Upendra nephew Niranjan gets engaged to Sanjana in intimate ceremony
Niranjan gets engaged to Sanjana: ಸೀತಾ ಪಯಣ, ನಮ್ಮ ಹುಡಗರು ಸಿನಿಮಾಗಳಲ್ಲಿ ಮಿಂಚಿದ್ದ ಚಾಕ್ಲೇಟ್ ಬಾಯ್ ಉಪೇಂದ್ರ ಅವರ ಅಣ್ಣನ ಮಗ ಹಾಗೂ ನಟ ನಿರಂಜನ್ ಸುಧೀಂದ್ರ ಅವರು ಬೆಂಗಳೂರಿನ ಖಾಸಗಿ ರೆಸಾರ್ಟ್ನಲ್ಲಿ ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಮೇ.25ರಂದು ಈ ಸಂಭ್ರಮ ಮನೆ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪ್ರಿಯಾಂಕಾ ಉಪೇಂದ್ರ ಹಾಗೂ ಅವರ ಇಬ್ಬರು ಮಕ್ಕಳ ಫೋಟೋಗಳು ವೈರಲ್ ಆಗಿವೆ.
ಹುಡ್ಗಿ ಯಾರು?
ನಿರಂಜನ್ ಸುಧೀಂದ್ರ ಮತ್ತು ಸ್ತ್ರೀರೋಗ ತಜ್ಞೆ ಸಂಜನಾ ಬಿ ರಾಜ್ ಉಂಗುರ ಬದಲಾಯಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಹೇಗಿದ್ರು ಇಬ್ಬರು ಸ್ಟಾರ್ಸ್?
ರೇಷ್ಮೇ ಪ್ರಿಂಟೆಂಡ್ ಹೂಗಳಿರುವ ಮರೂನ್ ಕುರ್ತಾವನ್ನು ಉಪೇಂದ್ರ ಧರಿಸಿದ್ದರೆ, ನಟಿ ಪ್ರಿಯಾಂಕಾ ಉಪೇಂದ್ರ ಅವರು ಕೆಂಪು ಬಣ್ಣದ ಸೀರೆ ಅದಕ್ಕೊಪ್ಪುವ ನೆಕ್ಲೇಸ್ ಧರಿಸಿ ಸ್ಟನ್ನಿಂಗ್ ಆಗಿ. ಮಕ್ಕಳ ಜೊತೆಗಿನ ಫೋಟೋ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಪೋಷಕರಂತೆ ಮಕ್ಕಳು ಎಂದು ಕೊಂಡಾಡಿದ್ದಾರೆ. ಉಪ್ಪಿ ಸರ್ ನೀವ್ ಮಾತ್ರ ಸಖತ್ ಆಗಿ ಕಾಣ್ತಿದ್ದೀರಾ, ಬ್ಯೂಟಿಫುಲ್ ಎನ್ನುತ್ತಾ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ನಿರಂಜನ್ ಶ್ರೇಯಾಂಕಾ ಡೇಟಿಂಗ್ ಗಾಸಿಪ್ಸ್
ಈ ಹಿಂದೆ ಆರ್ಸಿಬಿ ತಂಡದ ಕ್ರಿಕೆಟ್ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಮತ್ತು ನಿರಂಜನ್ ಡೇಟಿಂಗ್ನಲ್ಲಿದ್ದಾರೆ. ಅವರಿಬ್ಬರೆ ಮದುವೆ ಮಾಡಿಕೊಳ್ಳುತ್ತಾರೆ ಎನ್ನುವ ವದಂತಿ ಇತ್ತು. ನಿರಂಜನ್ ಅಂದು ಈ ಬಗ್ಗೆ ಕಿಡಿಕಾರಿ ಪೋಸ್ಟ್ ಹಂಚಿಕೊಂಡಿದ್ದರು. ಇನ್ವಿಟೇಶನ್ ಬಂದ್ರೆ ನಮಗೆ ಒಂದು ಕೊಡಿ. ಫ್ಯಾಕ್ಟ್ ಚೆಕ್ ಮಾಡಿದ ನಂತರ ಪೋಸ್ಟ್ ಮಾಡಿ. ಸುಳ್ಳು ಸುದ್ದಿ ಹಬ್ಬಿಸೋದು ಬಿಡಿ ಎಂದು ಕಿಡಿಕಾರಿದ್ದರು.
ನಿರಂಜನ್ ಸಿನಿ ಪಯಣ
ನಿರಂಜನ್ ಅವರು ಬಳ್ಳಾರಿ ನಾಗ ಸಿನಿಮಾದಲ್ಲಿ ಬಾಲ ನಟನಾಗಿ ಕಾಣಿಸಿಕೊಂಡಿದ್ದರು. ಸೆಕೆಂಡ್ ಹಾಫ್ ಸಿನಿಮಾದಲ್ಲಿ ಅವರ ಚಿಕ್ಕಮ್ಮ ನಟಿ ಪ್ರಿಯಾಂಕಾ ಉಪೇಂದ್ರ ವಅರ ಜೊತೆ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ರಿಲೀಸ್ ಆಗಿದ್ದ ಅರ್ಜಿನ್ ಸರ್ಜಾ ನಿರ್ಮಾಣ, ನಿರ್ದೇಶನ ಸೀತಾ ಪಯಣ ಸಿನಿಮಾದಲ್ಲಿ ನಾಯಕ ನಟನಾಗಿ ಮಿಂಚಿದ್ದರು. ಇದರಲ್ಲಿ ಐಶ್ವರ್ಯಾ ಸರ್ಜಾ ಅವರು ನಟಿಯಾಗಿ ಕಾಣಿಸಿಕೊಂಡಿದ್ದರು, (ಏಜೆನ್ಸೀಸ್).