Samyukta Hornad  
ಸ್ಯಾಂಡಲ್‌ವುಡ್

ಆನೆ-ಮಾನವ ಸಂಘರ್ಷದ ಕತೆಯೊಂದಿಗೆ ಡೈರೆಕ್ಟರ್​ ಆದ ಸಂಯುಕ್ತಾ ಹೊರನಾಡ್​; Crossing Paths ಡಾಕ್ಯುಮೆಂಟರಿ ಸಿನಿಮಾದ ಫಸ್ಟ್​ ಲುಕ್​ ರಿಲೀಸ್

Samyukta Hornad  

Crossing Paths a documentary Cinema: 

ಲೈಫು ಇಷ್ಟೇನೆ, ಮ್ಯಾಕ್ಸ್​​, ಬರ್ಫಿ, ಹೊಂದಿಸಿ ಬರೆಯಿರಿ ಸೇರಿದಂತೆ ಕನ್ನಡದ ಹಲವು ಸಿನಿಮಾ ಮೂಲಕ ನಟಿಯಾಗಿ ಚಂದನವನದಲ್ಲಿ ಮಿಂಚಿದ್ದ ಸಂಯುಕ್ತಾ ಹೊರನಾಡ್,​ ಸದ್ಯ ನಿರ್ದೇಶಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ.  

ವಿಶ್ವ ಆನೆಗಳ ದಿನವಾದ ಇಂದು ಅವರ ಹೊಸ ಡಾಕ್ಯುಮೆಂಟರಿ ಸಿನಿಮಾ 'ಕ್ರಾಸಿಂಗ್​ ಪಾತ್ಸ್ 

Some borders, are never drawn.

only shared

'​​ನ ಗ್ಲಿಂಪ್ಸ್​​ನ್ನ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ. 

ಇದೊಂದು ಮಾನವ ಮತ್ತು ಆನೆ ಸಂಘರ್ಷದ ಸಾಕ್ಷ್ಯ ಸಿನಿಮಾವಾಗಿದ್ದು, ಟೆಕಿಯಾನ್​ ಸಂಸ್ಥೆಯ ಸಿಎಸ್‌ಆರ್‌ ಇನಿಶಿಯೇಟಿವ್ ಜೊತೆಗೆ, ಆ ರೋಚಾ ಇಂಡಿಯಾ, ಕರ್ನಾಟಕ ಅರಣ್ಯ ಇಲಾಖೆ  ಸಂಪಿಗೆ ಫಿಲ್ಮ್ಸ್ ಪ್ರೊಡಕ್ಷನ್ ಸಹಯೋಗ ನೀಡಿವೆ ಎನ್ನಲಾಗಿದೆ. 

  ಜನರಿಗೆ ನಾನು ನಟಿಯಾಗಿ ಪರಿಚಯ. ಆದರೆ, ಚಿತ್ರ ನಿರ್ಮಾಣವು ನನಗೆ ಸಾಕಷ್ಟು ಆಸಕ್ತಿಯನ್ನುಂಟು ಮಾಡಿದೆ. ನಾನು ನನ್ನ ತಂದೆಯ ಜೊತೆ ಅಸಿಸ್ಟೆಂಟ್​ ಡೈರೆಕ್ಟರ್​ ಆಗಿ ಕೆಲಸ ಮಾಡಿದ್ದೆ. ನಿರ್ದೇಶಕಿಯಾಗಬೇಕು ಎನ್ನುವ ಆಸೆಯಿತ್ತು.  ಇದಕ್ಕೆ ಪರಿಸರದ ಕತೆಯೇ ಒಳ್ಳೆ ಆರಂಭ ಎಂದು ನಾನು ಭಾವಿಸಿದ್ದೆ' ಎಂದು ಸಂಯುಕ್ತಾ ಹೊರನಾಡ್​ ಹೇಳಿದರು. 

ಮಾನವ-ಆನೆ ಸಂಘರ್ಷದ ಬಗ್ಗೆ ಡಾಕ್ಯುಮೆಂಟರಿ

ಮಾನವನ ಚಟುವಟಿಕೆ ಹಿರಿದಾಗುತ್ತಾ..ಪ್ರಾಣಿಗಳ ವಾಸಸ್ಥಾನ ಕಿರಿದಾಗುತ್ತಿದೆ. ಹೀಗಾಗಿ ಮಾನವ ಹಾಗೂ ಪ್ರಾಣಿಗಳ ಸಂಘರ್ಷ ಉಂಟಾಗುತ್ತಿದೆ. ಇದು ಮಾನವ ಸಮುದಾಯ ಹಾಗೂ ಪ್ರಾಣಿ ಸಂಕುಲದ  ಮಧ್ಯೆ ಗಂಭೀರ ಪರಿಣಾಮ ಬೀರುತ್ತಿದೆ. ಈ ಚಿತ್ರವು ಸಂಘರ್ಷದ ಬಗ್ಗೆ ಹಾಗೂ ಕಂಡುಕೊಳ್ಳಬೇಕಾದ ಸುಸ್ಥಿರ ಮಾರ್ಗದ ತುರ್ತು ಅಗತ್ಯಗಳ ಬಗ್ಗೆ  ಹೇಳುತ್ತದೆ. 

 ಸಂಯುಕ್ತಾ ಹೇಳಿದ್ದಿಷ್ಟು

ಕ್ರಾಸಿಂಗ್ ಪಾತ್ಸ್​​ ಸಿನಿಮಾ ಮೂಲಕ ನಾನು ನಿರ್ದೇಶಕಿಯಾಗಿ  ಹೊರಹೊಮ್ಮುತ್ತಿದ್ದೇನೆ. ಇದು ಸಿನಿಮಾಸ ಮೊದಲ ಲುಕ್​.  ಇದು ಮಾನವ-ಪ್ರಾಣಿ ಸಂಘರ್ಷ ಮತ್ತು ಸಹಬಾಳ್ವೆಯ ಹುಡುಕಾಟದ ಕುರಿತಾದ ಸಾಕ್ಷ್ಯಚಿತ್ರವಾಗಿದೆ. ಕೆಲವು ಗಡಿಗಳನ್ನು ಎಂದಿಗೂ ಎಳೆಯಲಾಗುವುದಿಲ್ಲ. ಬದಲಾಗಿ ಹಂಚಿಕೊಲ್ಳಲಾಗುತ್ತದೆ.  ನನಗೆ  ಸುಂದರ, ಸೃಜನಶೀಲ ಕಲಾವಿದರು ಸಿಕ್ಕಿದ್ದಾರೆ. ಅವರೆಲ್ಲರೂ ಸಂಪೂರ್ಣ ಸಹಜ ನಟರು. ಒಂದೇ ಒಂದು ರೀಟೇಕ್ ಕೂಡ ತೆಗೆದುಕೊಂಡಿಲ್ಲ. ಒಟ್ಟಾರೆಯಾಗಿ... ಆನೆಗಳು, ನಾಯಿಗಳು, ಕಾಡುಗಳು, ಮನುಷ್ಯರು ಮತ್ತು ಸಾಕಷ್ಟು ಓಡಾಟದ ನಡುವೆ ನಾವು ಒಂದು ಸಿನಿಮಾ ಮಾಡಿದೆವು ಎಂದು ಹಲವರಿಗೆ ಧನ್ಯವಾದ ಹೇಳಿದ್ದಾರೆ. 
ಆಗಸ್ಟ್​ 12 ಅನ್ನು ವಿಶ್ವ ಆನೆಗಳ ದಿನ ಎಂದು ಆಚರಿಸಲಾಗುತ್ತದೆ. ಏಷ್ಯಾ ಮತ್ತು ಆಫ್ರಿಕನ್​ ಆನೆಗಳ ರಕ್ಷಣೆ ಮತ್ತು ಅವು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುವುದು ಇದರ  ಉದ್ದೇಶ. 2012ರಿಂದ ಈ ಆಚರಣೆಯನ್ನು ಪಾಲನೆ ಮಾಡಲಾಗುತ್ತದೆ, (ಏಜೆನ್ಸೀಸ್).