- ಗೀತು ಮೋಹನ್ದಾಸ್ ನಿರ್ದೇಶನದ ಹಾಗೂ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್'
- ಇದೇ ಆ.26ರಂದು ಪ್ಯಾನ್ ವರ್ಲ್ಡ್ ರಿಲೀಸ್ ಆಗಲಿದೆ ರಾಯ 'ಟಾಕ್ಸಿಕ್' ಜಗತ್ತು
- ರಿಲೀಸ್ಗೂ ಮುನ್ನವೇ ಹಿಂದಿಯ ಧುರಂಧರ್ ಚಿತ್ರದ ದಾಖಲೆ ಉಡೀಸ್
Toxic The Movie: ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್, ನಟ ಯಶ್ ಅಭಿನಯದ ಹಾಗೂ ಗೀತು ಮೋಹನ್ ದಾಸ್ ನಿರ್ದೇಶನದ ಪ್ಯಾನ್ ವರ್ಲ್ಡ್ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ರಿಲೀಸ್ಗೆ ಇದೀಗ ದಿನಗಣನೆ ಆರಂಭಗೊಂಡಿದೆ. ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ಗೂ ಮುನ್ನವೇ ಬಾಕ್ಸ್ ಆಫೀಸ್ನಲ್ಲಿ ಟಾಕ್ಸಿಕ್ ಹೊಸ ದಾಖಲೆ ನಿರ್ಮಿಸಿದೆ.
ಯಶ್ ಕ್ರೇಜ್ ಡಬಲ್
ಇದೇ ಆಗಸ್ಟ್ 26ರಂದು ಜಾಗತಿಕವಾಗಿ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿರುವ ಈ ಚಿತ್ರದ ಮುಂಗಡ ಬುಕಿಂಗ್ ಭರ್ಜರಿಯಾಗಿ ಸಾಗಿದೆ. ನಿರೀಕ್ಷೆಗೂ ಮೀರಿ ಟಿಕೆಟ್ ಮಾರಾಟವಾಗಿದ್ದು, ವಿಶೇಷವಾಗಿ ಬುಕ್ ಮೈ ಶೋನಲ್ಲಿ, ಈಗಾಗಲೇ ದಾಖಲೆ ಬರೆದಿರುವ ಕೆಲವು ಬ್ಲಾಕ್ಬಸ್ಟರ್ ಸಿನಿಮಾಗಳ ರೆಕಾರ್ಡ್ ಅನ್ನು ಧೂಳಿಪಟ ಮಾಡಿದೆ. ಆ ಸಾಲಿನಲ್ಲಿ ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಚಿತ್ರವೂ ಇದೆ.
ಬಿಡುಗಡೆಗೆ ನಾಲ್ಕು ದಿನಗಳಿದೆ ಇದೇ ಎನ್ನುವ ಮೊದಲೇ ಮುಂಗಡ ಟಿಕೆಟ್ ಬುಕ್ಕಿಂಗ್ಗೆ ಆನ್ಲೈನ್ನಲ್ಲಿ ಮುಗಿಬಿದ್ದ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಲಭಿಸಿದೆ. ಇದು ಬಹುನಿರೀಕ್ಷಿತ ಸಿನಿಮಾ ಮೇಲಿನ ನಿರೀಕ್ಷೆಗಳನ್ನು ಇನ್ನಷ್ಟು ಡಬಲ್ ಮಾಡಿದೆ. ಸಿನಿ ಮಾಹಿತಿಗಳ ಪ್ರಕಾರ, ಕೇವಲ 48 ಗಂಟೆಗಳಲ್ಲಿ, 'ಟಾಕ್ಸಿಕ್' ಭಾರತದ ಎಲ್ಲ ಭಾಷೆಗಳಲ್ಲಿ ಸುಮಾರು 4.7 ಲಕ್ಷ ಟಿಕೆಟ್ಗಳನ್ನು ಮಾರಾಟ ಮಾಡಿದೆ.
ನಿರೀಕ್ಷೆಗೂ ಮೀರಿದ ವ್ಯಾಪಾರ
ಇದರೊಂದಿಗೆ, ಮೊದಲ ದಿನವೇ ಮುಂಗಡ ಬುಕಿಂಗ್ ಮೂಲಕ 18 ಕೋಟಿ ರೂ.ಗೂ ಅಧಿಕ ಒಟ್ಟು ಸಂಗ್ರಹವಾಗಿದೆ ಎಂದು ವಿವರಿಸಲಾಗಿದೆ. ಇದರಲ್ಲಿ ಸುಮಾರು 10 ಕೋಟಿ ರೂ. ಕನ್ನಡ ಆವೃತ್ತಿಯಿಂದಲೇ ದಾಖಲಾಗಿದೆ. ಹಿಂದಿ ಆವೃತ್ತಿಯೂ ನಿರೀಕ್ಷೆಗೂ ಮೀರಿದ ವ್ಯಾಪಾರ ಕೊಟ್ಟಿದೆ. ಹಿಂದಿ ಆವೃತ್ತಿಯ ಮೊದಲ ದಿನದ ಮುಂಗಡ ಬುಕಿಂಗ್‌ನಲ್ಲಿ ಸುಮಾರು 8 ಕೋಟಿ ರೂ. ಗಳಿಸಿದೆ ಎಂಬ ಮಾತು ಕೇಳಿಬಂದಿದೆ. ಅಲ್ಲಿಗೆ, ಉತ್ತರ ಭಾರತದ ಮಾರುಕಟ್ಟೆಯಲ್ಲೂ ಯಶ್ ಮೇಲಿನ ಕ್ರೇಜ್ ಮುಂಚೆಗಿಂತ ದುಪ್ಪಟ್ಟಾಗಿದೆ.
ಈಗ, 'ಟಾಕ್ಸಿಕ್' ಬುಕ್‌ಮೈಶೋ ಟಿಕೆಟ್ ಮಾರಾಟದ ವಿಷಯದಲ್ಲಿ ಮತ್ತೊಂದು ದಾಖಲೆಯನ್ನು ನಿರ್ಮಿಸಿದೆ ಎಂಬ ಮಾಹಿತಿ ಲಭಿಸಿದ್ದು, ಚಿತ್ರವು ಈಗಾಗಲೇ ಹಿಂದಿ ಭಾಷೆಯ 'ಧುರಂದರ್' ಮುಂಗಡ ಬುಕಿಂಗ್‌ಗಳನ್ನು ಮೀರಿಸಿದೆ ಎಂಬ ಚರ್ಚೆ ಚಲನಚಿತ್ರ ವಲಯಗಳಲ್ಲಿ ಜೋರಾಗಿವೆ. 'ಟಾಕ್ಸಿಕ್' ಚಿತ್ರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ ಸೆನ್ಸಾರ್ ಕ್ಲಿಯರೆನ್ಸ್. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಚಿತ್ರಕ್ಕೆ ಯಾವುದೇ ಅಡಚಣೆಯಿಲ್ಲದೆ 'ಎ' ಪ್ರಮಾಣಪತ್ರವನ್ನು ನೀಡಿದೆ.
ಚಿತ್ರಕಥೆಯ ಎಳೆ
1940 ಮತ್ತು 1970ರ ದಶಕದ ನಡುವೆ ಗೋವಾದಲ್ಲಿ ನಡೆಯುವ ಈ ಚಿತ್ರದಲ್ಲಿ ಯಶ್ ಒಬ್ಬ ರಗಡ್ ಗ್ಯಾಂಗ್ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮಿಳಿನಿಂದ ನಯನತಾರಾ, ಬಾಲಿವುಡ್ನಿಂದ ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಇದ್ದರೆ, ಕನ್ನಡ ಚಿತ್ರರಂಗದಿಂದ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಿರುವ ಈ ಚಿತ್ರ ಬಿಡುಗಡೆಗೂ ಮುನ್ನವೇ ಮುಂಗಡ ಬುಕಿಂಗ್‌ನಲ್ಲಿ ಹೆಚ್ಚುವರಿ ಕಲೆಕ್ಷನ್ ಮಾಡಿರುವುದು ಇದೀಗ ಸಿನಿ ವಲಯಗಳಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್).