ತಾರಾಗಣ: ಸುಜನಿತ್ ಶೆಟ್ಟಿ ಮತ್ತು ಅಶ್ವಿನಿ ಶೆಣೈ
ಒಂದು ಸಿನಿಮಾ ಮಾಡಬೇಕೆಂದರೆ ಕೋಟಿಗಟ್ಟಲೆ ಹಣ ಬೇಕಾ? ಸ್ಟಾರ್ಗಳೇ ಬರಬೇಕಾ? ದೊಡ್ಡ ತಾರಾಗಣ ಇರಬೇಕಾ? ಹತ್ತಾರು ಜನ ತಂತ್ರಜ್ಞರು ಕೆಲಸ ಮಾಡಬೇಕಾ? ಆ ಎಲ್ಲ ಹಳೆಯ ಮಾದರಿಗೆ ಬ್ರೇಕ್ ಹಾಕಿ ಆಲ್ಫಾ ಕ್ಯಾಮರಾ ಮತ್ತು ಐೋನ್ ಬಳಸಿ, ಎರಡೇ ಪಾತ್ರಗಳನ್ನಿಟ್ಟುಕೊಂಡು, ಕೇವಲ ಆರು ಜನರ ತಂಡವೊಂದು ಒಂದೊಳ್ಳೆ ಫೀಲ್ ಗುಡ್ ಲವ್ಸ್ಟೋರಿಯನ್ನು ಹೆಣೆದಿದೆ. ಅದೇ "ಎ ಡೇಟ್'. ಹಾಗಾದರೆ ಹೀಗಿದೆ ಈ ಸಿನಿಮಾ?
"ನಾವು ಅತಿಯಾಗಿ ಪ್ರೀತಿಸುವ, ಆದರೆ ನಮ್ಮನ್ನು ಪ್ರೀತಿಸದ ವ್ಯಕ್ತಿಯನ್ನು ನಾವು ಪ್ರೀತಿಸದೇ ಇರಲು ಏನು ಮಾಡಬೇಕು?' ಎಂದು ಆಳವಾಗಿ ಯೋಚಿಸುತ್ತಾ ಕಾರ್ತಿಕ್ (ಸುಜನಿತ್) ಬಳಿ ಕೇಳುತ್ತಾಳೆ ಮೊನಿಷಾ (ಅಶ್ವಿನಿ). ಇದು ಬಹುಶ@ ಒನ್ವೇ ಲವ್ ಮಾಡುವ ಅಥವಾ ಪ್ರೀತಿಯಲ್ಲಿ ಮೋಸ ಹೋದ ಹಲವರ ಪ್ರಶ್ನೆಯೂ ಹೌದು. ಈ ಪ್ರಶ್ನೆಗೆ "ಎ ಡೇಟ್' ಮೂಲಕ ಉತ್ತರ ನೀಡಲು ಯತ್ನಿಸಿದ್ದಾರೆ ನಿರ್ದೇಶಕ ವಿಮಲ್ ರಾಜ್.
ಎಂಎನ್ಸಿಯಲ್ಲಿ ಕೆಲಸ ಮಾಡುವ ಮೊನಿಷಾ (ಅಶ್ವಿನಿ). ಪ್ರಾಜೆಕ್ಟ್ ಒಂದಕ್ಕಾಗಿ ದೆಹಲಿಯಿಂದ ಬೆಂಗಳೂರಿಗೆ ಬರುತ್ತಾಳೆ. ಬೆಳಗ್ಗೆಯಿಂದ ಸಂಜೆವರೆಗೆ ಕಂಪ್ಯೂಟರ್ ಮುಂದೆ ಕಾಫಿ, ಟೀ, ರಾತ್ರಿ ಒಬ್ಬಳೇ ಮನೆಯಲ್ಲಿ ನೈಂಟಿ (ಮದ್ಯಪಾನ)... ಹೀಗೆ ಮೊನಿಷಾ ತನ್ನದೇ ಲೋಕದಲ್ಲಿ ಮುಳುಗಿರುತ್ತಾಳೆ. ಅದರ ನಡುವೆಯೇ ಕೆಲಸದಲ್ಲಿ ಎಡವಟ್ಟು ಮಾಡಿಕೊಳ್ಳುವ ಆಕೆ ಕೆಲಸ ಕಳೆದುಕೊಳ್ಳುವ ಸಂಕಷ್ಟಕ್ಕೆ ಸಿಲುಕುತ್ತಾಳೆ. ಆಗ ಅದೇ ಕಂಪನಿಯಲ್ಲಿ ಕೆಲಸ ಮಾಡುವ ಕನ್ನಡದ ಹುಡುಗ ಕಾರ್ತಿಕ್ (ಸುಜನಿತ್) ಬಳಿ ಸಹಾಯ ಕೇಳುತ್ತಾಳೆ. ಸಹಾಯ ಮಾಡಬೇಕೆಂದರೆ ತನ್ನ ಜತೆ ಡೇಟ್ಗೆ ಬರಬೇಕು ಅಂತ ಕಂಡೀಷನ್ ಹಾಕುತ್ತಾನೆ. ಅದರಂತೆ ಇಬ್ಬರೂ ಡೇಟ್ಗೆ ಹೊರಡುತ್ತಾರೆ. ದಣ ಭಾರತದವರನ್ನು ಆಡಿಕೊಳ್ಳುವ ಆಕೆಯ ಆಲೋಚನೆಗಳನ್ನು ಕನ್ನಡಿಗ ಕಾರ್ತಿಕ್ ಬದಲಿಸುತ್ತಾ ಸಾಗುತ್ತಾನೆ. ಅದರ ನಡುವೆಯೇ ಆಕೆಯ ಹಳೆಯ ಲವ್ಸ್ಟೋರಿ ತೆರೆದುಕೊಳ್ಳುತ್ತದೆ. ಅಲ್ಲಿಂದ ಆಕಸ್ಮಿಕವಾಗಿ ಸಿಗುವ ಕಾರ್ತಿಕ್ ಆಕೆಯ ಜೀವನದಲ್ಲಿ ಶಾಶ್ವತ ನೆನಪುಗಳನ್ನು ಸೃಷ್ಟಿಸುತ್ತಾನೆ. ಆ ಒಂದು ಡೇಟ್ ಆಕೆಯ ಜೀವನದ ದಿಕ್ಕನ್ನೇ ಬದಲಿಸುತ್ತದೆ. ಹೇಗೆ? ಸಿನಿಮಾ ನೋಡಿ.
ನಿರ್ದೇಶಕ ವಿಮಲ್ ರಾಜ್ ಈ ಕಥೆಯನ್ನು ಎಂಟು ಚಾಪ್ಟರ್ಗಳಲ್ಲಿ ಹೇಳಿದ್ದಾರೆ. 133 ನಿಮಿಷಗಳ ಕಥೆ ಉತ್ತರ ಮತ್ತು ದಣ ಭಾರತದ ನಡುವಿನ ಭಾಷೆ, ಸಂಸತಿಗಳ ಸಂರ್ಷಗಳೊಂದಿಗೆ ತೆರೆದುಕೊಂಡರೂ, ಅದರೀಚೆಗೆ ಒಬ್ಬರ ಒಳಗಿನ ಪ್ರೀತಿಯ ಕುರಿತ ದ್ವಂದ್ವ, ಸಂರ್ಷಗಳಿಗೆ ಮುಲಾಮು ಹಚ್ಚುತ್ತಾ ಸಾಗುತ್ತದೆ. ಹೀಗಾಗಿಯೇ ಮೊದರ್ಲಧ ಲವಲವಿಕೆಯಿಂದ ಸಾಗುವ ಕಥೆ, ದ್ವೀತಿಯಾರ್ಧದಲ್ಲಿ ಗಂಭೀರವಾಗುತ್ತದೆ. ಐಟಿ ಹಿನ್ನೆಲೆಯ ಕಥೆಯಾದ ಕಾರಣ ಸಂಭಾಷಣೆಯ ಜತೆಗೆ ಹಾಡುಗಳಲ್ಲೂ ಕನ್ನಡದ ಜತೆ ಇಂಗ್ಲೀಷ್ ಹೇರಳವಾಗಿದೆ. ಬೆಂಗಳೂರಿನ ಾಸ್ಟ್ ಲ್ೈ ಜತೆಗೆ ಭಾವನಾತ್ಮಕ ಸ್ಲೋ ಬದಲಾವಣೆಗಳನ್ನೂ ದೇವೇಂದರ್ ರೆಡ್ಡಿ ವಡ್ಡೆ ಛಾಯಾಗ್ರಹಣದಲ್ಲಿ ಸೊಗಸಾಗಿ ಸೆರೆ ಹಿಡಿದಿದ್ದಾರೆ. ಸಂಗೀತ, ಹಿನ್ನೆಲೆ ಸಂಗೀತ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿವೆ. ಒಟ್ಟಾರೆ, ಬ್ರೇಕಪ್ ನೋವಿನಲ್ಲಿರುವವರಿಗೆ ಈ ಸಿನಿಮಾ ಒಂದು ಟ್ರೀಟ್ಮೆಂಟ್ನಂತೆ ಕೆಲಸ ಮಾಡುತ್ತದೆ!