ಟಾಕ್ಸಿಕ್ ಸಿನಿಮಾ ಶೂಟಿಂಗ್ನಲ್ಲಿ ಕಿಯಾರಾ ಸೀಕ್ರೆಟ್ ಬಿಚ್ಚಿಟ್ಟ ಹುಮಾ
- 6 ತಿಂಗಳ ಗರ್ಭಿಣಿಯಾಗಿದ್ದರೂ ಮಳೆಯಲ್ಲಿ ಶೂಟಿಂಗ್ ಮಾಡಿದ ಕಿಯಾರಾ ಅ
- 'ಟಾಕ್ಸಿಕ್' ಇವೆಂಟ್‌ನಲ್ಲಿ ಹುಮಾ ಖುರೇಷಿ ಬಿಚ್ಚಿಟ್ಟ ನಟಿಯ ಸೀಕ್ರೆಟ್ ವೈರಲ್
- ನನಗೆ ಅವಳ ಛಲ ಮತ್ತು ಕಮಿಟ್ಮೆಂಟ್ ಸ್ಪೂರ್ತಿ ಎಂದ ಹುಮಾ
ಚೆನ್ನೈ: ನಾಳೆ ಎಂದರೆ ಆಗಸ್ಟ್ 26 ರಂದು ಈಡೀ ಭಾರತದ ಚಿತ್ರರಂಗವೇ ತುದಿಗಾಲಿನಲ್ಲಿ ಕಾಯುತ್ತಿರುವ ಟಾಕ್ಸಿಕ್ ಸಿನಿಮಾ ಬಿಡುಗಡೆಯಾಗಲಿದೆ. ರಾಕಿಂಗ್ ಸ್ಟಾರ್ ಯಶ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ, ಗೀತು ಮೋಹನ್ದಾಸ್ ನಿರ್ದೇಶನದ ಸಿನಿಮಾ ನಾಳೆ ತೆರೆಕಾಣಲು ಸಜ್ಜಾಗಿದೆ.
ಬಿಡುಗಡೆಗೂ ಮುನ್ನ ಸಿನಿತಂಡ ದೇಶದ ಬೇರೆ-ಬೇರೆ ಸ್ಥಳಗಳಲ್ಲಿ ಪ್ರೀ ರಿಲೀಸ್ ಇವೆಂಟ್ ನಡೆಸಿ ಪ್ರೇಕ್ಷಕರನ್ನು ಸೆಳೆಯುವ ತಂತ್ರಗಾರಿಕೆಯನ್ನು ನಡೆಸಿತ್ತು.
ಹೀಗೆ ಚೈನ್ನೈನಲ್ಲಿ ನಡೆದ ಇವೆಂಟ್‌ನಲ್ಲಿ ಬಾಲಿವುಡ್ ನಟಿ ಹುಮಾ ಖುರೇಷಿ (Huma Qureshi on Kiara Advani), ಈ ಸಿನಿಮಾದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿರುವ ಕಿಯಾರಾ ಅಡ್ವಾನಿ ಬಗ್ಗೆ ಹೇಳಿರುವ ಮಾತೊಂದು ಎಲ್ಲೆಡೆ ವೈರಲ್ ಆಗುತ್ತಿದೆ.
ಗರ್ಭಧರಿಸಿ ನಟಿಸಿದ ಕಿಯಾರಾ!
ಚೆನ್ನೈನಲ್ಲಿ ನಡೆದ ಇವೆಂಟ್‌ನಲ್ಲಿ ವೇದಿಕೆ ಏರಿ ಮಾತನಾಡಲು ಶುರುವಿಟ್ಟ ಹುಮಾ ಖುರೇಷಿ, ಯಶ್, ಗೀತು, ನಯನತಾರಾ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊನೆಯಲ್ಲಿ ನಟಿ ಕಿಯರಾ ಬಗ್ಗೆ ಮಾತನ್ನಾರಂಭಿಸಿದ ಹುಮಾ, ನಾನೀಗ ಸಿನಿಮಾದ ಸ್ಪಾಯ್ಲರ್ ಕೊಡುತ್ತಿಲ್ಲ, ಆದರೆ ಈ ಸಿನಿಮಾಗೆ ಕಿಯಾರಾ ಎಷ್ಟು ತನ್ನನ್ನು ಅರ್ಪಿಸಿಕೊಂಡಿದ್ದಳು ಎಂದು ತಿಳಿಯಲೆಂದು ಹೇಳುತ್ತಿದ್ದೆನೆ ಎಂದಿದ್ದಾರೆ.
ಸಿನಿಮಾದ ಒಂದು ದೃಶ್ಯದಲ್ಲಿ ಸಿಕ್ಕಾಪಟ್ಟೆ ಮಳೆ ನಡುವೆ ಚಿತ್ರಿಕರಣ ನಡೆಯಬೇಕಿತ್ತು. ಆ ದೃಶ್ಯದ ಶೂಟಿಂಗ್ ವೇಳೆ ನನಗೆ ತಲೆನೋವಿತ್ತು. ಹೀಗಾಗಿ ಸರಿಯಾಗಿ ಅಭಿನಯಿಸಲು ಆಗುತ್ತಿರಲಿಲ್ಲ.
ಆದರೆ, ಕಿಯಾರಾ ಆ ಸಮಯದಲ್ಲಿ ಆರು ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ಆ ಮಳೆಯಲ್ಲಿ ಕಲ್ಲಿನಂತೆ ನಿಂತು, ಶೂಟಿಂಗ್ನಲ್ಲಿ ಸಕ್ರೀಯವಾಗಿದ್ದಳು.
ನನಗೆ ಅವಳನ್ನು ನೋಡಿ ನನ್ನ ತಲೆನೋವು ಯಾವ ಲೆಕ್ಕವೂ ಅಲ್ಲ ಎನಿಸಿತು. ಕೇವಲ ಆ ದಿನ ಮಾತ್ರವಲ್ಲ, ನಾನು ಯಾವುದೇ ಶೂಟಿಂಗ್ಗೆ ಹೋದಾಗ ಸುಸ್ತಾಗಿದೆ ಎಂಬ ಭಾವ ಬಂದಾಗ ಕಿಯಾರಾ ನನ್ನ ಕಣ್ಮುಂದೆ ಬರುತ್ತಾಳೆ. ಅವಳ ಛಲ ಮತ್ತು ಗಟ್ಟಿ ಮನಸ್ಸು ನನ್ನನ್ನು ಆವರಿಸಿದೆ ಎಂದು ಹೊಗಳಿದ್ದಾರೆ.
ಆಗಸ್ಟ್ 26 ಕ್ಕೆ ರಿಲೀಸ್
ಟಾಕ್ಸಿಕ್ ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡರೆ, ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಶಿ, ತಾರಾ ಸುತಾರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಮಿಂಚಲಿದ್ದು ಈ ಸಿನಿಮಾ ಆಗಸ್ಟ್ 26 ರಂದು ತೆರೆಕಾಣಲಿದೆ. ಈ ಸಿನಿಮಾವನ್ನು ಗೀತು ಮೋಹನ್ ದಾಸ್ ನಿರ್ದೇಶಿಸಿದ್ದು, ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಿದ್ದಾರೆ, (ಏಜನ್ಸೀಸ್).