ತಾರಾಗಣ: ನಿತ್ಯಪ್ರಕಾಶ್, ಅಮೃತಾ, ನವೀನ್ ಪಡೀಲ್, ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್, ಪುಷ್ಪರಾಜ್, ಭೋಜರಾಜ್ ವಾಮಂಜೂರ್ ಮತ್ತಿತರರು
ನಟ ಗಣೇಶ್ ಪತ್ನಿ ಶಿಲ್ಪಾ ಚೊಚ್ಚಲ ಬಾರಿಗೆ ನಿರ್ಮಾಣಕ್ಕಿಳಿದಿರುವ ಕಾರಣ "ಪಿಚ್ಚರ್' ಬಗ್ಗೆ ಪ್ರಾರಂಭದಿಂದಲೂ ಕುತೂಹಲವಿತ್ತು. ತುಳು ಮತ್ತು ಕನ್ನಡ ಭಾಷೆಗಳಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಕೋಸ್ಟಲ್ವುಡ್ನ ಟಾನುಟಿ ಸ್ಟಾರ್ಗಳಿರುವ ಕಾರಣ ಸಿನಿಮಾ ಬಗ್ಗೆ ನಿರೀೆ ಹೆಚ್ಚಿತ್ತು. ಹಾಗಾದರೆ ಹೇಗಿದೆ "ಪಿಚ್ಚರ್'?
ಒಂದು ಮದುವೆ ಮಾಡಿಸಲು ಸಾವಿರ ಸುಳ್ಳು ಹೇಳಬೇಕು ಎಂಬ ಮಾತಿದೆ. ಆದರೆ, ಕೆಲವರು ಪ್ರೀತಿಸುವಾಗಲೇ ಸಾವಿರ ಸುಳ್ಳು ಹೇಳಿಬಿಡುತ್ತಾರೆ! ಸಿನಿಮಾ ಕನಸು ಹೊತ್ತು ಮಂಗಳೂರಿಗೆ ಆಡಿಷನ್ ನೀಡಲು ಬರುವ ದೀಪು (ನಿತ್ಯಪ್ರಕಾಶ್) ಕಣ್ಣಿಗೆ ನಿಧಿ (ಅಮೃತಾ) ಬೀಳುತ್ತಾಳೆ. ದೀಪುಗೆ ನಿಧಿ ಸಿಕ್ಕಷ್ಟೇ ಸಂತೋಷ. ಆದರೆ, ಕೌಟುಂಬಿಕ ಜೀವನದಲ್ಲಿ ಸಂತೋಷ ಕಾಣದ ನಿಧಿಗೆ ಕೂಡು ಕುಟುಂಬದ ಹುಡುಗನ ಜತೆ ಮದುವೆಯಾಗಿ, ಎಲ್ಲ ಸಂಬಂಧಗಳಲ್ಲು ಖುಷಿ ಕಾಣುವ ಆಸೆ. ಇತ್ತ ದೀಪುಗೆ ರಂಗಭೂಮಿ ಕಲಾವಿದ ಅಪ್ಪ (ನವೀನ್ ಪಡೀಲ್), ತಂಗಿಯೇ ಜೀವನ. ನಿಧಿ ಆಸೆಯ ಬಗ್ಗೆ ತಿಳಿದು, ಅಪ್ಪನಿಗೆ ವಿಷಯ ತಿಳಿಸುತ್ತಾನೆ. ಅಲ್ಲಿಂದ ಕಲಾವಿದರನ್ನೇ ಸೇರಿಸಿ ಒಂದು ನಕಲಿ ಕೂಡು ಕುಟುಂಬ ಸೃಷ್ಟಿಯಾಗುತ್ತದೆ. ಹಾಗಾದರೆ, ನಿಧಿಗೆ ದೀಪು ನಕಲಿ ಕುಟುಂಬದ ಅಸಲೀಯತ್ತು ಗೊತ್ತಾಗುತ್ತದಾ? ಮುಂದೆ? "ಪಿಚ್ಚರ್' ನೋಡಿ.
ನಿರ್ದೇಶಕ ಸಂದೀಪ್ ಬೆದ್ರ ಮತ್ತು ನಿರ್ಮಾಪಕಿ ಶಿಲ್ಪಾ ಗಣೇಶ್ ನವೀನ್ ಪಡೀಲ್, ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್, ಪುಷ್ಪರಾಜ್, ಭೋಜರಾಜ್ ವಾಮಂಜೂರ್... ಹೀಗೆ ಕೋಸ್ಟಲ್ವುಡ್ನ ಸ್ಟಾರ್ಗಳನ್ನು ಒಂದೆಡೆ ಸೇರಿಸಿದ್ದಾರೆ. ಹೀಗಾಗಿ ಬಿಗ್ಸ್ಕ್ರೀನ್ ಮೇಲೆ ದಿಗ್ಗಜರ ಜುಗಲ್ಬಂದಿ ನೋಡುವ ಥ್ರಿಲ್ ಪ್ರೇಕ್ಷಕರಿಗೆ. ಜತೆಗೆ ಸ್ವಲ್ಪ ಸುದೀರ್ ಅಂತನ್ನಿಸಿದರೂ, ನೋಡಿಸಿಕೊಂಡು ಹೋಗುತ್ತದೆ. ತುಳು ಚಿತ್ರರಂಗ ಕಾಮಿಡಿ ಪ್ರಧಾನ ಚಿತ್ರಗಳಿಂದಲೇ ಹೆಚ್ಚು ಹೆಸರುವಾಸಿ. ಹೀಗಿರುವಾಗ ಈ "ಪಿಚ್ಚರ್'ನಲ್ಲಿ ಎಲ್ಲ ಎಮೋಷನ್ಗಳನ್ನೂ ದಾಟಿಸುವ ಪ್ರಯತ್ನ ಮಾಡಿದ್ದಾರೆ ಸಂದೀಪ್. ದಿಗ್ಗಜರ ನಡುವೆ ನಿತ್ಯಪ್ರಕಾಶ್, ಅಮೃತಾ ಕೂಡ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ಸಂಗೀತ ಕಥೆಗೆ ಪೂರಕವಾಗಿದೆ. ಹೀಗಾಗಿ ಈ ಫ್ಯಾಮಿಲಿ ಎಂಟರ್ಟೇನರ್ "ಪಿಚ್ಚರ್'ನ ಒಮ್ಮೆ ನೋಡಲಡ್ಡಿಯಿಲ್ಲ.