ಉಗ್ರಾಯುಧಮ್ 
ಸ್ಯಾಂಡಲ್‌ವುಡ್

Ugrayudham - ರೋರಿಂಗ್​ ರುದ್ರರ ಉಗ್ರಾಯುಧಮ್​

Ugrayudham -
"ಬಘೀರ' ಚಿತ್ರದ ಬಳಿಕ ನಟ ಶ್ರೀಮುರಳಿ ಸದ್ಯ ಎರಡು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಪುನೀತ್​ ರುದ್ರನಾಗ್​ ಆ್ಯಕ್ಷನ್​&ಕಟ್​ ಹೇಳುತ್ತಿರುವ "ಉಗ್ರಾಯುಧಮ್​' ಮತ್ತು ಹಾಲೇಶ್​ ಕೊಗುಂಡಿ ನಿರ್ದೇಶಿಸುತ್ತಿರುವ "ಪರಾಕ್​'. "ಉಗ್ರಾಯುಧಮ್​'ನಲ್ಲಿ ಐತಿಹಾಸಿಕ ಪಾತ್ರಗಳ ಸುತ್ತ ನಡೆಯುವ ಕಾಲ್ಪನಿಕ ಕಥೆಯಾಗಿದ್ದು, "ಕಾಂತಾರ' ಖ್ಯಾತಿಯ ಸಪ್ತಮಿ ಗೌಡ ನಾಯಕಿಯಾಗಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ "ನಿದ್ರಾದೇವಿ ನೆಕ್ಸ್ಟ್​ ಡೋರ್​' ನಿರ್ಮಿಸಿದ್ದ ಜಯರಾಮ್​ ದೇವಸಮುದ್ರ ಸುರಮ್​ ಮೂವೀಸ್​ ಬ್ಯಾನರ್​ನಲ್ಲಿ ಹಣ ಹೂಡಿದ್ದಾರೆ. ಈಗಾಗಲೇ ಚಿತ್ರದ ಶೇಕಡಾ 40ರಷ್ಟು ಮಾತಿನ ಭಾಗದ ಶೂಟಿಂಗ್​ ಪೂರ್ಣಗೊಂಡಿದ್ದು, ಇತ್ತೀಚೆಗಷ್ಟೆ ಬೆಂಗಳೂರಿನ ರಾಕ್​ಲೈನ್​ ಸ್ಟುಡಿಯೋನಲ್ಲಿ ರಾಜರ ಆಸ್ಥಾನದ ಬೃಹತ್​ ಸೆಟ್​ಗಳನ್ನು ನಿರ್ಮಿಸಿ, 400ಕ್ಕೂ ಅಧಿಕ ಸಹ-ಕಲಾವಿದರೊಂದಿಗೆ 12 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ನಿರ್ದೇಶಕ ಪುನೀತ್​ ರುದ್ರನಾಗ್​, "ಕೊನೆಯ ದಿನ ಮೂರು ಕಾಲ್​ಶೀಟ್​ನಲ್ಲಿ ಸತತ 24 ತಾಸುಗಳ ಚಿತ್ರೀಕರಣ ಮಾಡಿದೆವು. ಶ್ರೀಮುರಳಿ ಸರ್​ ಸೇರಿ ಇಡೀ ತಂಡ ತುಂಬ ಜೋಶ್​ನಲ್ಲಿ ಕೆಲಸ ಮಾಡುತ್ತಿದ್ದೇವೆ. ಮಳೆಗಾಲವಿರುವ ಕಾರಣ ಸದ್ಯ ಒಳಾಂಗಣದಲ್ಲಿ ಸೆಟ್​ಗಳಲ್ಲಿ ನಡೆಯುವ ಭಾಗದ ಚಿತ್ರೀಕರಣ ಮಾಡಿದ್ದೇವೆ. ಸೆಪ್ಟೆಂಬರ್​ನಲ್ಲಿ ಕನಕಪುರದ ಸಂಗಮ ಸುತ್ತಮುತ್ತ 15 ದಿನಗಳ ಶೂಟಿಂಗ್​ ಪ್ಲ್ಯಾನ್​ ಮಾಡಿಕೊಂಡಿದ್ದೇವೆ. ಅಲ್ಲಿ ಸದ್ಯ ಸೆಟ್​ ಕೆಲಸಗಳು ನಡೆಯುತ್ತಿವೆ. ಬಳಿಕ ಮಳೆ ನಿಂತ ಬಳಿಕ ಅಕ್ಟೋಬರ್​ನಿಂದ ಡಿಸೆಂಬರ್​ವರೆಗೆ 60 ದಿನಗಳ ಕಾಲ ತೀರ್ಥಹಳ್ಳಿಯ ಕಾಫಿ ತೋಟದಲ್ಲಿ ಚಿತ್ರೀಕರಣ ನಡೆಸಲಿದ್ದೇವೆ. ಸಿನಿಮಾ ಅಂದುಕೊಂಡಂತೆಯೇ ತುಂಬ ಚೆನ್ನಾಗಿ ಮೂಡಿಬರುತ್ತಿದೆ' ಎಂದು ಸಂತಸ ಹಂಚಿಕೊಳ್ಳುತ್ತಾರೆ. ಈ ಹಿಂದೆ "ಕೆಜಿಎಫ್​ ಚಾಪ್ಟರ್​ 1', "ಎಕ್ಕ' ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಪುನೀತ್​, "ಉಗ್ರಾಯುಧಮ್​' ಮೂಲಕ ಡೈರೆಕ್ಟರ್​ ಕ್ಯಾಪ್​ ಧರಿಸಿದ್ದಾರೆ. ಈ ಸಿನಿಮಾ ಬಿಡುಗಡೆಯ ಬಳಿಕ ಅವರು "ಸೈನಿಕ 2' ಚಿತ್ರದಲ್ಲಿ ತೊಡಗಲಿದ್ದಾರೆ.

ಕೋಟ್​:

ಪುನೀತ್​ ರುದ್ರನಾಗ್​, ನಿರ್ದೇಶಕ