City Lights set for September release
City Lights set for September release:
ಕೊಂಚ ನಟನೆಗೆ ಬ್ರೇಕ್ ಕೊಟ್ಟು ಸಿಟಿಲೈಟ್ಸ್ ನಿರ್ದೇಶನಕ್ಕೆ ಇಳಿದ್ದಿದ್ದ ಸ್ಯಾಂಡಲ್ವುಡ್ನ ಯಶಸ್ವಿ ನಾಯಕ ದುನಿಯಾ ವಿಜಯ್, ಸದ್ಯ ಸಿನಿಮಾ ರಿಲೀಸ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವರ್ಷ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಚಿತ್ರ ತೆರೆ ಕಾಣಲಿದೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ.
ವಿಜಯ್ ರಾಘವೇಂದ್ರ ಸಿನಿಮಾ ಕಥಾ ನಾಯಕನಾಗಿದ್ರೆ, ದುನಿಯಾ ವಿಜಯ್ ಅವರ ಮಗಳು ಮೋನಿಷಾ ನಟಿಯಾಗಿ ಮಿಂಚಲಿದ್ದಾರೆ. ಈ ಹಿಂದೆ ಲ್ಯಾಂಡ್ಲಾರ್ಡ್ ಸಿನಿಮಾದಲ್ಲಿ ರಿತನ್ಯಾ ನಟಿಸಿದ್ದರು. ಈಗ ಸಿಟಿ ಲೈಟ್ಸ್ ಸಿನಿಮಾ ಮೂಲಕ ಮತ್ತೊಬ್ಬ ಪುತ್ರಿಯನ್ನು ಸಿನಿಮಾ ರಂಗಕ್ಕೆ ದುನಿಯಾ ವಿಜಯ್ ಪರಿಚಯಿಸಿಕೊಡುತ್ತಿದ್ದಾರೆ.
ಸಿನಿಮಾ ಬಗ್ಗೆ
ಅಚಾನಕ್ಕಾಗಿ ಸಿಟಿಗೆ ಕಾಲಿಡುವ ಇಬ್ಬರು...ನಗರದ ಜೀವನಕ್ಕೆ ಒಗ್ಗಿಕೊಳ್ಳುವುದು ಹೇಗೆ. ಯಾವೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾರೆ. ಆ ಮಧ್ಯೆ ಜಿನುಗುವ ಪ್ರೀತಿ ಸುತ್ತ ಈ ಸಿನಿಮಾದ ಕತೆ ಸುತ್ತುತ್ತದೆ ಎನ್ನಲಾಗಿದೆ.
ಹಾಡುಗಳು ಹಿಟ್
ಈಗಾಗಲೇ ಸಂಚಿತ್ ಹೆಗ್ಡೆ ಅವರ ದನಿಯಲ್ಲಿ ಮೂಡಿಬಂದಿರುವ ಕಂದಮ್ಮ, ಕಂದಮ್ಮ ಹಾಡು ಸಾಕಷ್ಟು ಹೆಸರು ಮಾಡಿದೆ. ಇನ್ನು ಭಾವ ಭಾವ ಹಾಡಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಒಟ್ಟು ಈ ಸಿನಿಮಾದಲ್ಲಿ ಐದಾರು ಹಾಡುಗಳು ಇದ್ದು, ಶೀಘ್ರದಲ್ಲೇ ಟ್ರೇಲರ್ ರಿಲೀಸ್ ಮಾಡಲಾಗುತ್ತದೆ ಎಂದು ಸಿನಿಮಾ ತಂಡ ಹೇಳಿದೆ.
ಸೆ.18 ರಂದು ಸಿಟಿಲೈಟ್ಸ್
ಸಿಟಿ ಲೈಟ್ಸ್ ಚಿತ್ರವು ಸೆಪ್ಟೆಂಬರ್ 18 ರಂದು ರಾಜ್ಯಾದ್ಯಂತ ಬಿಡುಗಡೆ ಎಂದು ಕೆವಿಎನ್ ಪ್ರೊಡಕ್ಷನ್ ಹಾಗೂ ನಟ ವಿಜಯ್ ಅವರು ಪೋಸ್ಟರ್ ಹಂಚಿಕೊಂಡಿದ್ದಾರೆ. ಸಿನಿಮಾಗಾಗಿ ಕಾಯುತ್ತಿದ್ದೇನೆ. ಚರಣ್ ರಾಜ್ ಅವರ ಸಂಗೀತದಲ್ಲಿ ಮೂಡಿ ಬಂದಿರುವ ಈ ಸಿನಿಮಾವನ್ನು ನೋಡಲೇಬೇಕು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಮೋನಿಷಾ ಹೇಳಿದ್ದೇನು?
ನಾನು ಸಿನಿಮಾದಲ್ಲಿ ನಟಿಸಲು ಲಂಡನ್ನಲ್ಲಿ ತರಬೇತಿ ಪಡೆದುಕೊಂಡೆ. ನನ್ನ ತಂದೆ ನನ್ನನ್ನು ವಿಭಿನ್ನವಾಗಿ ತೋರಿಸಿದ್ದಾರೆ. ಆ ಪಾತ್ರಕ್ಕೆ ಬೇಕಾದ ಜೀವಂತಿಕೆ ಕೊಟ್ಟಿದ್ದೇನೆ. ಶ್ರಮ ಹಾಕಿದ್ದೇನೆ ಎಂದು ಮೋನಿಷಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದರು.
ನಟನೆಗೆ ಮಾತ್ರವಲ್ಲ ನಿರ್ದೇಶನಕ್ಕೂ ಸೈ
ದುನಿಯಾ ವಿಜಯ್ ಅವರು ನಟನೆಗೆ ಮಾತ್ರವಲ್ಲ ನಿರ್ದೇಶನಕ್ಕೂ ಸೈ ಎನಿಸಿಕೊಂಡಿದ್ದಾರೆ. 2021ರಲ್ಲಿ ಆಕ್ಷನ್ ಥ್ರಿಲ್ಲರ್ ಸಿನಿಮಾ ಸಲಗ ನಿರ್ದೇಶಿಸಿ ನಟಿಸಿದ್ದರು. ಇದರಲ್ಲಿ ಸಂಜನಾ ಆನಂದ್, ಡಾಲಿ ಧನಂಜಯ್ ಹಾಗೂ ನಾಗಭೂಷಣ್ ಅವರು ನಟಿಸಿದ್ದರು. 2024ರಲ್ಲಿ ಭೀಮಾ ಸಿನಿಮಾ ನಿರ್ದೇಶಿಸಿ ನಟಿಸಿದ್ದರು. ದುನಿಯಾ ವಿಜಯ್, ಅಚ್ಯುತ್ ಕುಮಾರ್ ಮತ್ತು ಪ್ರಿಯಾ ನಾಗರಾಜ್ ನಟಿಸಿದ್ದಾರೆ. ಬೆಂಗಳೂರಿನ ರೌಡಿಸಮ್ ಹಾಗೂ ಡ್ರಗ್ ಮಾಫಿಯಾದ ಬಗ್ಗೆ ಕತೆ ಸುತ್ತುತ್ತದೆ.
ನಟಿ ಉಮಾಶ್ರಿ ನಟನೆ
ಸಿನಿಮಾ ಮತ್ತೊಂದು ಕೇಂದ್ರ ಬಿಂದು ಎಂದರೆ, ನಟಿ ಉಮಾಶ್ರೀ ಹಾಗೂ ಚರಣ್ ರಾಜ್ ಸಂಗೀತ. ಈ ಸಿನಿಮಾದಲ್ಲಿ ಸಾದಾ ಸೀದಾ ಹುಡುಗ ಹಾಗೂ ಮಾಸ್ ಲುಕ್ನಲ್ಲಿ ವಿನಯ್ ರಾಜ್ಕುಮಾರ್ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಹಾಡು, ದುನಿಯಾ ವಿಜಯ್ ಅವರ ನಿರ್ದೇಶನದ ಪರಿಯು ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವನ್ನು ಹೆಚ್ಚಿಸುತ್ತಿದೆ, (ಏಜೆನ್ಸೀಸ್).