಿಗೆ ಕಂಡು ಸಹಿಸಲಾಗುತ್ತಿದೆ. ಹೊಟ್ಟೆಯಲ್ಲಿ ಉರಿ ಹೆಚ್ಚಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಎಲ್ಲ ಹುಡಿಗಿಯರಿಗೂ ಈ ಟಾಕ್ಸಿಕ್ ಇಷ್ಟವಾಗಿಲ್ಲ. ಈ ಬಗ್ಗೆ ಮಾತನಾಡೋಕೆ ಯಾರಿಗೂ ಧಮ್ ಇಲ್ಲ. ಹೀಗಾಗಿ ಹುಡುಗಿಯರಿಗೆ ನಾಚಿಕೆ ಆಗಬೇಕು. ಹುಡಿಗಿಯರ ಪರ ನಿಲ್ಲಿ ಎಂದು ಮತ್ತೊಬ್ಬರು ಹೇಳಿದ್ದಾರೆ. ಯಾರಿವರು ಮೊದಲು ಇವರ ಜಾಗ ಖಾಲಿ ಮಾಡಿಸಿ, ಯಾವುದೋ ಕಾಣದ ಕೈ ಇವರ ಹಿಂದಿದೆ ಎಂದು ಈಶ್ವರ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ.
ರಿಷಿಕಾ ಸಿಂಗ್ ಯಾರು?
ರಿಷಿಕಾ ಸಿಂಗ್ ಕಳ್ಳ ಮಳ್ಳ ಸುಳ್ಳ , ಬೆಂಕಿ ಬಿರುಗಾಳಿ , ಕಂಠೀರವ ಮತ್ತು ತುಂಟರು, ಕಠಾರಿವೀರ ಸುರಸುಂದರಾಂಗಿ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ. ಹಿರಿಯ ಚಲನಚಿತ್ರ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ಅವರ ಮಗಳು. ಬಿಗ್ ಬಾಸ್ ಕನ್ನಡದ ಮೊದಲ ಸೀಸನ್‌ನಲ್ಲಿ ಸ್ಪರ್ಧಿಯಾಗಿದ್ದರು, (ಏಜೆನ್ಸೀಸ್).