ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್
- "ಯಶ್ ಅಭಿನಯದ 'ಟಾಕ್ಸಿಕ್'
- ಮೊದಲ ದಿನವೇ ₹140 ಕೋಟಿ ಗಳಿಕೆ
- ಜವಾನ್ ಮತ್ತು ಧುರಂಧರ್ ದಾಖಲೆಗಳು ಧೂಳೀಪಟ
ಸಿನಿಮಾ: ಗೀತು ಮೋಹನ್ ದಾಸ್ ನಿರ್ದೇಶನದ ಹಾಗೂ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ, ಬಹು ನೀರಿಕ್ಷಿತ ಸಿನಿಮಾ ಟಾಕ್ಸಿಕ್: ದಿ ಫೇರಿ ಟೇಲ್ ಫಾರ್ ಗ್ರೋನಫ್ಸ್ ಈಗಾಗಲೇ ತೆರೆಕಂಡಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ.
ಸಿನಿಮಾ ತಂಡ ತಿಳಿಸಿದಂತೆ ಬುಧವಾರ ಆಗಸ್ಟ್ 26 ರಂದು ಪ್ರಪಂಚಾದಾದ್ಯಂತ ಬಿಡುಗಡೆಯಾಗಿದ್ದು, ಕೆಲ ದೇಶಗಳ ಕೆಲ ಥಿಯೇಟರ್ಗಳಲ್ಲಿ ಮಧ್ಯರಾತ್ರಿ 2.00 ಕ್ಕೆ ಸಿನಿಮಾ ಪ್ರದರ್ಶನ ಕಂಡಿದೆ ಎಂದು ತಿಳಿದು ಬಂದಿದೆ.
ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ಕೇಳು ಬರುತ್ತಿದ್ದರೂ ಟಾಕ್ಸಿಕ್ ಮೊದಲೇ ದಿನ (Toxic First Day Collection) ವೇ ನೂರು ಕೋಟಿ ಗಳಿಕೆ ಮಾಡುವ ಮೂಲಕ ಶುಭಾರಂಭ ಮಾಡಿದೆ ಎಂದು ಹೇಳಬಹುದಾಗಿದೆ.
ಮಾಹಿತಿ ಪ್ರಕಾರ, ಟಾಕ್ಸಿಕ್ ಮೊದಲ ದಿನ ಪ್ರಪಂಚದಾದ್ಯಂತ ಸುಮಾರು 140 ಕೋಟಿ ಗಳಿಕೆ ಮಾಡುವ ಮೂಲಕ ಜವಾನ್ ಮತ್ತು ಧುರಂಧರ್ ಸಿನಿಮಾದ ಮೊದಲ ದಿನದ ಗಳಿಕೆ ದಾಖಲೆಗಳನ್ನು ಪುಡಿಗಟ್ಟಿದೆ.
ಭಾರತದಲ್ಲಿ ಈ ಸಿನಿಮಾದ ಸುಮಾರು 120 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದರೆ, ವಿದೇಶದಲ್ಲಿ ಸುಮಾರು 20 ಕೋಟಿಗೂ ಹೆಚ್ಚಿನ ಗಳಿಕೆಮಾಡಿದೆ. ಹೀಗಾಗಿ ಟಾಕ್ಸಿಕ್ ಮೊದಲ ದಿನದ ಗಳಿಕೆ 140 ಕೋಟಿ ಎಂದು ಹೇಳಬಹುದಾಗಿದೆ. ಇನ್ನು ವಾರಾಂತ್ಯದಲ್ಲಿ ಈ ಗಳಿಕೆ ಪ್ರಮಾಣ ಅಧಿಕವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದರೂ ಸಿನಿಮಾ ಬಗ್ಗೆ ಕೆಲ ನೆಗೆಟಿವ್ ರಿವ್ಯೂ ಹೊರಬರುತ್ತಿರುವ ಹಿನ್ನಲೆ ಹೈಪ್ಗೆ ತಕ್ಕ ಗಳಿಕೆ ಕಷ್ಟಸಾಧ್ಯ ಎಂದು ಸಿನಿ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.
ಎಲ್ಲೆಲ್ಲಿ ಎಷ್ಟೆಷ್ಟು ಗಳಿಕೆ?
ಕನ್ನಡ, ಹಿಂದಿ ಸೇರಿದಂತೆ ಸುಮಾರು ಆರು ಭಾಷೆಗಳಲ್ಲಿ ತೆರೆಕಂಡಿದ್ದ ಟಾಕ್ಸಿಕ್ ಕರ್ನಾಟಕದಲ್ಲಿ ಸುಮಾರು 30 ಕೋಟಿ ಕಲೆಕ್ಷನ್ ಮಾಡಿದ್ದರೆ, ಆಂಧ್ರ ಮತ್ತು ತೆಲಂಗಾಣದಲ್ಲಿ 18 ಕೋಟಿ, ತಮಿಳುನಾಡು 6 ಕೋಟಿ, ಕೇರಳದಲ್ಲಿ 2.2 ಕೋಟಿ ಹಾಗೂ ಹಿಂದಿ ಬೆಲ್ಟ್ನಲ್ಲಿ 62.75 ಕೋಟಿ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ.
ಸೌತ್ ಸಿನಿಮಾಗಳನ್ನು ಹಿಂದಿಕ್ಕಿದ ಟಾಕ್ಸಿಕ್!
ಇನ್ನೂ ಮೊದಲ ದಿನಗ ಕಲೆಕ್ಷನ್ಗೆ ಬಂದರೆ ಕಲ್ಕಿ, ಸಲಾರ್, ಆದಿಪುರುಷ್, ದೆವರಾ, ಜವಾನ್ ಮತ್ತು ಧುರಂಧರ್ ಸಿನಿಮಾಗಳ ಮೊದಲ ದಿನದ ಗಳಿಕೆಗಿಂತ ಹೆಚ್ಚಿನ ಕಲೆಕ್ಷನ್ ಟಾಕ್ಸಿಕ್ ಮಾಡಿದೆ.
ಆದರೆ, ಅತ್ಯಧಿಕ ಮೊದಲ ದಿನಗ ಗಳಿಕೆ ಮಾಡಿರುವ ಪಟ್ಟಿಯಲ್ಲಿ 164 ಕೋಟಿ ಮೂಲಕ ಪುಷ್ಪಾ 2 ಸಿನಿಮಾ ಮೊದಲ ಸ್ಥಾನದಲ್ಲಿದರೆ, 133 ಕೋಟಿ ಗಳಿಸಿದ್ದ ಆರ್ಆರ್ಆರ್ ಎರಡನೇ ಸ್ಥಾನದಲ್ಲಿದೆ ಹಾಗೂ 121 ಕೋಟಿ ಮೂಲಕ ಬಾಹುಬಲಿ ಸಿನಿಮಾ ಮೂರನೇ ಸ್ಥಾನದಲ್ಲಿದೆ. ಇದೇ ಯಶ್ ಅಭಿನಯದ ಕೆಜಿಎಫ್-2 ಸಿನಿಮಾ 116 ಕೋಟಿಯೊಂದಿದೆ ನಾಲ್ಕನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ, (ಏಜನ್ಸೀಸ್).